ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ, ಶಾಸಕರೊಂದಿಗೆ ಸಿಎಂ ಸಿದ್ದು ಸಭೆ

|
Google Oneindia Kannada News

ಬೆಂಗಳೂರು, ಜು. 23 : ಲೋಕಸಭೆ ಚುನಾವಣೆ ನಂತರ ಎದುರಾಗಿರುವ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಿದ್ಧತೆ ಆರಂಭಿಸಿದೆ. ಬುಧವಾರ ಶಾಸಕಾಂಗ ಪಕ್ಷದ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಚುನಾವಣೆ ಕುರಿತು ಶಾಸಕರೊಂದಿಗೆ ಚರ್ಚೆ ನಡೆಸಿದರು.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಶಾಸಕರ ಸಭೆ ನಡೆಯಿತು. ಆ.21ರಂದು ಶಿಕಾರಿಪುರ, ಬಳ್ಳಾರಿ ಗ್ರಾಮಾಂತರ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

Siddaramaiah

ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸುವಂತೆ ಎಲ್ಲರೂ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮೂರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ, ಪಕ್ಷದ ಸಾಧನೆಗಳನ್ನು ಜರಿಗೆ ತಲುಪಿಸಲು ನಿರ್ಧರಿಸಲಾಯಿತು. [ಉಪ ಚುನಾವಣೆ ವೇಳಾಪಟ್ಟಿ]

ಅಭ್ಯರ್ಥಿಗಳ ಆಯ್ಕೆ : ಮೂರು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೆಪಿಸಿಸಿಯಿಂದ ಪ್ರತಿ ಕ್ಷೇತ್ರಕ್ಕೆ ಮೂವರು ವೀಕ್ಷಕರನ್ನು ನೇಮಕ ಮಾಡಲು ಸಭೆಯಲ್ಲಿ ಚರ್ಚಿಸಲಾಯಿತು. ಕ್ಷೇತ್ರದಲ್ಲಿನ ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ಈ ವೀಕ್ಷಕರು ವರದಿ ನೀಡಲಿದ್ದು, ನಂತರ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಕ್ಷೇತ್ರವಾರು ವೀಕ್ಷಕರ ವಿವರ
ಶಿಕಾರಿಪುರ : ಮೋಟಮ್ಮ, ಜಯಪ್ರಕಾಶ್ ಹೆಗ್ಡೆ, ನಜೀರ್ ಅಹ್ಮದ್, ಚಿಕ್ಕೋಡಿ-ಸದಲಗ: ವಿ.ಆರ್. ಸುದರ್ಶನ್, ಎಸ್.ಜಿ. ನಂಜಯ್ಯನಮಠ, ರಿಜ್ವಾನ್ ಅರ್ಷದ್,
ಬಳ್ಳಾರಿ ಗ್ರಾಮಾಂತರ : ಕೆ.ಎನ್. ರಾಜಣ್ಣ, ನೆ.ಲ. ನರೇಂದ್ರಬಾಬು, ಎನ್. ಮಂಜುನಾಥ್ [ಶಿಕಾರಿಪುರ ಕ್ಷೇತ್ರದತ್ತ ಗೂಳಿಹಟ್ಟಿ ಶೇಖರ್!]

English summary
After Loksobha Elections Karnataka Congress has seriously begun preparing for the by election scheduled on August 21. On Wednesday CM Siddaramaiah meets party MLAs and discuss about election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X