ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಧ್ಯಮದವರ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ: ಸಿಎಂ

By Mahesh
|
Google Oneindia Kannada News

ಕೊಳ್ಳೇಗಾಲ, ಮಾ.16: ಟಿವಿ 9 ಸಂಸ್ಥೆ ನಡೆಸಿದ ಸ್ಟಿಂಗ್ ಅಪರೇಷನ್ ಪ್ರಕರಣದ ನಂತರ ವರದಿಗಾರರ ಮೇಲೆ ನಡೆದಿದೆ ಎನ್ನಲಾದ ಹಲ್ಲೆಗೆ ಸಂಬಂಧಿಸಿದಂತೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಸರು ಕೇಳಿ ಬಂದಿರುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮದವರ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ ಖಚಿತ ಎಂದು ಭರವಸೆ ನೀಡಿದ್ದಾರೆ.

ಚಾಮರಾಜ ನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಭಾನುವಾರ ಮಾತನಾಡಿದ ಸಿದ್ದರಾಮಯ್ಯ ಅವರು, 'ಮಾಧ್ಯಮಗಳ ಮೇಲೆ ಹಲ್ಲೆ ಮಾಡುವುದು ತಪ್ಪು. ಹಲ್ಲೆ ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಲೇಬೇಕು. ಮಾಧ್ಯಮಗಳು ಮುಕ್ತ, ನಿರ್ಭೀತರಾಗಿ ಕಾರ್ಯನಿರ್ವಹಿಸಬೇಕು. ಇದಕ್ಕೆ ಪೂರಕ ವಾತಾವರಣ ಸೃಷ್ಟಿಸುವುದು ನಮ್ಮ ಕರ್ತವ್ಯ ಎಂದು ಟಿವಿ 9 ವರದಿಗಾರರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.

CM Siddaramaiah on DK Shivakumar men attacking TV 9 Journos

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕಳೆದ ಗುರುವಾರ ಸಂಜೆ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದರು. ಟಿವಿ 9 ಪ್ರತಿನಿಧಿ ನನ್ನ ಮಗಳಿದ್ದಂತೆ ಆಕೆ ಮೇಲೆ ಹಲ್ಲೆ ನಡೆಸಿಲ್ಲ. ನನ್ನನ್ನು ವ್ಯವಸ್ಥಿತವಾಗಿ ಮುಗಿಸಲು ಸಂಚು ರೂಪಿಸಲಾಗಿದೆ. ನನಗಾಗಿರುವ ಅನ್ಯಾಯಕ್ಕೆ ಮೊದಲು ನ್ಯಾಯ ಕೊಡಿ ಎಂದು ಡಿಕೆ ಶಿವಕುಮಾರ್ ಹೇಳಿಕೊಂಡಿದ್ದರು. [ವಿವರ ಇಲ್ಲಿ ಓದಿ]

ಇನ್ನೂ ಎಫ್ ಐಆರ್ ದಾಖಲಾಗಿಲ್ಲ: ಪ್ರಕರಣದಲ್ಲಿ ಜಾಮೀನು ಪಡೆದು ಹೊರಕ್ಕೆ ಬಂದಿರುವ ಇಬ್ಬರು ಪತ್ರಕರ್ತರಾದ ಶ್ವೇತಾ ಹಾಗೂ ಶ್ರೇಯಸ್ ಅವರು ಸುದ್ದಿಗೋಷ್ಠಿ ನಡೆಸಿ ಘಟನೆ ವಿವರಗಳನ್ನು ಬಿಚ್ಚಿಟ್ಟಿದ್ದಾರೆ. ಡಿಕೆ ಶಿವಕುಮಾರ್ ಅವರು ಖುದ್ದಾಗಿ ಕೈ ಹಾಕಿ ಶ್ವೇತಾ ಅವರು ಹಾಕಿಕೊಂಡಿದ್ದ ಬಟನ್ ಕೆಮೆರಾ ಕಿತ್ತು ಹಾಕಿದರು. ನಂತರ ಅವರ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಇಬ್ಬರ ಮೇಲೆ ಹಲ್ಲೆ ನಡೆಸಿದರು. ಇಬ್ಬರ ಮುಖ ನೆನಪಿದೆ ನಿಮ್ಮ ಕಥೆ ಮುಗಿಯಿತು ಇನ್ನೂ ಅವಾಜ್ ಹಾಕಿದರು ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ, ನಮ್ಮ ಮೊಬೈಲ್, ಕೆಮೆರಾ ಎಲ್ಲಾ ಪಡೆದುಕೊಂಡಿದ್ದರೂ ಹಲ್ಲೆ ಪ್ರಕರಣಾದ ಬಗ್ಗೆ ದೂರು ಸ್ವೀಕರಿಸಲು ವಿಳಂಬ ಮಾಡಿದರು. ಎಫ್ ಐ ಆರ್ ದಾಖಲಿಸಿಲ್ಲ ಎಂದಿದ್ದಾರೆ. ವಿವರ ಮುಂದೆ ವಿಡಿಯೋದಲ್ಲಿದೆ.

English summary
CM Siddaramaiah today(Mar.16) condemned attack on TV 9 journos allegedly by minister DK Shivakumar men during the sting operation. DK Shivakumar recently denied reports of his men assaulting on two TV 9 Journalists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X