ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂ.ಉತ್ತರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಇಂದು ಉತ್ತರ

By Srinath
|
Google Oneindia Kannada News

ಬೆಂಗಳೂರು, ಮಾರ್ಚ್ 7: ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಕಗ್ಗಂಟಾಗಿದೆ. ಬಿಜೆಪಿಗೂ ಇದು ಕಗ್ಗಂಟಾಗಿತ್ತಾದರೂ ಇದೀಗ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಹೆಸರು ಅಖೈರಾಗಿದೆ. ಬಿಜೆಪಿ ವಕ್ತಾರೆ, ಕಿರುತೆರೆ ನಟಿ ಮಾಳವಿಕಾ ಅವಿನಾಶ್ ಅವರು ಒನ್ಇಂಡಿಯಾಕನ್ನಡಕ್ಕೆ ತಿಳಿಸಿರುವಂತೆ ಯಾವುದೇ ಗೊಂದಲವಿಲ್ಲದೆ ಸದಾನಂದ ಗೌಡರ ಹೆಸರು ಅಂತಿಮವಾಗಿದೆ.

ಕಾಂಗ್ರೆಸ್ ಪಕ್ಷವು ಕಗ್ಗಂಟು ಬಿಡಿಸಿಕೊಳ್ಳಲು ಅದಕ್ಕೊಂದು ಪರಿಹಾರ ಮಾರ್ಗ ಕಂಡುಕೊಂಡಿದೆ. ಅಮೆರಿಕದ ಮಾದರಿಯಲ್ಲಿ ಪಕ್ಷದೊಳಗೇ ಮೊದಲು ಆಂತರಿಕ ಚುನಾವಣೆ ನಡೆಸಿ, ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವುದು. ಅದಾದನಂತರ ಲೋಕಸಭೆಗೆ ಆಯ್ಕೆ ಮಾಡುವ ಜವಾಬ್ದಾರಿಯನ್ನು ಜನತೆಯ ಕೈಗೇ ಬಿಡುವುದು.

ದಕ್ಷಿಣ ಕನ್ನಡ ಕ್ಷೇತ್ರದಲ್ಲೂ ಪಕ್ಷವು ಇದೇ ನೀತಿಯನ್ನು ಅಳವಡಿಸಿಕೊಂಡು ಕೊನೆಗೆ ಮಂಗಳೂರಿನಲ್ಲಿ ಮಾರ್ಚ್ 9ರಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ (ಮಾಜಿ ಸಂಸದ, ಮಾಜಿ ಸಚಿವ, ಎಐಸಿಸಿ ಪದಾಧಿಕಾರಿ) ಮತ್ತು ಉದ್ಯಮಿ ಯು. ಕಣಚೂರು ಮೋನು (ಅಲ್ಪಸಂಖ್ಯಾತ ವಿಭಾಗದ ಪದಾಧಿಕಾರಿ) ನಡುವೆ ಆಂತರಿಕ ಚುನಾವಣೆ ಏರ್ಪಡುವಂತಿದೆ. ಕೊನೆ ಗಳಿಗೆಯಲ್ಲಿ ಕಣಚೂರು ಮೋನು ಅವರೂ ಸಹ ಕಣದಿಂದ ಹಿಂದೆ ಸರಿದು, ಜನಾರ್ದನ ಪೂಜಾರಿ ಹಾದಿ ಸುಗಮ ಮಾಡಿಕೊಡಲಿದ್ದಾರೆ ಎಂಬ ಮಾತಿದೆ.

ಆದರೆ ಪಕ್ಷಕ್ಕೆ ಮಂಗಳೂರಿನಲ್ಲಿ ಆಗಿದ್ದು ಬೆಂಗಳೂರಿನಲ್ಲಿ ನಡೆಯುವ ಲಕ್ಷಣಗಳಿಲ್ಲ. ಸ್ಪರ್ಧೆ ಬಿರುಸಾಗಿ ಸಾಗಿದೆ. ಹಾಗಾಗಿ ಮುಂದಿನ ಗುರುವಾರದಂದು (ಮಾರ್ಚ್ 13) ಆಂತರಿಕ ಚುನಾವಣೆ ನಡೆಸಿ, ಬೆಂಗಳೂರು ಉತ್ತರಕ್ಕೆ ಉತ್ತರ ಕಂಡುಕೊಳ್ಳಲು ಸಜ್ಜಾಗಿದೆ. ಯಾವುದಕ್ಕೂ ಇಂದು ಸಂಜೆ 4 ಗಂಟೆ ವೇಳೆಗೆ ಚಿತ್ರಣ ಸ್ಪಷ್ಟವಾಗಲಿದೆ.

