ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸ್ಥಾನಕ್ಕಾಗಿ ದೆಹಲಿಗೆ ಹೋದ ಕಾಂಗ್ರೆಸ್ ಶಾಸಕರು

|
Google Oneindia Kannada News

ಬೆಂಗಳೂರು, ಸೆ.1 : ಕಾಂಗ್ರೆಸ್ ವಲಯದಲ್ಲಿ ಸಂಪುಟ ವಿಸ್ತರಣೆ ಕಸರತ್ತು ಆರಂಭಗೊಂಡಿದ್ದು, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರು ದೆಹಲಿಗೆ ಹಾರಿದ್ದಾರೆ. ಆದರೆ, ಸೋನಿಯಾ ಗಾಂಧಿ, ದಿಗ್ವಿಜಯ್ ಸಿಂಗ್ ಸೇರಿದಂತೆ ಯಾವ ನಾಯಕರು ಭೇಟಿಗೂ ಅವಕಾಶ ನೀಡಿಲ್ಲ.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೆ.3ರಂದು ದೆಹಲಿಗೆ ತೆರಳಲಿದ್ದಾರೆ. ಅವರಿಗಿಂತ ಮೊದಲೇ ಅಲ್ಲಿ ವಾಸ್ತವ್ಯ ಹೂಡಿರುವ ಶಾಸಕರು, ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭಿಸಿದ್ದಾರೆ.

Siddaramaiah

ಹಿರಿಯ ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ಎ.ಬಿ.ಮಾಲಕರೆಡ್ಡಿ, ಎ.ಮಂಜು, ಸಿ.ಎಂ.ಅಶೋಕ್, ಆರ್.ವಿ.ದೇವರಾಜ್, ಎನ್.ಎ.ಹ್ಯಾರಿಸ್, ವಿನಯ್ ಕುಲಕರ್ಣಿ, ರಾಜಶೇಖರ್ ಪಾಟೀಲ್, ಮನೋಹರ್ ತಹಸೀಲ್ದಾರ್ ಸೇರಿದಂತೆ ಹಲವು ಶಾಸಕರು ಸೋಮವಾರ ದೆಹಲಿಗೆ ತೆರಳಿದ್ದಾರೆ. [ಸಂಪುಟ ಸೇರುವವರ ಹೆಸರು ಅಂತಿಮ]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಸಚಿವ ಸಂಪುಟ ಸೇರಲು ಅವಕಾಶ ದೊರೆಯದಿದ್ದರೆ, ನಿಗಮ ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಪಡೆಯಲು ಶಾಸಕರು ತಮ್ಮ ಪರಿಚಯದ ನಾಯಕರ ಮೂಲಕ ಪ್ರಯತ್ನ ಆರಂಭಿಸಿದ್ದಾರೆ. [ಸಂಪುಟ ಸೇರಲು ಶಾಸಕರ ಲಾಬಿ]

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಿಎಂ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಅವರೊಂದಿಗೆ ಮಾತ್ರ ಸೆ.3ರಂದು ಮಾತುಕತೆ ನಡೆಸಲಿದ್ದಾರೆ. ಇನ್ನೊಂದು ಕಡೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸಹ ಯಾವ ಶಾಸಕರ ಭೇಟಿಗೂ ಸಮಯಾವಕಾಶ ನೀಡಿಲ್ಲ. ಆದ್ದರಿಂದ ಶಾಸಕರು ನಾಯಕರ ಭೇಟಿಗೆ ಕಾದು ಕುಳಿತಿದ್ದಾರೆ.

ಹೇಗಾದರೂ ಮಾಡಿ ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಪಡೆಯಬೇಕು ಎಂದು ಹಠಕ್ಕೆ ಬಿದ್ದಿರುವ ಶಾಸಕರು ತಮ್ಮ ಪರಿಚಯದ ರಾಜ್ಯ ನಾಯಕರ ಬಳಿ ಲಾಬಿ ಆರಂಭಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಸಂಪುಟ ಸೇರುವ ಮೂವರು ಶಾಸಕರು ಹೆಸರುಗಳನ್ನು ಅಂತಿಮಗೊಳಿಸಿದ್ದು, ಅದನ್ನು ಹಿಡಿದುಕೊಂಡೆ ದೆಹಲಿಗೆ ತೆರಳಿದ್ದಾರೆ.

English summary
Karnataka Congress MLAs lobbying in Delhi for the posts of minister in CM Siddaramaiah cabinet. CM Siddaramaiah and Dr.G Parameshwar will meet AICC president Sonia Gandhi on Sep 3 to discuss about cabinet expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X