ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಸೌಖ್ಯ ಆಸ್ಪತ್ರೆಗೆ ದಾಖಲಾದ ಮದನಿ

|
Google Oneindia Kannada News

ಬೆಂಗಳೂರು, ಜು. 15 : ಬೆಂಗಳೂರು ಸರಣಿ ಬಾಂಬ್ ಸ್ಫೋಟದ ರುವಾರಿ ಅಬ್ದುಲ್ ನಾಸಿರ್ ಮದನಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿರುವ ಹಿನ್ನೆಯಲ್ಲಿ ಸೋಮವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ವೈಟ್‌ ಫೀಲ್ಡ್‌ ಸಮೀಪದ ಸೌಖ್ಯ ಆಸ್ಪತ್ರೆಯಲ್ಲಿ ಮದನಿ ಒಂದು ತಿಂಗಳು ಚಿಕಿತ್ಸೆ ಪಡೆಯಲಿದ್ದಾರೆ.

ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಜಾಮೀನು ನೀಡಬೇಕೆಂದು ಮದನಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿತ್ತು. ಸೋಮವಾರ ಸಂಜೆ ತೀರ್ಪಿನ ಪ್ರತಿ ಪರಪ್ಪನ ಅಗ್ರಹಾರಕ್ಕೆ ತಲುಪಿದ್ದು, ಮದನಿಯನ್ನು ಬಿಡುಗಡೆ ಮಾಡಲಾಗಿದೆ. [ಮದನಿಗೆ ಸುಪ್ರೀಂ ಜಾಮೀನು ]

ಒಂದು ತಿಂಗಳ ಷರತ್ತುಬದ್ಧ ಜಾಮೀನನ ಅವಧಿಯಲ್ಲಿ ಮದನಿ ಬೆಂಗಳೂರು ಬಿಟ್ಟು ಹೋಗುವಂತಿಲ್ಲ ಎಂದು ನ್ಯಾಯಾಲಯ ಸೂಚನೆ ನೀಡಿದೆ. ಆದ್ದರಿಂದ ವೈಟ್‌ ಫೀಲ್ಡ್‌ ಸಮೀಪದ ಸೌಖ್ಯ ಆಸ್ಪತ್ರೆಯಲ್ಲಿ ಮದನಿ ಒಂದು ತಿಂಗಳು ಚಿಕಿತ್ಸೆ ಪಡೆಯಲಿದ್ದಾರೆ. ಮದನಿ ಮೇಲೆ ಪೊಲೀಸರು ಕಣ್ಗಾವಲು ಇರಿಸಲು ಕೋರ್ಟ್ ಅನುಮತಿ ನೀಡಿದೆ. ಕರ್ನಾಟಕದ ಇತರ ಜಿಲ್ಲಾಸುದ್ದಿಗಳು

ಪರಪ್ಪನ ಅಗ್ರಹಾರದಿಂ ಮದನಿ ಬಿಡುಗಡೆ

ಪರಪ್ಪನ ಅಗ್ರಹಾರದಿಂ ಮದನಿ ಬಿಡುಗಡೆ

ಬೆಂಗಳೂರು ಸರಣಿ ಬಾಂಬ್ ಸ್ಫೋಟದ ರುವಾರಿ ಅಬ್ದುಲ್ ನಾಸಿರ್ ಮದನಿಗೆ ಸೋಮವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ವೈಟ್‌ ಫೀಲ್ಡ್‌ ಸಮೀಪದ ಸೌಖ್ಯ ಆಸ್ಪತ್ರೆಯಲ್ಲಿ ಮದನಿ ಒಂದು ತಿಂಗಳು ಚಿಕಿತ್ಸೆ ಪಡೆಯಲಿದ್ದಾರೆ. ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯಲು ಜಾಮೀನು ನೀಡಬೇಕೆಂಬ ಮದನಿ ಪರ ವಕೀಲರ ವಾದವನ್ನು ಪುರಸ್ಕರಿಸಿದ್ದ ಸುಪ್ರೀಂಕೋರ್ಟ್ ಒಂದು ತಿಂಗಳ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಬಾಕಿ ಪಾವತಿ ಮಾಡಲು ಇಂದು ಕೊನೆಯ ದಿನ

ಬಾಕಿ ಪಾವತಿ ಮಾಡಲು ಇಂದು ಕೊನೆಯ ದಿನ

ಶಾಸಕ ಡಿ.ಬಿ.ಇನಾಂದಾರ ಅಧ್ಯಕ್ಷರಾಗಿರುವ ಬೈಲಹೊಂಗಲ ತಾಲೂಕಿನ ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ರೈತರಿಗೆ 35.51 ಕೋಟಿ ಬಾಕಿ ನೀಡಲು ಮಂಗಳವಾರ ಕೊನೆ ದಿನವಾಗಿದೆ. ಮೂರು ದಿನಗಳ ಹಿಂದೆ ಬೈಲಹೊಂಗಲ ತಹಸೀಲ್ದಾರರು ಕಾರ್ಖಾನೆಗೆ ಬೀಗ ಜಡಿದು ಜಪ್ತಿ ಮಾಡಲು ಹೋದಾಗ ಮೂರು ದಿನಗಳವರೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಇಂದು ಬಾಕಿ ಪಾವತಿ ಮಾಡದಿದ್ದರೆ ಕಾರ್ಖನೆಗೆ ಬೀಗ ಜಡಿಯುವ ಸಾಧ್ಯತೆ ಇದೆ.

