ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ ಸ್ಥಾನಕ್ಕಾಗಿ ಪೈಪೋಟಿ ಆರಂಭಿಸಿದ ಕಾಂಗ್ರೆಸಿಗರು

|
Google Oneindia Kannada News

ಬೆಂಗಳೂರು, ಏ. 25 : ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಜೂನ್ ನಲ್ಲಿ ನಡೆಯುವ ವಿಧಾನಪರಿಷತ್ ಚುನಾವಣೆಗೆ ಹಾಗೂ ನಾಮ ನಿರ್ದೇಶನ ಪ್ರಕ್ರಿಯೆಗಾಗಿ ವಿವಿಧ ನಾಯಕರು ಲಾಬಿ ಆರಂಭಿಸಿದ್ದಾರೆ. ಪರಿಷತ್ತಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಜೂನ್ ನಲ್ಲಿ ವಿಧಾನಪರಿಷತ್ತಿಗೆ ಕಾಂಗ್ರೆಸ್ ನಿಂದ ನಾಮ ನಿರ್ದೇಶಿತ ಸದಸ್ಯರಾಗಿ ಐವರು ಮತ್ತು ವಿಧಾನಸಭೆಯಿಂದ ಪರಿಷತ್ತಿಗೆ 4 ನಾಲ್ವರು ಪ್ರವೇಶಿಸಬಹುದಾಗಿದೆ. ಇದಕ್ಕಾಗಿ ನಾಯಕರಲ್ಲಿ ಪೈಪೋಟಿ ಆರಂಭವಾಗಿದ್ದು, ಲೋಕಸಭೆ ಚುನಾವಣೆ ಫಲಿತಾಂಶ ಬರುವ ಮೊದಲೇ ಕೆಲವು ನಾಯಕರು ಪರಿಷತ್ ಪ್ರವೇಶಿಸುವ ಲೆಕ್ಕಾಚಾರ ಹಾಕುತ್ತಿದ್ದಾರೆ.

Congress

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ನಂಜುಂಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದಿಂದ ಸಿಎಂ ಇಬ್ರಾಹಿಂ, ಎಚ್.ಎಂ. ರೇವಣ್ಣ, ರಾಮಚಂದ್ರಪ್ಪ ಅವರ ಹೆಸರು ಶಿಫಾರಸುಗೊಳ್ಳುವ ಸಾಧ್ಯತೆ ಇದೆ. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಆಸ್ಕರ್ ಫರ್ನಾಂಡೀಸ್ ಬಣದ ಕೆಲವು ನಾಯಕರು ಲಾಬಿ ನಡೆಸುತ್ತಿದ್ದು, ಪರಿಷತ್ ಸ್ಥಾನ ಪಡೆಯಲು ಪ್ರಯತ್ನ ನಡೆಸಿದ್ದಾರೆ. [ಜೂನ್ ನಲ್ಲಿ ಪರಿಷತ್ ಚುನಾವಣೆ]

ಎಷ್ಟು ಸ್ಥಾನಗಳು : ವಿಧಾನಪರಿಷತ್ತಿನ ಸಭಾಪತಿಗಳನ್ನೂ ಸೇರಿಸಿ ಒಟ್ಟು ಸಂಖ್ಯಾ ಬಲ 75. ಇದರಲ್ಲಿ ಬಿಜೆಪಿ 38, ಕಾಂಗ್ರೆಸ್ 19, ಜೆಡಿಎಸ್ 12 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಇವರಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶನಗೊಂಡ ಬಿಜೆಪಿಯ ನಾಲ್ವರು ಸದಸ್ಯರು ಜೂ. 20ರಂದು ನಿವೃತ್ತರಾಗುತ್ತಾರೆ. ಡಾ.ಮುಮ್ತಾಜ್ ಅಲಿಖಾನ್ ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಪಕ್ಷದಿಂದ ಈ ಬಾರಿ ಐವರು ನಾಮನಿರ್ದೇಶಿತರಾಗಿ ಆಯ್ಕೆ ಆಗಬಹುದಾಗಿದೆ.

ವಿಧಾನಸಭೆಯಿಂದ ಪರಿಷತ್ತಿಗೆ ಆಯ್ಕೆಯಾದ 7 ಸ್ಥಾನಗಳು ತೆರವಾಗಲಿವೆ. ಇವರಲ್ಲಿ ಅಧಿಕಾರರೂಢ ಕಾಂಗ್ರೆಸ್ 4 ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳಿಗೆ ತಲಾ 1 ಸ್ಥಾನಗಳು ಲಭಿಸಲಿವೆ. ಪಕ್ಷೇತರ ಶಾಸಕರ ಮತ ಸೇರಿ ಇನ್ನೊಬ್ಬರು ಪಕ್ಷೇತರರಾಗಿ ವಿಧಾನ ಪರಿಷತ್‌ಗೆ ಆಯ್ಕೆಗೊಳ್ಳಬಹುದು.

ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪರಿಷತ್ ಪ್ರವೇಶಿಸಿಸುವುದು ಅಂತಿಮವಾಗಿದೆ. ಆದರೆ, ಅವರನ್ನು ಸಿದ್ದರಾಮಯ್ಯ ಅವರ ಸಂಪುಟಕ್ಕೆ ತೆಗೆದುಕೊಂಡು ಉಪ ಮುಖ್ಯಮಂತ್ರಿ ಸ್ಥಾನ ನೀಡುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ನೀಡಬೇಕು.

English summary
After the Lok Sabha Election Karnataka Congress leaders lobbying for legislative council seat. In June election will be held for 9 seats of legislative council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X