ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಸಿಸಿಟಿವಿ ಕಣ್ಗಾವಲು

|
Google Oneindia Kannada News

ಧಾರವಾಡ. ಮಾ.4 : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಟ್ಟಡ ಇನ್ನುಮುಂದೆ ಸಿಸಿಟಿವಿ ಕಣ್ಗಾವಲಿನಲ್ಲಿರುತ್ತದೆ. ಪಾಲಿಕೆಯಲ್ಲಿ ಅಧಿಕಾರಿಗಳ ಆಟಾಟೋಪಗಳ ಮೇಲೆ ಹದ್ದಿನ ಕಣ್ಣಿಡಲು ಪಾಲಿಕೆಯಲ್ಲಿ ಸಿಸಿಟಿವಿ ಆಳವಡಿಸಲಾಗಿದೆ. ಇದರಿಂದಾಗಿ ಲಂಚಕ್ಕೆ ಕೈ ಒಡ್ಡುವುದು, ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವುದು ಇತ್ಯಾದಿ ಕಡಿವಾಣ ಬೀಳಲಿದೆ.

ಮಹಾನಗರ ಪಾಲಿಕೆ ಅಧಿಕಾರಿಗಳು ಲಂಚ ಕೇಳುತ್ತಾರೆ, ಸಕಾಲದಲ್ಲಿ ಅರ್ಜಿ ವಿಲೇವಾರಿ ಮಾಡದೆ ಸತಾಯಿಸುತ್ತಾರೆ ಮುಂತಾದ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆಯಲ್ಲಿ ಸಿಸಿಟಿವಿ ಆಳವಡಿಸಲಾಗಿದೆ. ಇದರಿಂದ ಪಾಲಿಕೆಯ ವಿವಿಧ ಕಚೇರಿಗಳಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ದಾಖಲಾಗಲಿದೆ.

ಮಹಾನಗರ ಪಾಲಿಕೆಯ ಅಧಿಕಾರಿಗಳು ಕೆಲಸ ಮಾಡಿಕೊಡಲು ಕಚೇರಿಯಲ್ಲಿಯೇ ಲಂಚ ಪಡೆಯುತ್ತಾರೆ ಎನ್ನುವ ಆರೋಪ ಕೇಳಿಬಂದಿತ್ತು. ಇದಕ್ಕೆ ಸಾಕ್ಷಿ ಎಂಬಂತೆ, ಪಾಲಿಕೆಯ ಅಧಿಕಾರಿಗಳು ಲಂಚ ಪಡೆಯುವಾಗ ಕಚೇರಿಯಲ್ಲಿಯೇ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದರು. ಆದ್ದರಿಂದ ಪಾಲಿಕೆಯ ಪ್ರಮುಖ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.[ಹುಬ್ಬಳ್ಳಿ ಸಮಾವೇಶದಲ್ಲಿ ಮೋದಿ ಏನು ಹೇಳಿದರು]

ಕೆಲವು ದಿನಗಳ ಹಿಂದೆ ಪಾಲಿಕೆ ಆಯುಕ್ತರ ಕಚೇರಿ ಮುಂದೆ, ಗಾರ್ಡನ್ ಬಳಿ, ಕಾಂಪೌಂಡ್ ಗೋಡೆಯ ಎರಡು ಕಡೆಗಳಲ್ಲಿ, ಬೇಂದ್ರೆ ಸಭಾ ಭವನ, ಕಂಟ್ರೋಲ್ ರೂಮ್, ಲೆಕ್ಕಪತ್ರ ವಿಭಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಇದೀಗ ನಗರ ಯೋಜನಾ ಶಾಖೆ ಕಚೇರಿಯಲ್ಲಿ ಹಾಗೂ ನಗರ ಉಪ ನಿರ್ದೇಶಕರ ಕಚೇರಿಯಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು, ಇನ್ನಿತರ ವಿಭಾಗಗಳಲ್ಲಿಯೂ ಕ್ಯಾಮೆರಾ ಅಳವಡಿಸಲು ಯೋಜನೆ ರೂಪಿಸಲಾಗಿದೆ. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಪಾಲಿಕೆಗೆ ಸಿಸಿಟಿವಿ ಕಣ್ಗಾವಲು

