ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದುಳಿದ ವರ್ಗದವರಿಗೆ ಸರ್ಕಾರದ ಬಂಪರ್ ಕೊಡುಗೆ

|
Google Oneindia Kannada News

ಬೆಂಗಳೂರು, ಆ.30 : ಬಡವರು ಮತ್ತು ಕೊಳಗೇರಿ ನಿವಾಸಿಗಳಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಸಚಿವ ಸಂಪುಟ ಸಭೆಯಲ್ಲಿ ನನ್ನ ಮನೆ-ನನ್ನ ಸ್ವತ್ತು' ಯೋಜನೆಯಡಿ ಮನೆಗಾಗಿ ಸಾಲ ಪಡೆದಿದ್ದ 11 ಲಕ್ಷ ಕುಟುಂಬಗಳ ಸಾಲದ ಅಸಲು ಹಾಗೂ ಬಡ್ಡಿಯನ್ನು ಮನ್ನಾ ಮಾಡಲು ಒಪ್ಪಿಗೆ ದೊರೆತಿದೆ.

ಗುರುವಾರ ಮಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ಸಂಪುಟ ಸಭೆಯ ತೀರ್ಮಾನಗಳನ್ನು ಮಾಧ್ಯಮಗಳಿಗೆ ತಿಳಿಸಿದರು.

ಆಶ್ರಯ ಯೋಜನೆಯಡಿ 'ನನ್ನ ಮನೆ-ನನ್ನ ಸ್ವತ್ತು' ಯೋಜನೆಯಡಿ ಮನೆಗಾಗಿ ಸಾಲ ಪಡೆದಿದ್ದ 11 ಲಕ್ಷ ಕುಟುಂಬಗಳ ಸಾಲದ ಅಸಲು ಹಾಗೂ ಬಡ್ಡಿಯನ್ನು ಮನ್ನಾ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಜಯಚಂದ್ರ ಹೇಳಿದರು.

2013ರ ಮಾರ್ಚ್‌ಗೆ ಪೂರ್ವದಲ್ಲಿ ಮನೆ ಕಟ್ಟಿಕೊಂಡವರಿಗೆ ಈ ಸಾಲ ಮತ್ತು ಬಡ್ಡಿ ಕೊಡುಗೆ ಲಭಿಸಲಿದೆ. ಅಸಲು 1,458 ಕೋಟಿ ರೂ. ಹಾಗೂ ಬಡ್ಡಿ 1,030 ಕೋಟಿ ರೂ.ಗಳಾಗಿದ್ದು, ಒಟ್ಟು 2,488 ಕೋಟಿ ರೂ. ಗಳನ್ನು ಸರ್ಕಾರವೇ ನೀಡಲು ತೀರ್ಮಾನಿಸಿದೆ ಎಂದು ಜಯಚಂದ್ರ ಅವರು ಮಾಹಿತಿ ನೀಡಿದರು. ಸಚಿವ ಸಂಪುಟ ಸಭೆಯ ಇತರ ನಿರ್ಣಯಗಳು

ಪುರಸಭೆಯಾಗಿ ಮೇಲ್ದರ್ಜೆಗೆ

ಪುರಸಭೆಯಾಗಿ ಮೇಲ್ದರ್ಜೆಗೆ

ಹುಣಸೂರು ಪುರಸಭೆಯನ್ನು ನಗರಸಭೆಯಾಗಿ, ನಾಗಮಂಗಲ, ಗುರುಮಿಠ್ಕಲ್ ಪಟ್ಟಣ ಪಂಚಾಯಿತಿಗಳನ್ನು ಪುರಸಭೆಗಳಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ನೂತನ ಕೈಗಾರಿಕಾ ನೀತಿ

ನೂತನ ಕೈಗಾರಿಕಾ ನೀತಿ

ರಾಜ್ಯದಲ್ಲಿ ಕೈಗಾರಿಕೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ನೂತನ ಕೈಗಾರಿಕಾ ನೀತಿಯನ್ನು ರೂಪಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಸದ್ಯದಲ್ಲೇ ಸಂಪುಟ ಉಪ ಸಮಿತಿ ಈ ಬಗ್ಗೆ ಸಭೆ ನಡೆಸಿ ಕರಡು ರೂಪಿಸಲಿದೆ.

