ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಾಪುರದಲ್ಲಿ ಘರ್ಷಣೆ, ಮೂರು ದಿನ ನಿಷೇಧಾಜ್ಞೆ

|
Google Oneindia Kannada News

ಬಿಜಾಪುರ, ಮೇ 27 : ವಿಜಾಪುರ ನಗರದಲ್ಲಿ ಬಿಜೆಪಿ ವಿಜಯೋತ್ಸವದ ವೇಳೆ ನಡೆದ ಗುಂಪು ಘರ್ಷಣೆಯಲ್ಲಿ ಪೊಲೀಸರು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಸೋಮವಾರ ಸಂಜೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್ ನಗರದಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಈ ಮೆರ­ವಣಿಗೆ ಗಾಂಧಿ ಚೌಕ್‌ ಸಮೀಪ ಬಂದಾಗ ಗಲಭೆ ಉಂಟಾಯಿತು. ಪೊಲೀಸರು ಲಾಠಿ ಪ್ರಹಾರ ನಡೆಸಿ ಎರಡೂ ಗುಂಪಿನವರನ್ನು ಚದುರಿಸಿದರು.

Police

ಗಲಭೆ ಸುದ್ದಿ ತಿಳಿಯುತ್ತಿದ್ದಂತೆ ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆರಂಭಿಸಿದರು. ಆದರೆ, ಅಂಗಡಿಗಳ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದರಿಂದ, ಹಲವು ಅಂಗಡಿ ಮತ್ತು ವಾಹನ­ಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಪೊಲೀಸರು ಸೇರಿದಂತೆ ಎಂಟಕ್ಕೂ ಹೆಚ್ಚು ಜನರು ಗಾಯ­ಗೊಂಡಿ­ದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. [ನರೇಂದ್ರ ಮೋದಿ ಸಂಪುಟ ಹೀಗಿದೆ ನೋಡಿ]

ಘಟನೆಗೆ ಕಾರಣವೇನು : ವಿಜಯೋತ್ಸವದ ಮೆರಮಣಿಗೆಯಲ್ಲಿ ಬಂದವರು ಬಣ್ಣ ಎರಚುತ್ತಿದ್ದರು. ಕೆಲವರು ಗಾಂಧಿಚೌಕ್‌ ಬಳಿ ತರಕಾರಿ ಮಾರುತ್ತಿದ್ದ ಮಹಿಳೆಯರ ಮೇಲೂ ಬಣ್ಣ ತೂರಿ­ದರು. ನಂತರ ತರಕಾರಿ ಮಾರುಕಟ್ಟೆಗೆ ನುಗ್ಗಿ ಹಣ್ಣು-ತರಕಾರಿಗಳನ್ನು ಚೆಲ್ಲಾ­ಪಿಲ್ಲಿ ಮಾಡಿ­, ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಗುಂಪಿನವರು ಆರೋಪಿಸುತ್ತಿದ್ದಾರೆ.

ವಿಜಯೋತ್ಸವದ ಮೆರವಣಿಗೆ ಮೇಲೆ ಕಲ್ಲು ತೂರಲಾಯಿತು. ನಮ್ಮ ಮುಖಂ­ಡರ ವಾಹನಗಳನ್ನು ಜಖಂಗೊಳಿಸಲಾಯಿತು. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಮತ್ತೊಂದು ಗುಂಪಿನವರು ಪ್ರತ್ಯಾರೋಪ ಮಾಡಿದ್ದಾರೆ. ಆದರೆ, ಘಟನೆಗೆ ನಿಖರವಾದ ಕಾರಣ ಏನು ಎಂದು ತಿಳಿದುಬಂದಿಲ್ಲ.

ಸ್ಥಳಕ್ಕೆ ಆಗಮಿಸಿದ ಶಾಸಕ ಡಾ.ಮಕ್ಬೂಲ್‌ ಬಾಗವಾನ "ಘಟನೆಗೆ ಯಾರು ಕಾರಣ ಎಂಬ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾ­ಗುವುದು, ಜನರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ".

English summary
In Bijapur district the BJP sponsored victory march led by BR Patil Yatnal, turned violent, resulting in clashes between two groups when it reached Gandhi Chowk in the heart of the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X