ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗುಂಬೆಯಲ್ಲಿ ಲೇಡಿಸ್‌ ಹಾಸ್ಟೆಲ್‌ಗೆ ನುಗ್ಗಿದ ಪೇದೆ

|
Google Oneindia Kannada News

ಶಿವಮೊಗ್ಗ, ಆ, 22 : ಮಧ್ಯರಾತ್ರಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿದ ನಕ್ಸಲ್‌ ನಿಗ್ರಹ ದಳ (ಎಎನ್‌ಎಫ್‌)ಪೇದೆಗೆ ಈಗ ಪೊಲೀಸ್‌ ಸತ್ಕಾರ. ಪಾನಮತ್ತನಾಗಿ ಲೇಡಿಸ್‌ ಹಾಸ್ಟೆಲ್‌ಗೆ ನುಗ್ಗಿದ ಶೈಫುಲ್ಲಾ ಬಾಬು ವಿದ್ಯಾರ್ಥಿನಿಯರಿಂದ ಗೂಸಾ ತಿಂದು ಶಿವಮೊಗ್ಗದ ಜೈಲು ಸೇರಿದ್ದಾನೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಆಗುಂಬೆ ಬಳಿಯ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ನುಗ್ಗಲೆತ್ನಿಸಿದ ಶೈಪುಲ್ಲಾನನ್ನು ನೋಡಿದ ವಿದ್ಯಾರ್ಥಿನಿಯೊಬ್ಬಳು ಕೂಗಿಕೊಂಡಿದ್ದಾಳೆ. ತಕ್ಷಣ ಇತರ ವಿದ್ಯಾರ್ಥಿನಿಯರು ಮತ್ತು ವಾರ್ಡನ್ ಸೇರಿ ಪೇದೆಯನ್ನು ಹಿಡಿದು ಸರಿಯಾಗಿ ಧರ್ಮದೇಟು ನೀಡಿದ್ದಾರೆ.

rape

ಹೊನ್ನಾಳಿ ಮೂಲದ ಶೈಫುಲ್ಲಾ ಏಳು ವರ್ಷದ ಹಿಂದೆ ಭದ್ರಾವತಿ ಪೊಲೀಸ್‌ ವಿಭಾಗಕ್ಕೆ ಸೇರಿಕೊಂಡಿದ್ದ, ನಾಲ್ಕು ವರ್ಷದ ತರುವಾಯ ನಕ್ಸಲ್‌ ನಿಗ್ರಹ ದಳದ ಪೇದೆಯಾಗಿ ವರ್ಗಾವಣೆಗೊಂಡಿದ್ದ. ಕೆಲ ದಿನಗಳ ಹಿಂದೆ ಆಗುಂಬೆ ಚೆಕ್‌ಪೋಸ್ಟ್‌ಗೆ ಶೈಫುಲ್ಲಾನನ್ನು ನಿಯೋಜನೆ ಮಾಡಲಾಗಿತ್ತು.

ಎಂಟು ಗಂಟೆಗೆ ಕೆಲಸ ಮುಗಿಸಿದ ಶೈಫುಲ್ಲಾ ಸಮೀಪದ ಬಾರ್‌ವೊಂದರಲ್ಲಿ ಕಂಠಪೂರ್ತಿ ಕುಡಿದಿದ್ದ. ಆಗುಂಬೆ-ಕೊಪ್ಪ ರಸ್ತೆಯಲ್ಲಿರುವ ಲೇಡಿಸ್‌ ಹಾಸ್ಟೆಲ್‌ ಕಾಂಪೌಂಡ್‌ ಜಿಗಿದ ಶೈಫುಲ್ಲಾ ಒಳಗೆ ನುಗ್ಗಿದ್ದಾನೆ. ಈ ವೇಳೆ ವಿದ್ಯಾರ್ಥಿನಿರ ಕೈಗೆ ಸಿಕ್ಕಿಬಿದ್ದು ಈಗ ಲಾಕಪ್‌ ಸೇರಿದ್ದಾನೆ.

ಅತಿಯಾಗಿ ಕುಡಿದವ 6 ಅಡಿಗೂ ಎತ್ತರದ ಕಾಂಪೌಂಡ್‌ ಜಿಗಿಯಲು ಅಸಾಧ್ಯವಾದರೂ ಆರೋಪಿ ಉದ್ದೇಶಪೂರ್ವಕವಾಗಿಯೇ ಹಾಸ್ಟೆಲ್‌ಗೆ ನುಗ್ಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
A 28-year-old constable Shafiulla Babu Jan of the Anti-Naxal Force (ANF) landed in police lockup after he allegedly entered a women's hostel near Agumbe, Shimoga district, 370km from here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X