ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಪಿ ನಗರ ಕಾರ್ಪೊರೇಟರ್ ಮನೆಯಲ್ಲಿ ಹುಚ್ಚನ ಸಾಹಸ

By Srinath
|
Google Oneindia Kannada News

Bangalore- Insane person rescued at JP Nagar Corporator Somashekar house
ಬೆಂಗಳೂರು, ನ.30: ಜೆಪಿ ನಗರದಲ್ಲಿ ಇಂದು ಬೆಳಗ್ಗೆ ದೊಡ್ಡ ಪ್ರಹಸನವೊಂದು ನಡೆದಿದೆ. ಬಿಬಿಎಂಪಿಯ ಸ್ಥಳೀಯ ಕಾರ್ಪೊರೇಟರ್ ಸೋಮಶೇಖರ್ ಅವರ ಬಹುಮಹಡಿ ಮನೆಯನ್ನು ಹತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕೆಳಗೆ ಹಾರಿ, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ನಿನ್ನೆ ರಾತ್ರಿ 2 ಗಂಟೆಯಲ್ಲಿ ಸದರಿ ವ್ಯಕ್ತಿ ಜೆಪಿ ನಗರದ 18ನೇ ಕ್ರಾಸ್ ನಲ್ಲಿರುವ ಕಾರ್ಪೊರೇಟರ್ ಮನೆಯ ನಾಲ್ಕನೆಯ ಮಹಡಿಯಲ್ಲಿ ಕಾಣಿಸಿಕೊಂಡಿದ್ದ. ಇದನ್ನು ಕಂಡ ಸ್ಥಳೀಯರು ಆ ವ್ಯಕ್ತಿಯನ್ನು ಕಳ್ಳನೆಂದು ಭಾವಿಸಿ, ಭಯಭೀತಗೊಂಡಿದ್ದರು.

ಆದರೆ ಆತ ಮಾನಸಿಕ ಅಸ್ವಸ್ಥನಂತೆ ಕಂಡುಬಂದಿದ್ದ. ಇದರಿಂದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿ, ಹೆಚ್ಚಿನ ಕಾರ್ಯಾಚರಣೆ ಕೈಗೊಳ್ಳುವಂತೆ ಕಾರ್ಪೊರೇಟರ್ ಸೋಮಶೇಖರ್ ಅವರು ಕೋರಿದ್ದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಆ ವ್ಯಕ್ತಿಯನ್ನು ಕೆಳಗಿಳಿಯುವಂತೆ ಸೂಚಿಸಿದರು. ಆದರೆ ಅವನು ಅದ್ಯಾವುದಕ್ಕೂ ಜಗ್ಗದೆ ತನ್ನ ಬಳಿಯಿದ್ದ ಚಾಕುವಿನಿಂದ ಪ್ರಾಣಾಪಾಯ ತಂದುಕೊಳ್ಳುವ ಭೀತಿ ಹುಟ್ಟುಹಾಕಿದ.

ಪೊಲೀಸರು ಅವನನ್ನು ಕಾಪಾಡಲು ಹರಸಾಹಸಪಟ್ಟರು. ಮನೆಯ ರಸ್ತೆ ಬದಿ ದೊಡ್ಡ ಬಲೆ ಬೀಸಿ ಅವನಿಗಾಗಿ ಕಾದುಕುಳಿತರು. ಈ ಮಧ್ಯೆ, ಒಬ್ಬರು ಮನೆಯ ಮಹಡಿಯೇರಿ ಅವನನ್ನು ಹಿಡಿಯಲು ಯತ್ನಿಸಿದರು.

ಆ ವೇಳೆ ಗಾಬರಿಗೊಂಡ ಆತ ಸೀದಾ ಕೆಳಗೆ ಹಾರಿದ್ದಾನೆ. ಆದರೆ ಕೆಳಗೆ ಬೃಹತ್ ನೆಟ್ ಇದ್ದುದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದಾನೆ. ತಕ್ಷಣವೇ ಆತನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಮೊದಲು ಸ್ಥಳೀಯ ಚಿರಾಗ್ ಆಸ್ಪತ್ರೆಗೆ ಆ ನಂತರ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೊಡಗು ವಿರಾಜಪೇಟೆಯಲ್ಲಿ ಹುಲಿಗೆ ಮತ್ತೊಬ್ಬ ಬಲಿ : ರಾಜ್ಯದಲ್ಲಿ ಅರಣ್ಯ ಭಾಗಗಳಲ್ಲಿ ಹುಲಿಗಳ ಕಾಟ ಹೆಚ್ಚಾಗುತ್ತಿದೆ. ಯುವ ಅರಣ್ಯ ವೀಕ್ಷಕನೊಬ್ಬನನ್ನು ಶುಕ್ರವಾರ ಸಂಜೆ ಹುಲಿ ತಿಂದು ತೇಗಿದೆ. ಸುರೇಶ್ (27) ಮೃತ ಯುವಕ. ಮೂಲತಃ ಕೊಡಗಹು ಜಿಲ್ಲೆ ತಿತಿಮತಿಯವನಾದ ಸುರೇಶ್, ಒಂದೂವರೆ ವರ್ಷದ ಹಿಂದೆ ಅರಣ್ಯ ಇಲಾಖೆಗೆ ಸೇರಿದ್ದ.

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಬಿಎಂಸಿ ಕ್ಯಾಂಪ್ ನಲ್ಲಿ ಅರಣ್ಯ ವೀಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ ಸುರೇಶ್ ನಿನ್ನೆ ತಡ ಸಂಜೆ ಬಹಿರ್ದೆಸೆಗೆಂದು ಅರಣ್ಯ ಭಾಗದತ್ತ ತೆರಳಿದಾಗ ಹುಲಿ ಆತನ ಮೇಲೆ ದಾಳಿ ಮಾಡಿದೆ. ಹುಲಿಯು ಆತನ ಕೈ ಕಾಲು ತಿಂದು ಹಾಕಿದೆ. ಇದರಿಂದ ಸುರೇಶ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

English summary
Bangalore- An insane person has been rescued at JP Nagar Corporator Somashekar house today morning by Fire force. The insane person who jumped into the big net spread at the ground was nabbed by the police and sent to NIMHANS hospital immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X