ಪಾಲಿಕೆಗೆ ಸಿಸಿಟಿವಿ ಕಣ್ಗಾವಲು

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು ಪಾಲಿಕೆ ಕಚೇರಿಗಳು ಇನ್ನುಮುಂದೆ ಕ್ಯಾಮೆರಾ ಕಣ್ಗಾವಲಿನಲ್ಲಿರುತ್ತದೆ. ಪಾಲಿಕೆಯಲ್ಲಿ ಅಧಿಕಾರಿಗಳ ಆಟಾಟೋಪಗಳ ಮೇಲೆ ಹದ್ದಿನ ಕಣ್ಣಿಡಲು ಪಾಲಿಕೆಯಲ್ಲಿ ಸಿಸಿಟಿವಿ ಆಳವಡಿಸಲಾಗಿದೆ. ಕೆಲವು ದಿನಗಳ ಹಿಂದೆ ಪಾಲಿಕೆ ಆಯುಕ್ತರ ಕಚೇರಿ ಮುಂದೆ, ಗಾರ್ಡನ್ ಬಳಿ, ಕಾಂಪೌಂಡ್ ಗೋಡೆಯ ಎರಡು ಕಡೆಗಳಲ್ಲಿ, ಬೇಂದ್ರೆ ಸಭಾ ಭವನ, ಕಂಟ್ರೋಲ್ ರೂಮ್, ಲೆಕ್ಕಪತ್ರ ವಿಭಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಇದೀಗ ನಗರ ಯೋಜನಾ ಶಾಖೆ ಕಚೇರಿಯಲ್ಲಿ ಹಾಗೂ ನಗರ ಉಪ ನಿರ್ದೇಶಕರ ಕಚೇರಿಯಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು ಅಧಿಕಾರಿಗಳ ಮೇಲೆ ಕ್ಯಾಮೆರಾ ಮೂಲಕ ಕಣ್ಣಿಡಲಾಗಿದೆ.

ಸಕ್ಕರೆ ಸಚಿವರಿಗೆ ರೈತರಿಂದ ಗಡುವು

ಸಕ್ಕರೆ ಸಚಿವರಿಗೆ ರೈತರಿಂದ ಗಡುವು

ಪ್ರತಿ ಟನ್ ಕಬ್ಬಿಗೆ 2500 ದರ ನೀಡದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಿವಾನಂದ ಗುರುಮಠ ಬೆಳಗಾವಿಯಲ್ಲಿ ಹೇಳಿದ್ದಾರೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಸಕ್ಕರೆ ಸಚಿವರ ಮನೆಯ ಮುಂದೆ ಧರಣಿ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಸಕ್ಕರೆ ಕಾರ್ಖಾನೆಗಳಿಂದ 2500 ಹಾಗೂ ಸರ್ಕಾರದ ಪ್ರೋತ್ಸಾಹ ಧನವಾಗಿ 150 ನೀಡಲಾಗುವುದು ಎಂದು ಸರ್ಕಾರ, ಸಕ್ಕರೆ ಸಚಿವರು ಭರವಸೆ ನೀಡಿದ್ದರು. ಸರ್ಕಾರದಿಂದ 150 ಪ್ರೋತ್ಸಾಹ ಧನ ಬಿಡುಗಡೆಯಾಗುತ್ತಿದೆ. ಆದರೆ ಕಾರ್ಖಾನೆಗಳಿಂದ ಪ್ರತಿಟನ್‌ಗೆ 2500 ಕೊಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಗುರುಮಠ ದೂರಿದರು.

