ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಮಳೆ ಇಳಿಮುಖ: ಜಲಾಶಯದಲ್ಲಿ ಎಷ್ಟು ನೀರಿದೆ?

By Ashwath
|
Google Oneindia Kannada News

ಬೆಂಗಳೂರು, ಜು.15: ಮಲೆನಾಡು, ಕರಾವಳಿ, ಕೊಡಗಿನಲ್ಲಿ ಸೋಮವಾರ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿದೆ. ರಾಜ್ಯದ ಹಲವು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಸುಬ್ರಹ್ಮಣ್ಯ, ಭಾಗಮಂಡಲ, ಮಂಡಗದ್ದೆ ಸೇರಿದಂತೆ ಹಲವೆಡೆ ರಸ್ತೆ ಸಂಚಾರ ಕಡಿತಗೊಂಡಿದೆ.

ಭಾಗಮಂಡಲ ಪ್ರವೇಶಕ್ಕೆ ನಿಷೇಧ: ತಲಕಾವೇರಿಗೆ ತೆರಳುವ ರಸ್ತೆಯ ಅಕ್ಕಪಕ್ಕದಲ್ಲಿರುವ ಬೃಹದಾಕಾರದ ಕಲ್ಲುಬಂಡೆಗಳಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಭಾಗಮಂಡಲ ಪ್ರವೇಶಕ್ಕೆ 15 ದಿನ ಕೊಡಗು ಜಿಲ್ಲಾಡಳಿತ ನಿಷೇಧ ಹೇರಿದೆ.

rain

ಅಪಾಯದ ಮಟ್ಟದಲ್ಲಿ ತುಂಗಾನದಿ: ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ತುಂಗಾ ಜಲಾಶಯದಲ್ಲಿ 68,000 ಕ್ಯುಸೆಕ್‌ಗೆ ಒಳಹರಿವು ಇದೆ. ಜಲಾಶಯದ ಎಲ್ಲ ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡಲಾಗಿದೆ. ಇದರಿಂದಾಗಿ ಮಂಡಗದ್ದೆ ಪಕ್ಷಿಧಾಮಕ್ಕೂ ನೀರು ನುಗ್ಗಿದೆ.

ಮುಂದುವರಿದ ಕಡಲ್ಕೊರೆತ: ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಪಡುಬಿದ್ರಿಯ ಎರ್ಮಾಳ್‌ನಲ್ಲಿ ಕಡಲ್ಕೊರೆತ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ಸೋಮವಾರ ಬೆಳಿಗ್ಗೆ ನೇತ್ರಾವತಿ ನದಿಗೆ ಬಿದ್ದು ಸ್ಥಳೀಯ ನಿವಾಸಿ ಶೇಖರ ಪೂಜಾರಿ (45) ಕೊಚ್ಚಿ ಹೋಗಿದ್ದಾರೆ.

ಕರಾವಳಿ ಕರ್ನಾಟಕದ ಕೆಲವು ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಯಾವ ಜಲಾಶಯದಲ್ಲಿ ಎಷ್ಟು ನೀರಿದೆ?
ಜಲಾಶಯ ಗರಿಷ್ಠ ಮಟ್ಟ ಇಂದಿನ ನೀರಿನ ಮಟ್ಟ
ಲಿಂಗನಮಕ್ಕಿ 1819 1754.50
ಭದ್ರಾ 186 144
ಹಾರಂಗಿ 2,859 2841.66
ಕೆಆರ್‌ಎಸ್‌‌ 124.8 84.92
ಹೇಮಾವತಿ 2922 2879.30
ಕಬಿನಿ 2284 2274.80
ಸೂಪಾ(ಮೀ) 564 523.63
ಮಾಣಿ 594 572.90
ಮಲಪ್ರಭಾ 2079.5 2034.80
ಘಟಪ್ರಭಾ 2175 2069.71
ಆಲಮಟ್ಟಿ (ಮೀ) 519.60 507.31

*ನೀರಿನ ಮಟ್ಟ ಅಡಿಗಳಲ್ಲಿ *ಒಳ ಹರಿವು ,ಹೊರಹರಿವು ಕ್ಯೂಸೆಕ್‌ ಲೆಕ್ಕದಲ್ಲಿ

English summary
Rainfall in Karnataka has been described as "fairly widespread'' with 51% taluks across the state recording an average rainfall of 2.5mm. The heartening news is that catchment areas in South Karnataka have got good rainfall over the past few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X