ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖರ್ಗೆಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ನಾಯಕರು

|
Google Oneindia Kannada News

ಬೆಂಗಳೂರು, ಜೂನ್ 4 : ಲೋಕ­ಸಭೆ­ಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ­ರಾಗಿ ಆಯ್ಕೆಯಾದ ಹಿರಿಯ ಮುಖಂಡ ಮಲ್ಲಿ­ಕಾರ್ಜುನ ಖರ್ಗೆ ಅವರಿಗೆ ರಾಜ್ಯದ ಕಾಂಗ್ರೆಸ್ ನಾಯಕರು ಅಭಿನಂದನೆ ಸಲ್ಲಿಸಿದರು. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ಮಾನ್ಯತೆ ದೊರೆತರೆ ಖರ್ಗೆ ವಿಪಕ್ಷ ನಾಯಕರಾಗಿ ಜವಾಬ್ದಾರಿ ನಿರ್ವ­­ಹಿಸ­ಲಿದ್ದಾರೆ.

ಮೂಲ ಸೌಕರ್ಯ ಸಚಿವ ರೋಷನ್ ಬೇಗ್, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಸಚಿವ ಆರ್.ವಿ.ದೇಶಪಾಂಡೆ, ರಾಯಚೂರು ಸಂಸದ ಬಿ.ವಿ.ನಾಯಕ್ ಮುಂತಾದವರು ನವದೆಹಲಿಯಲ್ಲಿ ಮಂಗಳವಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಅವರಿಗೆ ಅಭಿನಂದನೆ ಸಲ್ಲಿಸಿದರು.[ಲೋಕಸಭೆಯಲ್ಲಿ ಖರ್ಗೆ ಕಾಂಗ್ರೆಸ್ ನಾಯಕ]

ಗುಲ್ಬರ್ಗ ಕ್ಷೇತ್ರದಿಂದ ಎರಡನೇ ಬಾರಿಗೆ ಗೆಲುವು ಸಾಧಿಸಿ, ಸಂಸತ್ ಪ್ರವೇಶಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು  ಅನಿರೀಕ್ಷಿತವಾಗಿ ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲು ಅನುಭವಿಸಿದ ಬಳಿಕ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಈ ಹೊಣೆಗಾರಿಗೆ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಚಿತ್ರಗಳಲ್ಲಿ ನೋಡಿ ಖರ್ಗೆಗೆ ಅಭಿನಂದನೆ

ಖರ್ಗೆಗೆ ಅಭಿನಂದನೆ ಸಲ್ಲಿಸಿದ ಮುನಿಯಪ್ಪ

ಖರ್ಗೆಗೆ ಅಭಿನಂದನೆ ಸಲ್ಲಿಸಿದ ಮುನಿಯಪ್ಪ

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಜಿ ಕೇಂದ್ರ ಸಚಿವ ಮತ್ತು ಕೋಲಾರ ಕ್ಷೇತ್ರದ ಸಂಸದ ಕೆ.ಎಚ್.ಮುನಿಯಪ್ಪ ಅಭಿನಂದನೆ ಸಲ್ಲಿಸಿದರು.

ಸಚಿವ ರೋಷನ್ ಬೇಗ್ ಅಭಿನಂದನೆ

ಸಚಿವ ರೋಷನ್ ಬೇಗ್ ಅಭಿನಂದನೆ

ಮೂಲಸೌಕರ್ಯ ಮತ್ತು ವಾರ್ತಾ ಸಚಿವ ರೋಷನ್ ಬೇಗ್ ನವದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಅಭಿನಂದನೆ ಸಲ್ಲಿಸಿದ ತುಮಕೂರು ಸಂಸದ

ಅಭಿನಂದನೆ ಸಲ್ಲಿಸಿದ ತುಮಕೂರು ಸಂಸದ

ತುಮಕೂರು ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಮುದ್ದಹನುಮೇಗೌಡರು ಖರ್ಗೆ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ಅಭಿನಂದನೆ ಸಲ್ಲಿಸಿದ ರಾಯಚೂರು ಸಂಸದ

ಅಭಿನಂದನೆ ಸಲ್ಲಿಸಿದ ರಾಯಚೂರು ಸಂಸದ

ರಾಯಚೂರು ಕ್ಷೇತ್ರದಿಂದ ಜಯಗಳಿಸಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಬಿ.ವಿ.ನಾಯಕ್ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಿದರು.

ಸಚಿವರ ದೇಶಪಾಂಡೆಯಿಂದ ಅಭಿನಂದನೆ

ಸಚಿವರ ದೇಶಪಾಂಡೆಯಿಂದ ಅಭಿನಂದನೆ

ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ನವದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಆಯ್ಕೆ ಆಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಕೆಪಿಸಿಸಿ ನಿಯೋಗದಿಂದ ಅಭಿನಂದನೆ

ಕೆಪಿಸಿಸಿ ನಿಯೋಗದಿಂದ ಅಭಿನಂದನೆ

16ನೇ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಆಯ್ಕೆಯಾದ ಗುಲ್ಬರ್ಗದ ಸಂಸದ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಪಿಸಿಸಿ ನಿಯೋಗ ಅಭಿನಂದನೆ ಸಲ್ಲಿಸಿತು.

ಖರ್ಗೆಗೆ ಧಾರವಾಡ ಪೇಡ ತಿನ್ನಿಸಿ ಅಭಿನಂದನೆ

ಖರ್ಗೆಗೆ ಧಾರವಾಡ ಪೇಡ ತಿನ್ನಿಸಿ ಅಭಿನಂದನೆ

ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಮತ್ತು ಹಿರಿಯ ನಾಯಕ ವೀರಣ್ಣ ಮತ್ತೀಕಟ್ಟಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧಾರವಾಡ ಪೇಡ ತಿನ್ನಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಆಯ್ಕೆ ಆಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

English summary
Congress president Sonia Gandhi nominated Mallikarjun Kharge as the leader of the party in the lower house. Karnataka Congress leaders congratulate Mallikarjun Kharge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X