ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಬಿಜೆಪಿ- ಕಾಂಗ್ರೆಸ್ ಸಮಬಲ: ಎನ್ಡಿಟಿವಿ

By Mahesh
|
Google Oneindia Kannada News

ಬೆಂಗಳೂರು, ಏ.13: ಭಾರಿ ಕುತೂಹಲ ಕೆರಳಿಸಿರುವ ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಎರಡೂ ಪಕ್ಷಗಳು ಸಮಬಲದ ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿ ಎನ್ ಡಿಟಿವಿ ಏಪ್ರಿಲ್ ಮೊದಲ ವಾರ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

ಭಾರತೀಯ ಜನತಾ ಪಕ್ಷ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತಲಾ 13 ಸ್ಥಾನಗಳನ್ನು ಪಡೆದರೆ ಮಾಜಿ ಪ್ರಧಾನಿ ಜೆಡಿಎಸ್ ಎರಡು ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಲಿದೆ ಎಂದು ಎನ್ ಡಿಟಿವಿ ಸಹಭಾಗಿತ್ವದಲ್ಲಿ ಹಂಸ ರಿಸರ್ಚ್ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ನಡೆಸಿರುವ ಸಮೀಕ್ಷೆಯಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. 26 ಕ್ಷೇತ್ರಗಳಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಒಟ್ಟು ಮತಗಳಿಕೆಯಲ್ಲಿ ಕಾಂಗ್ರೆಸ್ ಶೇ.40, ಬಿಜೆಪಿ ಶೇ.40 ಹಾಗೂ ಜೆಡಿಎಸ್ ಶೇ.13 ರಷ್ಟು ಮತ ಗಳಿಸಲಿದೆ.

ಎನ್ ಡಿಟಿವಿಗಾಗಿ ಹಂಸಾ ರಿಸರ್ಚ್ ಸಂಸ್ಥೆ ಏ,3ರಂದು ಪ್ರಕಟಿಸಿದ ಸಮೀಕ್ಷಾ ವರದಿ ಪ್ರಕಾರ ಎನ್ ಡಿಎ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಜಯಭೇರಿ ಬಾರಿಸಲಿದೆ. ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮಾತ್ರ ಎನ್ ಡಿಎ ಕೊಂಚ ಹಿನ್ನಡೆ ಅನುಭವಿಸಲಿದೆ ಎಂದು ತಿಳಿದು ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ 16(2009ರಲ್ಲಿ 19), ಕಾಂಗ್ರೆಸ್ 10(6), ಜೆಡಿಎಸ್ 2(3) ಸ್ಥಾನಗಳಿಸಲಿದೆ ಎಂದು ಸಮೀಕ್ಷೆ ಹೇಳಿತ್ತು. ಇನ್ನಷ್ಟು ವಿವರ ಮುಂದಿದೆ.

ಜಾತಿವಾರು ಸಮೀಕ್ಷೆಯಲ್ಲಿ ಯಾವ ಪಕ್ಷ ಮುಂದೆ

ಜಾತಿವಾರು ಸಮೀಕ್ಷೆಯಲ್ಲಿ ಯಾವ ಪಕ್ಷ ಮುಂದೆ

* ಬಿಜೆಪಿಗೆ ವೀರಶೈವ ಮತಗಳು ಶೇ.69, ಒಕ್ಕಲಿಗ ಶೇ.22, ಎಸ್ ‌ಸಿ ಶೇ.20, ಕುರುಬ ಮತಗಳು ಶೇ.17ರಷ್ಟು ಬರಲಿವೆ.

* ಕಾಂಗ್ರೆಸ್ ‌ಗೆ ವೀರಶೈವ ಮತಗಳು ಶೇ.13ರಷ್ಟು, ಒಕ್ಕಲಿಗ ಶೇ.20ರಷ್ಟು, ಪರಿಶಿಷ್ಟ ಜಾತಿ ಶೇ.63 ಹಾಗೂ ಕುರುಬ ಮತಗಳು ಶೇ.64ರಷ್ಟು ಬರುವ ಸಾಧ್ಯತೆಯಿದೆ.

* ಜೆಡಿಎಸ್ ‌ಗೆ ಶೇ.9ರಷ್ಟು ವೀರಶೈವ ಮತಗಳು, ಶೇ.44ರಷ್ಟು ಒಕ್ಕಲಿಗ, ಶೇ.22ರಷ್ಟು ಎಸ್ ‌ಸಿ-ಪರಿಶಿಷ್ಟ ಜಾತಿ ಹಾಗೂ ಶೇ.3ರಷ್ಟು ಕುರುಬ ಮತಗಳು ಬಂದರೆ
* ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ‌ಗೆ ಶೇ.67ರಷ್ಟು, ಜೆಡಿಎಸ್ ‌ಗೆ ಶೇ.10 ಹಾಗೂ ಬಿಜೆಪಿಗೆ ಶೇ.9ರಷ್ಟು ಬರಲಿವೆ.

