ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರದಿಂದ ಸಿಇಟಿ ಪರೀಕ್ಷೆ ಆರಂಭ

|
Google Oneindia Kannada News

ಬೆಂಗಳೂರು, ಏ. 30 : ಇಂಜಿನಿಯರಿಂಗ್‌, ವೈದ್ಯಕೀಯ, ದಂತ ವೈದ್ಯಕೀಯ, ಸೇರಿದಂತೆ 2014-15ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಮೇ 1 ಮತ್ತು 2ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಒಟ್ಟು 1.40 ಲಕ್ಷ ಅಭ್ಯರ್ಥಿಗಳು ಈ ಬಾರಿಯ ಪರೀಕ್ಷೆ ಬರೆಯಲಿದ್ದಾರೆ.

ಬೆಂಗಳೂರಿನ 70 ಕೇಂದ್ರಗಳು ಸೇರಿದಂತೆ ರಾಜ್ಯದ ಒಟ್ಟು 314 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ಮೇ 1 ಮತ್ತು 2ರಂದು ನಡೆಯಲಿದ್ದು 36,411 ಮಂದಿ ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಉಳಿದ 1,04,057 ವಿದ್ಯಾರ್ಥಿಗಳು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಪರೀಕ್ಷೆ ಎದುರಿಸಲಿದ್ದಾರೆ. [ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ?]

CET 2014

ಸಕಲ ಸಿದ್ಧತೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಪರೀಕ್ಷೆಗಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಬೆಂಗಳೂರು ಸೇರಿದಂತೆ ಪರೀಕ್ಷೆ ನಡೆಯುವ ಎಲ್ಲಾ 314 ಕೇಂದ್ರಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಆಯಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ಎರಡು ದಿನಗಳ ಪರೀಕ್ಷಾ ಕಾರ್ಯಕ್ಕಾಗಿ ಒಟ್ಟು 628 ವಿಶೇಷ ಪರಿವೀಕ್ಷಕರು, 8782 ಪರಿವೀಕ್ಷಕರು, 314 ಕಸ್ಟೋಡಿಯನ್‌ ಗಳು ಸೇರಿದಂತೆ 15 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಕಮಾಡಲಾಗಿದೆ.

ಪರೀಕ್ಷಾ ವೇಳಾಪಟ್ಟಿ
ಮೇ 1 - ಜೀವಶಾಸ್ತ್ರ ಬೆಳಗ್ಗೆ 10.30-11.50, ಗಣಿತ ಮಧ್ಯಾಹ್ನ 2.30-3.50
ಮೇ 2 - ಭೌತಶಾಸ್ತ್ರ ಬೆಳಗ್ಗೆ 10.30-11.50, ರಸಾಯನಶಾಸ್ತ್ರ ಮಧ್ಯಾಹ್ನ 2.30-3.50
ಮೇ 3 - ಬೆಳಗ್ಗೆ 11.30ರಿಂದ ಕನ್ನಡ ಭಾಷಾ ಪರೀಕ್ಷೆ (ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ)

English summary
The Karnataka Common Entrance Test (KCET), conducted by Karnataka Examination Authority, is scheduled to begin from May 1, 2014. KCET is held to test the eligibility of the candidates seeking admissions to various undergraduate and professional Medicine and Homeopathy courses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X