ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಿಂದ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಭರವಸೆಗಳ ಗುಚ್ಛ

By Srinath
|
Google Oneindia Kannada News

ಚಿಕ್ಕಬಳ್ಳಾಪುರ, ಏ.3: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರ ಕನಸುಗಳಿಗೆ ಕಿಚ್ಚು ಹಚ್ಚುವ ಪ್ರಣಾಳಿಕೆ ಎಂಬ ಭರವಸೆಗಳ ಮೂಟೆಯನ್ನು ಆಯಾ ಭಾಗಗಳಿಗೆ ತಕ್ಕಂತೆ ನೀಡಲು ಬಿಜೆಪಿ ನಿರ್ಧರಿಸಿದೆ. ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ (NCR) ಅನುಗುಣವಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿರುವುದರ ಬೆನ್ನಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮಹಾತ್ಮೆಯನ್ನು ಅರ್ಥ ಮಾಡಿಕೊಂಡು ಆ ಕ್ಷೇತ್ರಕ್ಕೂ ಬಿಜೆಪಿ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಕ್ಷೇತ್ರದ 'ಸ್ಥಳೀಯ' ಅಭ್ಯರ್ಥಿಯಾಗಿರುವ ಬಿಜೆಪಿಯ ಬಿಎನ್ ಬಚ್ಚೇಗೌಡರು ನಿನ್ನೆ 'ಪ್ರಗತಿಗೆ ಹೊಸ ಹಾದಿ' ಎಂಬ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಮತದಾರರಿಗೆ ವಿಶೇಷ ಭರವಸೆಗಳನ್ನು ನೀಡಿದ್ದಾರೆ. ಇದೇ ವೇಳೆ ತಮ್ಮ ಪ್ರತಿಸ್ಪರ್ಧಿಗಳ ಬಗ್ಗೆ ಪ್ರತಿಕ್ರಯಿಸಿರುವ ಅವರು ತಮ್ಮ ವಿರುದ್ಧ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸ್ಪರ್ಧಿಸಿದ್ದರೂ ಅವರನ್ನು ಎದುರಿಸುವ ಶಕ್ತಿ ನನಗಿದೆ ಎಂದು ಮತದಾರರ ಮೇಲೆ ಭರವಸೆ ವ್ಯಕ್ತಪಡಿಸಿದ್ದಾರೆ. (ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಮಹಿಮೆ)

bjp-candidate-bache-gowda-releases-separate-manifesto-chikkaballapur

ನನ್ನ ವಿರುದ್ಧ ಸ್ಪರ್ಧಿಸಿರುವ ಇಬ್ಬರೂ ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸಿಗರು ಎಂಬ ಆಶ್ಚರ್ಯದ ಹೇಳಿಕೆ ನೀಡಿದ ಅವರು ವೀರಪ್ಪ ಮೊಯ್ಲಿ ಮೂಲ ಕಾಂಗ್ರೆಸ್ಸಿಗರಾಗಿದ್ದರೆ, ಕೇಂದ್ರ ಯುಪಿಎ ಬೆಂಬಲ ಪಡೆದುಕೊಂಡಿರುವ ಕುಮಾರಸ್ವಾಮಿಯವರೂ ಕೂಡ ಕಾಂಗ್ರೆಸಿಗರಾಗಿದ್ದಾರೆ ಎಂದು ಹೇಳಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಬಚ್ಚೇಗೌಡರ 'ಪ್ರಗತಿಗೆ ಹೊಸ ಹಾದಿ' ಎಂಬ ಪ್ರಣಾಳಿಕೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ಏನೆಲ್ಲಾ ಇದೆಯೆಂದರೆ: (ಬಚ್ಚೇಗೌಡ ಚುನಾವಣಾ ಪ್ರಚಾರ)
* ಕುಡಿಯುವ ನೀರಿಗೆ ಶಾಶ್ವತ ಪರಿಹಾರ, * ಕೆರೆಗಳಿಗೆ ನೀರು ತುಂಬಿಸುವುದು, * ಕರ್ನಾಟಕ ನೀರು ಸರಬರಾಜು ಮಂಡಳಿಯಿಂದ ಚಿಕ್ಕಬಳ್ಳಾಪುರ ಬೇರ್ಪಡಿಸಿ ಆಗ್ನೇಯ ಜಲಮಂಡಳಿ ಸ್ಥಾಪಿಸುವುದು, * ನಗರದ ಹೊರವಲಯಗಳಿಗೆ ಹೊಂದಿಕೊಂಡಂತಿರುವ ಪ್ರದೇಶಗಳಿಗೆ ವರ್ತುಲ ರಸ್ತೆ, * ದಾಬಸ್‌ ಪೇಟೆಯಿಂದ ದೇವನಹಳ್ಳಿ ಮಾರ್ಗವಾಗಿ ಕೋಲಾರಕ್ಕೆ ರಾಷ್ಟ್ರೀಯ ಹೆದ್ದಾರಿ ಸ್ಥಾಪನೆ, * ದೇವನಹಳ್ಳಿ ಬಳಿ ಒಣಬಂದರು ಸ್ಥಾಪನೆ, * ನರ್ಮ್ ಯೋಜನೆಯಡಿ 9 ಪಟ್ಟಣಗಳ ಅಭಿವೃದ್ಧಿ, * ಬೆಂಗಳೂರು ವಿಶ್ವವಿದ್ಯಾಲಯದಿಂದ ಬೇರ್ಪಡಿಸಿ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು, * ಸೋಲಾರ್ ಅಭಿವೃದ್ಧಿಗೆ ಹೆಚ್ಚು ಒತ್ತು, * ಜವಳಿ ಪಾರ್ಕ್, ಸಾಫ್ಟ್‌ವೇರ್ ಪಾರ್ಕ್, ಕೇಂದ್ರೀಯ ಪುಷ್ಪ ಮಂಡಳಿ ಸ್ಥಾಪನೆ.

ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಮಾತನಾಡಿ, ಬೆಂಗಳೂರಿನ ಮೂರೂ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಪ್ರಣಾಳಿಕೆಯನ್ನು ಇನ್ನೆರಡು ದಿನದಲ್ಲಿ ಬಿಡುಗಡೆ ಮಾಡಲಾಗುವುದು. ಏ. 8ಕ್ಕೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಗರಕ್ಕೆ ಆಗಮಿಸಲಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಸುರೇಶ್‌ ಕುಮಾರ್ ಅವರು ಉಪಸ್ಥಿತರಿದ್ದರು.

English summary
Lok Sabha Election 2014 - Chikkaballapur BJP candidate BN Bache Gowda releases separate manifesto. Ramnagar JDS MLA HD Kumaraswamy and sitting MP Veerappa Moily are in the battle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X