ಇಂದು ಮತದಾರರ ಅಂತಿಮ ಪಟ್ಟಿ ಪರಿಷ್ಕರಣೆ

ಇಂದು ಮತದಾರರ ಅಂತಿಮ ಪಟ್ಟಿ ಪರಿಷ್ಕರಣೆ

ಪಕ್ಷದ ವತಿಯಿಂದ ನಾನಾ ಸಮಿತಿಗಳಲ್ಲಿರುವ ಒಟ್ಟು 476 ಮಂದಿಗೆ ಮತದಾನದ ಅವಕಾಶ ಕಲ್ಪಿಸಲಾಗಿದ್ದು, ಇವರೆಲ್ಲಾ ಸೇರಿ ಒಬ್ಬರನ್ನು ಬೆಂಗಳೂರು ಉತ್ತರದ ಅಭ್ಯರ್ಥಿಯನ್ನಾಗಿ ಚುನಾಯಿಸಲಿದ್ದಾರೆ. ಪಕ್ಷದ ವತಿಯಿಂದ ಚುನಾವಣಾಧಿಕಾರಿಗಳಾಗಿ ನಿಯೋಜಿತರಾಗಿರುವ ನಿತಿನ್ ನಿಂಬಾಳ್ಕರ್ ಮತ್ತು ಜಸ್ ಪ್ರೀತ್ ಸಿಂಗ್ ಅವರುಗಳು ನಿನ್ನೆ 476 ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇಂದು ಶುಕ್ರವಾರ 1 ಗಂಟೆಯೊಳಗಾಗಿ ಪಟ್ಟಿ ಪರಿಷ್ಕರಣೆಗೆ ಅವಕಾಶ ನೀಡಿದ್ದಾರೆ. ಭಾನುವಾರ ಮತದಾರರ ಅಂತಿಮ ಪಟ್ಟಿ ಪ್ರಕಟವಾಗಲಿದೆ.

ನಾಮಪತ್ರ ಸಲ್ಲಿಕೆಗೂ ಇಂದೇ ಅವಕಾಶ:

ನಾಮಪತ್ರ ಸಲ್ಲಿಕೆಗೂ ಇಂದೇ ಅವಕಾಶ:

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಬಯಸುವವರು ಇಂದು ಸಾಯಂಕಾಲ 4 ಗಂಟೆಯೊಳಗಾಗಿ ನಾಮಪತ್ರ ಸಲ್ಲಿಸಲು ಅವಕಾಶ ಇದೆ.

ಅಭ್ಯರ್ಥಿಗಳಿಗೇನೂ ಕೊರತೆಯಿಲ್ಲ!:

ಅಭ್ಯರ್ಥಿಗಳಿಗೇನೂ ಕೊರತೆಯಿಲ್ಲ!:

ಅಸಲಿಗೆ ಸ್ಪರ್ಧಾಳುಗಳು ಹೆಚ್ಚಾಗಿದ್ದರಿಂದಲೇ AICC ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅಮೆರಿಕ ಮಾದರಿ ಆಂತರಿಕ ಚುನಾವಣೆಗೆ ಆದೇಶಿಸಿರುವುದು. ಹಾಗಾಗಿ ಸ್ಪರ್ಧಾಳುಗಳ ಸಾಲು ಹೀಗಿದೆ: KPCC ಉಪಾಧ್ಯಕ್ಷ ಬಿಎಲ್ ಶಂಕರ್, ಪ್ರಧಾನ ಕಾರ್ಯದರ್ಶಿ ಜಿಸಿ ಚಂದ್ರಶೇಖರ್, ರಾಜೀವ್ ಗೌಡ, ರಮೇಶ್ ಬಿ ಗೌಡ, ಬೇಗಾನೆ ರಾಮಯ್ಯ ಅವರ ಪುತ್ರಿ ಆರತಿ ಕೃಷ್ಣ, ಕೆಸಿ ರಾಮಮೂರ್ತಿ, ಮುಂತಾದವರು.

