ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲರ ನೇಮಕ, ಸಿದ್ದರಾಮಯ್ಯ ಅಸಮಾಧಾನ

|
Google Oneindia Kannada News

ಬೆಂಗಳೂರು, ಆ.31 : ಕರ್ನಾಟಕ ರಾಜ್ಯಪಾಲರ ನೇಮಕದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ನೇಮಕಕ್ಕೂ ಮೊದಲು ಮುಖ್ಯಮಂತ್ರಿಗಳನ್ನು ಕೇಳುವುದು ವಾಡಿಕೆ ಆದರೆ, ಪ್ರಧಾನಿ ಮೋದಿ ನೇಮಕದ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ವಜುಭಾಯ್ ರುಡಾಭಾಯ್ ವಾಲಾ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ನಾವು ಅವರನ್ನು ಸ್ವಾಗತಿಸುತ್ತೇವೆ. ಆದರೆ, ನೇಮಕಕ್ಕೂ ಮುನ್ನ ಪ್ರಧಾನಿ ನಮ್ಮ ಜೊತೆ ಚರ್ಚೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Siddaramaiah

ರಾಜ್ಯಪಾಲರನ್ನು ನೇಮಕ ಮಾಡುವ ಮುನ್ನ ವಾಡಿಕೆಯಂತೆ ರಾಜ್ಯದ ಮುಖ್ಯಮಂತ್ರಿಗಳನ್ನು ಕೇಳುವುದು ಸಂಪ್ರದಾಯ, ನಾವು ಹೇಳಿದವರನ್ನು ಮಾಡಬೇಕೆಂದೇನಿಲ್ಲ, ಚರ್ಚೆ ಮಾಡದೇ ನೇಮಕ ಮಾಡಿರುವುದು ನಮಗೆ ಬೇಸರ ತಂದಿದೆ ಎಂದು ಸಿಎಂ ಹೇಳಿದರು. [ರಾಜ್ಯಪಾಲರ ಸಂಕ್ಷಿಪ್ತ ಪರಿಚಯ]

ಯಾರೇ ರಾಜ್ಯಪಾಲರಾದರು ಸಂವಿಧಾನದ ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕು, ಸರ್ಕಾರವೂ ಸಂವಿಧಾನದ ಚೌಕಟ್ಟಿನಲ್ಲಿಯೇ ಕೆಲಸ ಮಾಡುತ್ತದೆ. ಆದರೆ, ನೇಮಕಕ್ಕೂ ಮುನ್ನ ಪ್ರಧಾನಿ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಬೇಕಾಗಿತ್ತು ಎಂದು ಸಿದ್ದರಾಮಯ್ಯ ತಿಳಿಸಿದರು. [ಸೆ.1ರಂದು ರಾಜ್ಯಪಾಲರ ಪ್ರಮಾಣ ವಚನ]

ವಜುಭಾಯ್ ರುಡಾಭಾಯ್ ವಾಲಾ ಅವರನ್ನು ಕರ್ನಾಟಕದ ರಾಜ್ಯಪಾಲರಾಗಿ ನೇಮಿಸಲಾಗಿದ್ದು, ಸೆ.1ರಂದು ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸೋಮವಾರ ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ಎಚ್.ವಘೇಲಾ ರಾಜ್ಯಪಾಲರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

English summary
Karnataka Chief Minister Siddaramaiah expressed unhappy over governor appointment. Vajubhai Rudabhai Vala appointed as Governor of Karnataka. Vajubhai Vala swearing in ceremony will be held in September 1, Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X