ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಳೆ ಚುನಾವಣೆ ದಿನ ಸಿಎಂ ಸಿದ್ದರಾಮಯ್ಯ ಏನ್ಮಾಡ್ತಾರೆ!?

By Srinath
|
Google Oneindia Kannada News

ಚಾಮರಾಜನಗರ, ಏ. 16- ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲು ಸಂಚರಿಸಿ, ಸುಮಾರು 100ಕ್ಕೂ ಹೆಚ್ಚು ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಏನು ಮಾಡಲಿದ್ದಾರೆ, ಎಲ್ಲಿಗೆ ಹೋಗಲಿದ್ದಾರೆ ಎಂಬುದು ಸ್ವಾರಸ್ಯಕರವಾಗಿದೆ.

ಕಳೆದೊಂದು ತಿಂಗಳಿಂದ ಪ್ರಚಾರ ಸಭೆಗಳಲ್ಲಿ ಬೇಜಾನ್ ಬಾಯಿ ಚಪಲ ತೀರಿಸಿಕೊಂಡಿರುವ 65 ವರ್ಷದ ಸಿಎಂ ಸಿದ್ದು ಈಗಾಗಲೇ ಸೈಲೆಂಟ್ ಮೋಡ್ ಗೆ ಜಾರಿದ್ದಾರೆ. ಅಂತಹುದರಲ್ಲಿ ನಾಳೆ ತಮ್ಮೂರಿಗೆ ತೆರಳಿ, ಮಾದರಿ ಮತದಾರನಾಗಿ ತಮ್ಮ ಮತ ಹಕ್ಕು ಚಲಾಯಿಸಲಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

cm-siddaramaiah-to-cast-vote-in-siddaramanahundi-in-chamarajanagar
ಕುತೂಹಲದ ಸಂಗತಿಯೆಂದರೆ ಮುಖ್ಯಮಂತ್ರಿಯಾದ ದಿನದಿಂದ ಇದುವರೆಗೂ ತಮ್ಮ ಹುಟ್ಟೂರಿಗೆ ಹೋಗದ ಸಿದ್ದರಾಮಯ್ಯ ಅವರು ನಾಳೆ ಮತ ಚಲಾಯಿಸಲು ಸಿದ್ದರಾಮನ ಹುಂಡಿಗೆ ಭೇಟಿ ನೀಡುತ್ತಿದ್ದಾರೆ. ಮೈಸೂರಿನಿಂದ ಸುಮಾರು 24 ಕಿಮೀ ದೂರದಲ್ಲಿ ಟಿ ನರಸೀಪುರ ರಸ್ತೆಯಲ್ಲಿರುವ ಸಿದ್ದರಾಮನ ಹುಂಡಿ ಗ್ರಾಮವು ಸಿದ್ದರಾಮಯ್ಯನವರ ಹುಟ್ಟೂರು.

ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ಗ್ರಾಮವು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. (ಕ್ಷೇತ್ರ ಮಹಿಮೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ)

ಇದುವರೆಗೂ ಕಾಲ ಕಾಲಕ್ಕೆ ಎಲ್ಲ ಚುನಾವಣೆಗಳಲ್ಲೂ ಇಲ್ಲಿಂದ ಮತ ದಾನ ಮಾಡಿದ್ದಾರೆ. ಮತದಾನ ಮಾಡಲು ಅವರು ನಾಳೆ ತಮ್ಮ ಹಿರಿಯ ಪುತ್ರ ರಾಕೇಶ್ ಜತೆಗೂಡಿ ಇಲ್ಲಿಗೆ ಬರುವ ಅಂದಾಜಿದೆ. ಆದರೆ ಅವರ ಪತ್ನಿ ಪಾರ್ವತಮ್ಮನವರು ಹಾಗೂ ಮತ್ತೊಬ್ಬ ಪುತ್ರ ಡಾ. ಯತೀಂದ್ರ ಅವರುಗಳು ಮತ ಹಾಕಲು ಊರಿಗೆ ಬರುವುದು ಅನುಮಾನ.

ಇನ್ನು, ಮತದಾನದ ಗೌಪ್ಯತೆಯನ್ನು ಪಕ್ಕಕ್ಕಿಟ್ಟು ಹೇಳುವುದಾದರೆ ನಾಳೆ ಸಿದ್ದರಾಮಯ್ಯ ಅವರು ತಮ್ಮ ಆತ್ಮೀಯ ಮಿತ್ರ, ಕಾಂಗ್ರೆಸ್ ಅಭ್ಯರ್ಥಿ ರಂಗಸ್ವಾಮಿ ಧ್ರುವನಾರಾಯಣ ಅವರ ಪರ ಮತ ಚಲಾಯಿಸುವುದರಲ್ಲಿ ಯಾವುದೇ ಅನುಮಾನವಿಲ್ಲ!

English summary
Lok Sabha Election 2014 - Chief Minister Siddaramaiah to cast vote in his native Siddaramanahundi in Chamrajnagar on April 17. Siddaramaiah's close friend Rangaswamy Dhruvanarayana is the Congress candidate from Chamarajanagar parliamentary constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X