ನಿರ್ಗುಣ ಯೋಗಕೇಂದ್ರದಲ್ಲಿ ಗುರುವಂದನೆ

ನಿರ್ಗುಣ ಯೋಗಕೇಂದ್ರದಲ್ಲಿ ಗುರುವಂದನೆ

ಬೆಂಗಳೂರಿನ ಕೋರಮಂಗಲದ ನಿರ್ಗುಣ ಮಂದಿರ ಯೋಗಕೇಂದ್ರದಲ್ಲಿ ನಡೆದ ಗುರುಪೌರ್ಣಿಮೆ ಕಾರ್ಯಕ್ರಮದಲ್ಲಿ ಕೆ.ಮಹದೇವಯ್ಯ ಮತ್ತು ಜಿ.ಬಾಬು ಅವರಿಗೆ ಯೋಗ ಆಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ವಾಮಿ ಸುಖಭೋದಾನಂದ ಸ್ವಾಮಿ, ತಾಯಿ ಶ್ರೀಮತಿ ರುಕ್ಮಿಣಿ ಮೂರ್ತಿ ಪ್ರಶಸ್ತಿಗಳನ್ನು ನೀಡಿದರು.

ಕಾಡಾನೆಗಳ ಹಾವಳಿಯಿಂದ ನಷ್ಟ

ಕಾಡಾನೆಗಳ ಹಾವಳಿಯಿಂದ ನಷ್ಟ

ಕೊಡಗು ಜಿಲ್ಲೆಯ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಕಲ್ಲೂರು ಗ್ರಾಮಗಳಲ್ಲಿ ಕಾಡಾನೆಗಳು ಮೂರು ದಿನಗಳಿಂದ ಬೀಡುಬಿಟ್ಟಿದ್ದು, ಬೆಳೆಗಳನ್ನು ನಾಶಮಾಡಿ ರೈತರಿಗೆ ನಷ್ಟ ಉಂಟುಮಾಡಿವೆ. ಗ್ರಾಮಕ್ಕೆ ಸಹ ನುಗ್ಗಿದ ಆನೆಗಳ ಹಿಂಡು, ಮನೆಯ ಮುಂಭಾಗದ ಗೇಟ್‌ ಗಳನ್ನು ಮುರಿದು ಹಾಕಿವೆ. ಕಳೆದ ಮೂರು ದಿನಗಳಿಂದ ಆನೆಗಳು ಗ್ರಾಮದಲ್ಲಿ ಬೀಡುಬಿಟ್ಟಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

6ನೇತರಗತಿ ಪ್ರವೇಶ ಅವಧಿ ವಿಸ್ತರಣೆ

6ನೇತರಗತಿ ಪ್ರವೇಶ ಅವಧಿ ವಿಸ್ತರಣೆ

ಕೊಪ್ಪಳ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿಷ್ಠಿತ ಶಾಲೆಯಲ್ಲಿ 6ನೇ ತರಗತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ದಾಖಲಿಸಲು ಅರ್ಜಿ ಸ್ವೀಕೃತಿಯ ಅವಧಿಯನ್ನು ಜು. 21 ರವರೆಗೆ ವಿಸ್ತರಿಸಲಾಗಿದೆ. ಬೇಥಲ್ ಪ್ರೌಢಶಾಲೆ, ವಿರುಪಾಪುರ ನಗರ, ಗಂಗಾವತಿ ಶಾಲೆಗೆ ಕಡಿಮೆ ಅರ್ಜಿಗಳು ಸ್ವೀಕೃತಗೊಂಡಿರುವ ಕಾರಣಕ್ಕೆ ಅವಧಿ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದರಾಗಿರಬೇಕು. ತಹಶೀಲ್ದಾರರವರಿಂದ ಪಡೆದ ಜಾತಿ, ಆದಾಯ ಪ್ರಮಾಣ ಪತ್ರದ ಧೃಡೀಕೃತ ನಕಲು ಪ್ರತಿ ಲಗತ್ತಿಸಬೇಕು. ಅರ್ಜಿ ಸಲ್ಲಿಸಲು ಜು.21 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆಗಳನ್ನು ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಿಂದ ಪಡೆದು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ಆಯಾ ತಾಲೂಕಿನ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕರಣೆಯಲ್ಲಿ ಮನವಿ ಮಾಡಲಾಗಿದೆ.

ತರಬೇತಿ ಕಾರ್ಯಗಾರ ಉದ್ಘಾಟನೆ

ತರಬೇತಿ ಕಾರ್ಯಗಾರ ಉದ್ಘಾಟನೆ

ಸಾಕ್ಷರ ಭಾರತ್ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮತ್ತು ಸರ್ಕಾರೇತರ ತಾಲ್ಲೂಕು ಸಂಯೋಜಕರು ಹಾಗೂ ಜಿಲ್ಲಾ ಸಂಯೋಜಕರುಗಳಿಗೆ ಜು. 15 ರಿಂದ 17 ರವರೆಗೆ ಮೈಸೂರಿನ ಓ.ಡಿ.ಪಿ. ಬನ್ನಿಮಂಟಪ ಬಿ ಲೇಔಟ್ ನಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇಂದು ಉದ್ಘಾಟನೆಗೊಂಡಿದೆ.
ಲೋಕಶಿಕ್ಷಣ ಶಿಕ್ಷಣ ನಿರ್ದೇಶನಾಲಯ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ತುಕಾರಾಮ್, ವಯಸ್ಕರ ಶಿಕ್ಷಣಾಧಿಕಾರಿ ಡಾ.ಕೆ.ಶಂಕರೇಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

English summary
Super fast news bites from interior Karnataka : 2008 Bangalore serial blasts accused and Kerala-based People’s Democratic Party (PDP) founder-chairman Abdul Nasser Maudany released from the Central Prison, Bangalore on Monday night, after the Supreme Court granted him one-month bail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X