ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ತಿಗೆ ಈಶ್ವರಪ್ಪ, ರಾಜ್ಯಸಭೆಗೆ ಕೋರೆ ಅಭ್ಯರ್ಥಿ

|
Google Oneindia Kannada News

ಬೆಂಗಳೂರು, ಜೂ. 6 : ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ನಿರೀಕ್ಷೆಯಂತೆ ರಾಜ್ಯಸಭೆಗೆ ಪ್ರಭಾಕರ್ ಕೋರೆ ಮತ್ತು ವಿಧಾನಪರಿಷತ್ತಿಗೆ ಕೆ.ಎಸ್.ಈಶ್ವರಪ್ಪ ಅಭ್ಯರ್ಥಿಗಳಾಗಿದ್ದು, ಜೂನ್ 19ರಂದು ಚುನಾವಣೆ ನಡೆಯಲಿದೆ.

ನವದೆಹಲಿಯಲ್ಲಿ ಶುಕ್ರವಾರ ಕೇಂದ್ರ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಭಾಕರೆ ಕೋರೆ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಮುಕ್ತಾಯಗೊಳ್ಳಲಿದ್ದು, ಅವರನ್ನು ಮತ್ತೊಮ್ಮೆ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.

Rs and council polls

ಡಿವಿ ಸದಾನಂದ ಗೌಡರಿಂದ ತೆರವಾಗುವ ವಿಧಾನಪರಿಷತ್ತಿನ ಪ್ರತಿಪಕ್ಷ ಸ್ಥಾನಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಇದರಿಂದಾಗಿ ವಿಧಾನಸಭೆ ಚುನಾವಣೆ ನಂತರ ಪಕ್ಷದಲ್ಲಿ ಯಾವುದೇ ಹುದ್ದೆ ಪಡೆಯದೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಈಶ್ವರಪ್ಪ ಅವರಿಗೆ ಪಕ್ಷ ಹುದ್ದೆಯೊಂದನ್ನು ನೀಡಿದೆ. [ತೆರವಾಗಲಿರುವ ಸ್ಥಾನಗಳು]

ವಿಧಾನಪರಿಷತ್ ಮತ್ತು ರಾಜ್ಯಸಭೆ ಚುನಾವಣೆ ಅಧಿಸೂಚನೆ ಜೂನ್ 2ರಂದು ಹೊರಬಿದ್ದಿದ್ದು ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜೂನ್ 19ರಂದು ವಿಧಾನಸಭೆಯಿಂದ ಪರಿಷತ್ತಿನ 7 ಸ್ಥಾನಗಳು ಮತ್ತು ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮತ್ರ ಸಲ್ಲಿಸಲು ಜೂನ್ 9 ಕೊನೆಯ ದಿನವಾಗಿದ್ದು, ನಾಮಪತ್ರ ವಾಪಸ್ ಪಡೆಯಲು ಜೂ.12 ಕೊನೆ ದಿನವಾಗಿದೆ. ಜೂ. 19ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅಂದು ಸಂಜೆ 5 ಫಲಿತಾಂಶ ಘೋಷಣೆಯಾಗಲಿದೆ.

ರಾಜ್ಯಸಭೆ ಲೆಕ್ಕಾಚಾರ : ಪ್ರಭಾಕರ ಕೋರೆ, ರಾಮಾ ಜೋಯಿಸ್, ಎಸ್.ಎಂ.ಕೃಷ್ಣ, ಬಿ.ಕೆ.ಹರಿಪ್ರಸಾದ್ ಅವರಿಂದ ತೆರವಾಗುವ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ವಿಧಾನಸಭೆಯಲ್ಲಿ 45 (ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ) ಶಾಸಕರ ಬಲ ಹೊಂದಿರುವ ಬಿಜೆಪಿ ಒಂದು ಸ್ಥಾನ ದೊರೆಯಲಿದೆ. ಆ ಸ್ಥಾನಕ್ಕೆ ಪ್ರಭಾಕರ ಕೋರೆ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.

English summary
Karnataka BJP on Friday June 6 finalized the names for Legislative Council and Rajya Sabha election. Prabhakar Kore is candidate for Rajya Sabha and K. S. Eshwarappa for Legislative Council. Election will be held on June 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X