ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರದಲ್ಲಿ 10ರೂ.ಗೆ ಕುಡಿಯುವ ನೀರು!

|
Google Oneindia Kannada News

drinking water
ಚಾಮರಾಜನಗರ, ಅ.16 : ಸದಾ ಬರಗಾಲಕ್ಕೆ ತುತ್ತಾಗುವ ಚಾಮರಾಜನಗರ ಜಿಲ್ಲೆಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಂಸ್ಥೆಯೊಂದು ಸಜ್ಜಾಗಿದೆ. ಹತ್ತು ರೂ.ಗಳಿಗೆ 20 ಲೀಟರ್ ಶುದ್ಧ ಕುಡಿಯುವ ನೀರನ್ನು ಸಂಸ್ಥೆ ಒದಗಿಸಲಿದೆ.

ಮಂಗಳವಾರ ಈ ಶುದ್ಧ ಕುಡಿಯುವ ನೀರು ನೀಡುವ ಕೇಂದ್ರಕ್ಕೆ ಚಾಮರಾಜನಗರದಲ್ಲಿ ಚಾಲನೆ ದೊರೆತಿದೆ. ನಗರದ ಭ್ರಮರಾಂಬ ಬಡಾವಣೆಯ ಮೊದಲನೇ ಕ್ರಾಸ್‌ನಲ್ಲಿ ನೀರಿನ ಸಂಗ್ರಹ ಕೇಂದ್ರವಿದೆ. ಇಲ್ಲಿ ಜನರು 10 ರೂ.ಗೆ 20 ಲೀಟರ್ ಶುದ್ಧ ಕುಡಿಯುವ ನೀರು ಪಡೆಯಬಹುದಾಗಿದೆ.

ಅಕ್ಷಯ ಆಕ್ವಾ ಈ ಶುದ್ಧ ನೀರಿನ ಕೇಂದ್ರವನ್ನು ನಿರ್ವಹಣೆ ಮಾಡಲಿದೆ. ಕಾಯಿನ್ ಬಾಕ್ಸ್ ನಲ್ಲಿ 5 ರೂ. ಕಾಯಿನ್ ಹಾಕಿದರೆ 25 ಸೆಕೆಂಡ್ ನಲ್ಲಿ ನೀವು 10 ಲೀಟರ್ ನೀರು ಪಡೆಯಬಹುದು. ಪುನಃ 5 ರೂ. ಕಾಯಿನ್ ಹಾಕಿದರೆ, 10 ಲೀಟರ್ ನೀರು ಪಡೆಯಬಹುದಾಗಿದೆ.

ಇಂತಹ ಯೋಜನೆ ಈಗಾಗಲೇ ಗದಗ, ಮಂಡ್ಯ, ಕನಕಪುರ, ಬೆಂಗಳೂರು ಗ್ರಾಮಾಂತರ, ಮೈಸೂರಿನಲ್ಲಿ ನೀರಿನ ಯಶಸ್ವಿಯಾಗಿದೆ. ಸದ್ಯ ಚಾಮರಾಜನಗರದಲ್ಲಿ ಈ ಕೇಂದ್ರ ತೆರೆದು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಕೊಳವೆ ಬಾವಿ ಮೂಲಕ 3ಸಾವಿರ ಲೀಟರ್ ಸಾಮರ್ಥ್ಯ ಹೊಂದಿರುವ ಟ್ಯಾಂಕ್‌ಗೆ ಮೊದಲು ನೀರು ಸಂಗ್ರಹವಾಗುತ್ತದೆ. ನಂತರ ಮೋಟಾರ್ ಸಹಾಯ ಪಡೆದು ಟ್ಯಾಂಕ್‌ನಿಂದ ಕೇಂದ್ರದಲ್ಲಿರುವ 2ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್ ಗೆ ಪಂಪ್ ಮಾಡಲಾಗುತ್ತದೆ.

ಇದರಿಂದ ಸ್ಯಾಂಡ್‌ಫಿಲ್ಟರ್, ಆಕ್ವಾ ಕಾರ್ಬನ್ ನಲ್ಲಿ ಶುದ್ಧೀಕರಣಗೊಂಡು ಜನರಿಗೆ ತಲುಪುತ್ತದೆ. ಸುಮಾರು 12ಲಕ್ಷ ರೂ.ಗಳಲ್ಲಿ ನಿರ್ಮಾಣವಾಗಿರುವ ಈ ಕೇಂದ್ರಕ್ಕೆ ಸರ್ಕಾರ ಮಾನ್ಯತೆಯನ್ನು ನೀಡಿದೆ. ಇದರಿಂದ ಜನರು ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರು ಪಡೆಯಬಹುದಾಗಿದೆ.

ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೂ ಇಲ್ಲಿಂದ ನೀರು ಪೂರೈಕೆ ಮಾಡಲಾಗುತ್ತದೆ. ಅದಕ್ಕಾಗಿ 20 ಲೀಟರ್ ಗೆ 15 ರೂ.ದರ ನಿಗದಿ ಪಡಿಸಲಾಗಿದೆ. ವಾಹನದ ಮೂಲಕ ಕುಡಿಯುವ ನೀರನ್ನು ಮನೆಯಂಗಳಕ್ಕೆ ಪೂರೈಸಲು ಕೇಂದ್ರ ಚಿಂತನೆ ನಡೆಸಿದೆ. ಇದು ಶೀಘ್ರದಲ್ಲೇ ಜಾರಿಗೆ ಬರಲಿದೆ.

English summary
Akshay Aqua begins pure drinking water unit at Chamarajanagar on Tuesday, October 15. by this unit people can get 20 liter pure drinking water at rs 10. pure drinking water system already successful in Gadag, Bangalore Rural, Mysore and other district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X