ರಸ್ತೆಗಳ ಅಭಿವೃದ್ಧಿ

ರಸ್ತೆಗಳ ಅಭಿವೃದ್ಧಿ

ಪ್ರಧಾನಮಂತ್ರಿ ಅವರ ವಿವಿಧ ಯೋಜನೆಯಡಿಯಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 140 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. 3.5 ಕೋಟಿಯಲ್ಲಿ ಉತ್ತುಗನಹಳ್ಳಿ-ಮಲ್ಲದೂರು ರಸ್ತೆ, 7 ಕೋಟಿ ವೆಚ್ಚದಲ್ಲಿ ಹೆಗ್ಗೊಡ್ಲು- ಬಣಕಲ್ ರಸ್ತೆ, ಚಿಕ್ಕಮಗಳೂರು ತಾಲೂಕಿನ ತೇಗೂರು-ಅಂಬಳೆ ರಸ್ತೆಗೆ 5.58 ಕೋಟಿ ಪಾದುಮನೆ ಬಳಿ ಸೇತುವೆ ನಿರ್ಮಾಣಕ್ಕೆ 1.45 ಕೋಟಿ, ಕಡೂರಿನ ಯಗಟಿ ಮರವಂಜಿ ರಸ್ತೆಗೆ 4.30 ಕೋಟಿ ಸೇರಿದಂತೆ ಪ್ರಥಮ ಹಂತದಲ್ಲಿ 72 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.

ಕುಡಿಯುವ ನೀರಿಗಾಗಿ 1100 ಕೋಟಿ ಅನುದಾನ

ಕುಡಿಯುವ ನೀರಿಗಾಗಿ 1100 ಕೋಟಿ ಅನುದಾನ

ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಪಾವಗಡ ತಾಲೂಕಿನ ಗ್ರಾಮಗಳಿಗೆ ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಕುಡಿಯುವ ನೀರು ಒದಗಿಸಲು 1100 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದ್ದಾರೆ. ಚಿತ್ರದುರ್ಗ ತಾಲೂಕಿನ ಮುದ್ದಾಪುರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತುರುವನೂರು ಹೋಬಳಿಯ 9, ಚಳ್ಳಕೆರೆ ತಾಲೂಕಿನ 51 ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಹಿಂದೆ 9 ಕೆರೆಗಳಿಗೆ ಮಾತ್ರ ನೀರು ತುಂಬಿಸಲು ಯೋಜಿಸಲಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆ ಪರಿಷ್ಕರಿಸಿ ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಿರುವುದರಿಂದ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು ತಾಲೂಕಿಗೆ ಭದ್ರಾ ನೀರು ಬರಲಿದೆ ಎಂದು ತಿಳಿಸಿದರು.

ಕೊಡಗು ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ

ಕೊಡಗು ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ

ಕೊಡಗು ಜಿಲ್ಲೆಯ ಅನೇಕ ವರ್ಷಗಳ ಬೇಡಿಕೆ ಈಡೇರಿದ್ದು, ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 28 ಎಕರೆ ಜಾಗದಲ್ಲಿ 136 ಕೋಟಿ ಮೊತ್ತದಲ್ಲಿ ಕಾಲೇಜು ನಿರ್ಮಾಣಗೊಳ್ಳಲಿದ್ದು, 18 ತಿಂಗಳಲ್ಲಿಯೇ ಕಟ್ಟಡದ ಕಾಮಗಾರಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಕರ್ಣಂಗೇರಿ, ಹೆಬ್ಬಟ್ಟಗೇರಿ ಗ್ರಾಮಗಳಿಗೆ ಸೇರಿದ 28 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಮುಖ್ಯಮಂತ್ರಿ ಸಿದ್ದರಾಮಯ್ಯ ರು. 136 ಕೋಟಿ ರುಪಾಯಿ ಅನುದಾನ ನೀಡಿದ್ದಾರೆ.

English summary
Super fast news bites from interior Karnataka : Closed Circuit Television (CCTV) installed in Hubli-Dharwad Municipal Corporation (HDMC)office. TO bring transparency in administrative functioning CCTV installed in office. Other Karnataka news in Super fast news bites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X