ಯಡಿಯೂರಪ್ಪ ಆಗಮನದಿಂದ ಬಿಜೆಪಿಗೆ ಲಾಭ

ಯಡಿಯೂರಪ್ಪ ಆಗಮನದಿಂದ ಬಿಜೆಪಿಗೆ ಲಾಭ

* ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿಗೆ ಮತ್ತೆ ಸೇರ್ಪಡೆಗೊಂಡಿರುವುದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ಮುಂಬೈ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಕಮಲ ಪಕ್ಷಕ್ಕೆ ಹೆಚ್ಚಿನ ಸ್ಥಾನ ಸಿಗುವ ಸಂಭವವಿದೆ.

* ಹೈದರಾಬಾದ್ ಕರ್ನಾಟಕ, ಮೈಸೂರು ಕರ್ನಾಟಕದಲ್ಲಿ ಕಾಂಗ್ರೆಸ್ ‌ಗೆ ಹೆಚ್ಚಿನ ಸ್ಥಾನ ಬಂದರೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಇದೆ.

* ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದು ಊಹೆಗೂ ನಿಲುಕದ ಪ್ರಶ್ನೆಯಾಗಿದೆ.
ಚಿತ್ರದಲ್ಲಿ: ಏ.3ರಂದು ಪ್ರಕಟಗೊಂಡ ಸಮೀಕ್ಷಾ ವರದಿ ಚಿತ್ರ

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸ್ಥಾನಮಾನ

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸ್ಥಾನಮಾನ

* 2009ರಲ್ಲಿ ಬಿಜೆಪಿ 19 ಸ್ಥಾನಗಳನ್ನು ಪಡೆದಿದ್ದರೆ, ಈ ಬಾರಿ ಆರು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಜೆಡಿಎಸ್ ಒಂದು ಸ್ಥಾನ ಕಳೆದುಕೊಂಡು 2 ಸೀಟು ಗಳಿಸಲಿದೆ.
* ಇದೇ ರೀತಿ ಉಪಚುನಾವಣೆ ಸೇರಿದಂತೆ 9 ಸ್ಥಾನ ಪಡೆದಿದ್ದ ಕಾಂಗ್ರೆಸ್ ಹೆಚ್ಚುವರಿಯಾಗಿ ನಾಲ್ಕು ಸ್ಥಾನಗಳನ್ನು ಪಡೆಯಲಿದೆ.
* ಒಟ್ಟು ಮತಗಳಿಕೆಯಲ್ಲಿ ಕಾಂಗ್ರೆಸ್ ಶೇ.40, ಬಿಜೆಪಿ ಶೇ.40 ಹಾಗೂ ಜೆಡಿಎಸ್ ಶೇ.13 ರಷ್ಟು ಮತ ಗಳಿಸಲಿದೆ.

ಚಿತ್ರದಲ್ಲಿ: ಏ.3ರಂದು ಪ್ರಕಟಗೊಂಡ ಸಮೀಕ್ಷಾ ವರದಿ ಚಿತ್ರ

ಒಟ್ಟು ಮತಗಳಿಕೆಯಲ್ಲಿ ಯಾವ ಪಕ್ಷ ಮುಂದೆ

ಒಟ್ಟು ಮತಗಳಿಕೆಯಲ್ಲಿ ಯಾವ ಪಕ್ಷ ಮುಂದೆ

ಮತಗಳಿಕೆಯಲ್ಲಿ ಬಿಜೆಪಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇ.42ರಷ್ಟು ಪಡೆದಿತ್ತು. ಈ ಬಾರಿ ಶೇ.2ರಷ್ಟನ್ನು ಕಳೆದುಕೊಳ್ಳಲಿದೆ. ಅಂದರೆ, ಕಮಲ ಪಕ್ಷ ಶೇ.40 ರಷ್ಟು ಪಡೆದರೆ ಕಾಂಗ್ರೆಸ್ ಶೇ.2ರಷ್ಟು ಅಧಿಕ ಮತವನ್ನು ಪಡೆಯಲಿದೆ.
2009ರಲ್ಲಿ ಕಾಂಗ್ರೆಸ್ ಶೇ.38ರಷ್ಟನ್ನು ಪಡೆದಿತ್ತು, ಈ ಬಾರಿ ಶೇ.40ರಷ್ಟು ಏರಿಕೆಯಾಗಲಿದೆ.

