ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡ್ಡಬಿಟ್ಟವರೆಲ್ಲ ನಕ್ಸಲರಲ್ಲ ಅನಂತಮೂರ್ತಿ ತಿರುಗೇಟು!

|
Google Oneindia Kannada News

ಬೆಂಗಳೂರು, ಏ.5 : ಕಾಂಗ್ರೆಸ್ ಬೆಂಬಲಿಸುತ್ತೇವೆ ಎಂದು ಹೇಳಿಕೆ ನೀಡಿದ ಸಾಹಿತಿಗಳ ವಿರುದ್ಧ ಬಿಜೆಪಿ ತಿರುಗಿ ಬಿದ್ದಿದೆ. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಾಹಿತಿಗಳಿಗೆ ನಕ್ಸಲರ ಜೊತೆ ಸಂಪರ್ಕವಿದೆ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಅನಂತಮೂರ್ತಿ ಗಡ್ಡ ಬಿಟ್ಟವರಲ್ಲ ನಕ್ಸಲರಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ನಾವು ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುತ್ತೇವೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆ ನರೇಂದ್ರ ಮೋದಿ ಪ್ರಧಾನಿಯಾಗಬಾರದು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಯುಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಗುರುವಾರ ಹೇಳಿದ್ದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

UR Ananthamurthy

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, "ನಾಲ್ಕು ಪುಸ್ಕಕಗಳನ್ನು ಬರೆದ ಮಾತ್ರಕ್ಕೆ ಅವರು ಸಾಹಿತಿಗಳಾಗುವುದಿಲ್ಲ. ಅವರಿಗೆ ಸಾಮಾಜಿಕ ಕಳಕಳಿಯಿಲ್ಲ, ಅವರು ನಕ್ಸಲರ ಜತೆ ಸಂಪರ್ಕ ಹೊಂದಿದ್ದಾರೆ. ಅವರಿಂದ ನಾವು ಬುದ್ಧಿ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದರು.

ಶೆಟ್ಟರ್ ಮಾತಿಗೆ ತಿರುಗೇಟು ನೀಡಿರುವ ಯುಆರ್ ಅನಂತಮೂರ್ತಿ "ನನ್ನ ಪುಸ್ತಕಗಳಲ್ಲಿನ ವಿಚಾರಗಳ ಬಗ್ಗೆ ಜಗದೀಶ್ ಶೆಟ್ಟರ್‌ಗೆ ಅರಿವಿದ್ದಂತಿಲ್ಲ. ನನ್ನ ಮುಖ ಮತ್ತು ಗಡ್ಡ ಗಮನಿಸಿ ನಕ್ಸಲರ ಸಂಪರ್ಕ ಹೊಂದಿದ್ದಾರೆ ಎಂದಿರಬಹುದು. ಶೆಟ್ಟರ್‌ಗೆ ನನ್ನ ಬಗ್ಗೆ ಏನೂ ಗೊತ್ತಿಲ್ಲ. ನಾನು ಬರೆದಿರುವ ಪುಸ್ತಕ ಓದಿಕೊಂಡಿಲ್ಲ. ಪಾಪ ಅವರಿಗೆ ಓದಲು ಬಿಡುವೇ ಇರುವುದಿಲ್ಲ" ಎಂದು ಟೀಕಿಸಿದ್ದಾರೆ. [ಕಾಂಗ್ರೆಸ್ ಗೆ ಸಾಹಿತಿಗಳ ಬೆಂಬಲ]

ಅನಂತಮೂರ್ತಿ ಹೇಳಿದ್ದಿಷ್ಟು : ನಮಗೆ ನಕ್ಸಲರ ಜೊತೆ ನಂಟಿದ್ದರೆ ಒಳ್ಳೆಯದಿತ್ತು. ಅವರ ಜೊತೆ ಮಾತುಕತೆ ನಡೆಸಿ ಅವರನ್ನು ನಾವು ಹಿಂಸೆಯ ಮಾರ್ಗದಿಂದ ಹೊರಕ್ಕೆ ತರುತ್ತಿದ್ದೆವು. ದೇಶದ ಬಗ್ಗೆ ಆಲೋಚಿಸುವ ಯುವಕ-ಯುವತಿಯರು ನಕ್ಸಲರ ಮಾರ್ಗದತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ, ಆ ಹಿಂಸೆಯ ಮಾರ್ಗವನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ನಕ್ಸಲರ ಜೊತೆ ಮಾತುಕತೆ ನಡೆಸುವ ಒಬ್ಬರು ಬೇಕಾಗಿದ್ದಾರೆ. ಇಂತಹ ಮಾರ್ಗದಲ್ಲಿ ರಾಜಕಾರಣ ಮಾಡಬಹುದು ಎಂದು ಅವರಿಗೆ ತಿಳಿಹೇಳುವವರು ಬೇಕು. ಇಂದು ಚುನಾವಣೆಗೆ ಕೋಟ್ಯಾಂತರ ರೂ ಖರ್ಚು ಮಾಡುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಚುನಾವಣೆ ಹೇಗೆ ಎದುರಿಸಬಹುದು ಎಂದು ಆಮ್ ಆದ್ಮಿ ಪಕ್ಷ ದೇಶಕ್ಕೆ ತೋರಿಸಿದೆ. ಇಂತಹ ಚಳವಳಿಗೆ ಯುವಕ-ಯುವತಿಯನ್ನು ಕರೆತರಬೇಕು ಎಂದು ಅನಂತಮೂರ್ತಿ ತಿಳಿಸಿದ್ದಾರೆ.

ಅಡ್ವಾಣಿ ಅಧಿಕಾರಕ್ಕೆ ಬಂದರೂ ಭಯಪಡುವುದಿಲ್ಲ. ನರೇಂದ್ರ ಮೋದಿ ಅಧಿಕಾರಕ್ಕೆ ಬರಬಾರದು. ನಂದನ್ ನಿಲೇಕಣಿಗೆ ಮಾತ್ರವಲ್ಲ, ನಾರಾಯಣಮೂರ್ತಿ ಸ್ಪರ್ಧಿಸಿದ್ದರೂ ಬೆಂಬಲಿಸುತ್ತಿದ್ದೆ ಎಂದು ಹೇಳಿರುವ ಅನಂತಮೂರ್ತಿ, ಶೆಟ್ಟರ್‌ ಗೆ ನಕ್ಸಲರ ಬಗ್ಗೆ ಭಯವಿರಬೇಕು. ಆದ್ದರಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.

English summary
A day after several litterateurs, including Jnanpith awardees UR Ananthamurthy and Girish Karnad came out in support of the Congress, the State BJP on Friday dubbed them “shouting brigade” of the party. Dr. UR Ananthamurthy said, We will not support Naxalism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X