ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಪ ವಿಮೋಚನೆ ಮಾಡಿದ ಸಿಎಂ ಸಿದ್ದರಾಮಯ್ಯ

By Srinath
|
Google Oneindia Kannada News

ಚಾಮರಾಜನಗರ, ಏ.14- ಶಾಪಗ್ರಸ್ತ ಗಡಿಯೂರು ಚಾಮರಾಜನಗರಕ್ಕೆ ಶಾಪ ವಿಮೋಚನೆಯಾಗಿದೆ. ಇದನ್ನು ಸಾಧ್ಯವಾಗಿಸಿದವರು ಈ ಭಾಗದವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಹೌದು 6 ತಿಂಗಳು ಒಂದು ವಾರದ ಹಿಂದೆ ಚಾಮರಾಜನಗರಕ್ಕೆ ನೂತನ ಮುಖ್ಯಮಂತ್ರಿಯಾಗಿ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ಇಂದಿಗೂ ಮುಖ್ಯಮಂತ್ರಿಯಾಗಿಯೇ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.

ತಮ್ಮ ಆಪ್ತ ಮಿತ್ರ, ಚಾಮರಾಜನಗರ ಕ್ಷೇತ್ರದ ಅಜೇಯ ಸಂಸದ ಆರ್. ಧ್ರುವನಾರಾಯಣ ಅವರ ಪರವಾಗಿ ಸಿದ್ದರಾಮಯ್ಯ ಇಂದು ಪ್ರಚಾರ ಮಾಡಲು ಚಾಮರಾಜನಗರಕ್ಕೆ ಭೇಟಿ ನೀಡುತ್ತಿದ್ದಾರೆ. (ಚಾಮರಾಜನಗರ ಲೋಕಸಭಾ ಕ್ಷೇತ್ರ ಹೀಗಿದೆ)

chief-minister-siddaramaiah-breaks-chamarajanagar-jinx-successfully
ಆರು ತಿಂಗಳುಗಳ ನಂತರವೂ ಅಧಿಕಾರದಲ್ಲಿ ಮುಂದುವರಿಯುವದರೊಂದಿಗೆ ಚಾಮರಾಜನಗರಕ್ಕೆ ಅಂಟಿದ್ದ ಕಳಂಕವನ್ನು ತೊಡೆದುಹಾಕಿದ್ದಾರೆ. ಈ ಹೆಗ್ಗಳಿಕೆಗೆ ಪಾತ್ರರಾದ ಕರ್ನಾಟಕದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಿದ್ದಾರೆ. ಅಧಿಕಾರ ಕಳೆದುಕೊಳ್ಳುವ ಸರಣಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಯಶಸ್ವಿಯಾಗಿ ಮುರಿದಿದ್ದಾರೆ.

ಕಾಕತಾಳಿಯವೋ ಅಥವಾ ನಿಜಕ್ಕೂ ಶಾಪವೋ ಅಥವಾ ರಾಜಕೀಯ ಸ್ಥಿತ್ಯಂತರಗಳೋ ಅಂತೂ ಚಾಮರಾಜನಗರಕ್ಕಂತೂ ಕಳಂಕ ಅಂಟಿತ್ತು. ಇದುವರೆಗೂ ರಾಜ್ಯದ 7 ಮುಖ್ಯಮಂತ್ರಿಗಳು ಚಾಮರಾಜನಗರದಲ್ಲಿ ಕಾಲಿಟ್ಟ ಆರು ತಿಂಗಳೊಳಗೇ ಅಧಿಕಾರ ಕಳೆದುಕೊಂಡಿರುವುದಂತೂ ಸತ್ಯ.

ಅಧಿಕಾರ ಕಳೆದುಳ್ಳುವ ಭೀತಿಯಿಂದ ತತ್ತರಿಸಿದ್ದ ಆರು ಮಂದಿ ಮುಖ್ಯಮಂತ್ರಿಗಳು ಚಾಮರಾಜನಗರದತ್ತ ಹೆಜ್ಜೆಯನ್ನೇ ಹಾಕಲಿಲ್ಲ. 1990ರಲ್ಲಿ ವೀರೇಂದ್ರ ಪಾಟೀಲರು ಭೇಟಿ ನೀಡಿದ್ದೇ ಕೊನೆ. ಆ ನಂತರದ ಆರು ಮಂದಿ ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಭೇಟಿ ನೀಡಲೇ ಇಲ್ಲ. ಎಸ್ ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಚ್‌ ಡಿ ದೇವೇಗೌಡ, ಜೆಎಚ್ ಪಟೇಲ್‌, ಎಸ್ಎಂ ಕೃಷ್ಣ, ಧರಂ ಸಿಂಗ್‌ ಇವರು ಯಾರೂ ಚಾಮರಾಜನಗರಕ್ಕೆ ಕಾಲಿಡಲಿಲ್ಲ.

ಮರುಕಳಿಸಿದ ಕಳಂಕ: (ಸಿಎಂ ಸಿದ್ದುಗೆ ಥ್ಯಾಂಕ್ಸ್ ಹೇಳಿದ ವಾಟಾಳ್ ನಾಗರಾಜ್)
ಇದಾದ 17 ವರ್ಷಗಳ ಬಳಿಕ, 2007ರ ಮೇ 28ರಂದು ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರಾದರೂ ಅಧಿಕಾರದಿಂದ ಕಳೆದುಕೊಳ್ಳುವ ಮೂಲಕ ಚಾಮರಾಜನಗರಕ್ಕೆ ಅಂಟಿದ್ದ ಕಳಂಕ ಮರುಕಳಿಸಿತು.

ಇದಾದ ನಂತರ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಯಡಿಯೂರಪ್ಪ, ಸದಾನಂದ ಗೌಡ ಅವರುಗಳೂ ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಆದರೆ ಜಗದೀಶ್‌ ಶೆಟ್ಟರ್‌ 2013ರಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಆ ವೇಳೆಗಾಗಲೇ ಅವರ ಸರ್ಕಾರದ ಅವಧಿ ಮುಗಿಯುತ್ತಾ ಬಂದಿತ್ತು. ಶೆಟ್ಟರ್‌ ಅಧಿಕಾರದಿಂದ ದೂರವಾದರು. ತನ್ಮೂಲಕ ಚಾಮರಾಜನಗರಕ್ಕೆ ಅಂಡಿಕೊಂಡಿದ್ದ ಶಾಪ ದೂರವಾಗುವ ಲಕ್ಷಣಗಳು ಕಂಡಿರಲಿಲ್ಲ. ಆದರೆ ಇದೀಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದುಕೊಂಡು ಮತ್ತೆ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ.

English summary
Lok Sabha polls 2014 - Karnataka Chief minister Siddaramaiah breaks Chamarajanagar jinx successfully. 6 monthe after his visit to Chamarajanagar today also Siddaramaiah visited the place as Chief minister. Thus broke the previous record of CMs visiting Chamarajanagar will lose the Chief Minister ship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X