ಇದೇ ರೀತಿ ಜೆಡಿಎಸ್ 2009ರಲ್ಲಿ ಶೇ.14ರಷ್ಟು ಮತ ಪಡೆದು ಮೂರು ಸ್ಥಾನ ಪಡೆದಿತ್ತು. ಈ ಬಾರಿ ಶೇ.1ರಷ್ಟು ಮತಗಳನ್ನು ಕಳೆದುಕೊಂಡು ಶೇ.2 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಯಿಂದ ಬಹಿರಂಗಗೊಂಡಿದೆ.

 ತೃತೀಯ ರಂಗದ ನೆರವು ಅಗತ್ಯ : ಎಚ್ ಡಿ ಕುಮಾರಸ್ವಾಮಿ

ತೃತೀಯ ರಂಗದ ನೆರವು ಅಗತ್ಯ : ಎಚ್ ಡಿ ಕುಮಾರಸ್ವಾಮಿ

ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ ಅವರ ಅಭಿಮತ ಸಂಗ್ರಹಿಸಿದ ಎನ್ಡಿಟಿವಿ ಮುಖ್ಯಸ್ಥ ಪ್ರಣಯ್ ರಾಯ್ ಅವರು ಈ ಪ್ರತಿಕ್ರಿಯೆ ನಂತರ ಬಂದಿರುವ ಸಮೀಕ್ಷಾ ವರದಿ ಪ್ರಕಟಿಸಿದ್ದಾರೆ.

* ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿ ಇಬ್ಬರು ಪ್ರಧಾನಮಂತ್ರಿಯಾಗಲು ಅರ್ಹರಲ್ಲ, ಪಬ್ಲಿಸಿಟಿಯಿಂದ ಆಡಳಿತ ನಡೆಸಲು ಸಾಧ್ಯವಿಲ್ಲ. ಇದು ದೇಶದ ಭವಿಷ್ಯಕ್ಕೆ ಮಾರಕ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸರ್ಕಾರ ರಚನೆಯಲ್ಲಿ ತೃತೀಯ ರಂಗದ ನೆರವು ಅಗತ್ಯ ಎಂದು ಒತ್ತಿ ಹೇಳಿದ್ದಾರೆ.

ಬಿಜೆಪಿ -ಕಾಂಗ್ರೆಸ್ ಇಬ್ಬರು 20-20 ಸೀಟು

ಬಿಜೆಪಿ -ಕಾಂಗ್ರೆಸ್ ಇಬ್ಬರು 20-20 ಸೀಟು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಕರ್ನಾಟಕದಲ್ಲಿ ಜಾತಿ ರಾಜಕಾರಣ ಇದೇ ನಿಜ. ಆದರೆ, ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಸೌಲಭ್ಯ ನೀಡುವ ಮೂಲಕ ಅವರ ಮನ ಗೆದ್ದಿದೆ. ರಾಜ್ಯದಲ್ಲಿ ಮೋದಿ ಅಲೆ ತಂತ್ರ ಫಲಿಸುವುದಿಲ್ಲ. ಕಾಂಗ್ರೆಸ್ 18-20 ಸೀಟು ಗೆಲ್ಲಲಿದೆ ಎಂದಿದ್ದಾರೆ.
* ಬಿಎಸ್ ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ತಮ್ಮ ನಿವಾಸದಲ್ಲಿ ಎನ್ ಡಿಟಿವಿ ಪ್ರತಿನಿಧಿ ಜತೆ ಮಾತನಾಡಿ, ಕೇಂದ್ರದಲ್ಲಿ ಸಮರ್ಥ ನಾಯಕತ್ವದ ಅಗತ್ಯವಿದೆ. ಮೋದಿ ಅವರನ್ನು ಗೆಲ್ಲಿಸುವುದು ನಮ್ಮ ಉದ್ದೇಶ, ರಾಜ್ಯದಲ್ಲಿ 20 ಸೀಟು ಸುಲಭವಾಗಿ ಗೆಲ್ಲುತ್ತೇವೆ ಎಂದಿದ್ದಾರೆ.

English summary
Elections 2014: A recent opinion poll done for a private news channel NDTV Forecast for Karnataka (seats) BJP 13(-6), Congress 13 (+7), JDS 2 (-1). The state elects 28 parliamentarians. Earlier opinion polls had shown a lead for the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X