ಸಚಿವರಿಗೆ ವಿಧಾನಸೌಧ ಭೇಟಿ ಕಡ್ಡಾಯ

ಸಚಿವರಿಗೆ ವಿಧಾನಸೌಧ ಭೇಟಿ ಕಡ್ಡಾಯ

ಸಚಿವರು ವಾರದಲ್ಲಿ ಎರಡು ದಿನ ಕಡ್ಡಾಯವಾಗಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯ ತನಕ ವಿಧಾನಸೌಧದದ ಕಚೇರಿಯಲ್ಲಿದ್ದು, ಕಡತ ವಿಲೇವಾರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸರ್ಕಾರದಲ್ಲಿ 2 ಲಕ್ಷಕ್ಕೂ ಅಧಿಕ ಕಡತ ಬಾಕಿ ಇರುವ ಕುರಿತು ಸಿಎಂ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಯೋಜನೆಗಳು

ರೈಲ್ವೆ ಯೋಜನೆಗಳು

ಬೀದರ್-ಗುಲ್ಬರ್ಗ ಹೊಸ ರೈಲು ಮಾರ್ಗ ಯೋಜನೆಯ ಪರಿಷ್ಕೃತ ಅಂದಾಜು 844.15 ಕೋಟಿ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ತಕ್ಷಣ 192.75 ಕೋಟಿ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ.

ಇತರ ಅನುದಾನಗಳು

ಇತರ ಅನುದಾನಗಳು

ಬೆಳಗಾವಿ-ಸಾಂಬ್ರಾ ರೈಲ್ವೆ ನಿಲ್ದಾಣ ನಡುವೆ ಕೆಳಸೇತುವೆ ನಿರ್ಮಾಣಕ್ಕೆ 3.69 ಕೋಟಿ, ರಾಜಾನುಕುಂಟೆ ದೊಡ್ಡಬಳ್ಳಾಪುರ ಮಾರ್ಗದಲ್ಲಿ ರೈಲ್ವೆ ಸೇತುವೆ ನಿರ್ಮಾಣಕ್ಕೆ 19.43 ಕೋಟಿ, ಭದ್ರಾವತಿ ಶಿವಮೊಗ್ಗ ನಡುವೆ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ 12.10 ಕೋಟಿ ರೂ. ಬಿಡುಗಡೆ ಮಾಡಲು ಸಂಪುಟ ಸಭೆ ಅನುಮೋದನೆ ನೀಡಿದೆ.

ಸಚಿವ ಸಂಪುಟ ಸಭೆಯ ಇತರ ನಿರ್ಣಯಗಳು

ಸಚಿವ ಸಂಪುಟ ಸಭೆಯ ಇತರ ನಿರ್ಣಯಗಳು

* ಕಾವೇರಿ ಅಚ್ಚುಕಟ್ಟು ಪ್ರಾಧಿಕಾರದ ಸಾತನೂರು ಬಳಿ 16.20 ಎಕರಡ ಜಮೀನು ಕಬ್ಬು ಮತ್ತು ಸಕ್ಕರೆ ಸಂಶೋಧನಾ ಮಂಡಳಿಗೆ ಹಸ್ತಾಂತರ
* ದಾವಣಗೆರೆಯ ಹರಿಹರದ ಕೊಂಡಜ್ಜಿಯಲ್ಲಿ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಗೆ ಗುತ್ತಿಗೆ ನೀಡಿರುವ 80 ಎಕರೆ ಜಮೀನು 30 ವರ್ಷಗಳಿಗೆ ನವೀಕರಣ
* ಹರಪನಹಳ್ಳಿಯಲ್ಲಿ ವೆಂಕಟೇಶ್ವರ ಹ್ಯಾಚರೀಸ್ ಸಂಸ್ಥೆ ಪಶು ಆಹಾರ ಘಟಕ ನಿರ್ಮಿಸಲು 15.30 ಎಕರೆ ಭೂಮಿ

English summary
The Karnataka government on Thursday decided to waive dues of Rs 2,764 core pending from beneficiaries of various subsidized housing schemes meant for those below poverty line, including the Ashraya housing scheme, in the State said Law Minister T.B.Jayachandra after cabinet meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X