ಇಂದು ಸಂಜೆ 4 ಗಂಟೆ ವೇಳೆಗೆ ಚಿತ್ರಣ ಸ್ಪಷ್ಟ

ಇಂದು ಸಂಜೆ 4 ಗಂಟೆ ವೇಳೆಗೆ ಚಿತ್ರಣ ಸ್ಪಷ್ಟ

ಇವರ ಪೈಕಿ ರಾಹುಲ್ ಗಾಂಧಿ ಅವರ ನಿಕಟ ಸಂಪರ್ಕ ಹೊಂದಿರುವ ಯುವ ನಾಯಕ, ಸ್ಥಳೀಯ ಶಾಸಕ, ಕೃಷಿ ಸಚಿವ ಕೃಷ್ಣ ಬೈರೇಗೌಡರು ಕೊನೆಯ ಕ್ಷಣದಲ್ಲಿ ಎಂಟ್ರಿ ಕೊಟ್ಟು ಅಂತಿಮವಾಗಿ ಬಿಎಲ್ ಶಂಕರ್ ಮತ್ತು ಕೃಷ್ಣ ಬೈರೇಗೌಡರ ಮಧ್ಯೆ ತುರುಸಿನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳು ಹೆಚ್ಚಾಗಿವೆ. ಯಾವುದಕ್ಕೂ ಇಂದು ಸಂಜೆ 4 ಗಂಟೆ ವೇಳೆಗೆ ಚಿತ್ರಣ ಸ್ಪಷ್ಟವಾಗಲಿದೆ.

ಬೆಂ. ಉತ್ತರ ಲೋಕಸಭಾ ಕ್ಷೇತ್ರದ ಕಿರುಪರಿಚಯ:

ಬೆಂ. ಉತ್ತರ ಲೋಕಸಭಾ ಕ್ಷೇತ್ರದ ಕಿರುಪರಿಚಯ:

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರಲಿವೆ: 1) ಕೆಆರ್ ಪುರಂ, 2) ಬ್ಯಾಟರಾಯನಪುರ, 3) ಯಶವಂತಪುರ, 4) ದಾಸರಹಳ್ಳಿ, 5) ಮಹಾಲಕ್ಷ್ಮಿ ಲೇಔಟ್, 6) ಮಲ್ಲೇಶ್ವರಂ, 7) ಹೆಬ್ಬಾಳ ಮತ್ತು 8) ಪುಲಿಕೇಶಿ ನಗರ.

ಇದುವರೆಗೂ ಯಾರೆಲ್ಲಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?

ಇದುವರೆಗೂ ಯಾರೆಲ್ಲಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?

ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1951: ಕೇಶವ ಅಯ್ಯಂಗಾರ್ (ಕಾಂಗ್ರೆಸ್)
1957: ಕೇಶವ ಅಯ್ಯಂಗಾರ್ (ಕಾಂಗ್ರೆಸ್)
1962: ಕೆ ಹನುಮಂತಯ್ಯ (ಕಾಂಗ್ರೆಸ್)
1967: ಕೆ ಹನುಮಂತಯ್ಯ (ಕಾಂಗ್ರೆಸ್)
1971: ಕೆ ಹನುಮಂತಯ್ಯ (ಕಾಂಗ್ರೆಸ್)

ಕರ್ನಾಟಕ ಉದಯವಾದ ನಂತರ ಯಾರೆಲ್ಲಾ ಪ್ರತಿನಿಧಿಸಿದ್ದಾರೆ?

ಕರ್ನಾಟಕ ಉದಯವಾದ ನಂತರ ಯಾರೆಲ್ಲಾ ಪ್ರತಿನಿಧಿಸಿದ್ದಾರೆ?

ಕರ್ನಾಟಕ ರಾಜ್ಯ ಉದಯವಾದಾಗ
1977: ಸಿಕೆ ಜಾಫರ್ ಷರೀಫ್, (ಕಾಂಗ್ರೆಸ್)
1980: ಸಿಕೆ ಜಾಫರ್ ಷರೀಫ್, (ಕಾಂಗ್ರೆಸ್)
1984: ಸಿಕೆ ಜಾಫರ್ ಷರೀಫ್, (ಕಾಂಗ್ರೆಸ್)
1989: ಸಿಕೆ ಜಾಫರ್ ಷರೀಫ್, (ಕಾಂಗ್ರೆಸ್)
1991: ಸಿಕೆ ಜಾಫರ್ ಷರೀಫ್, (ಕಾಂಗ್ರೆಸ್)
1996: ಸಿ ನಾರಾಯಣ ಸ್ವಾಮಿ, (ಜೆಡಿಎಸ್)
1998: ಸಿಕೆ ಜಾಫರ್ ಷರೀಫ್, (ಕಾಂಗ್ರೆಸ್)
1999: ಸಿಕೆ ಜಾಫರ್ ಷರೀಫ್, (ಕಾಂಗ್ರೆಸ್)
2004: ಎಚ್ ಟಿ ಸಾಂಗ್ಲಿಯಾನ, (ಬಿಜೆಪಿ)
2009: ಡಿಬಿ ಚಂದ್ರೇಗೌಡ, (ಬಿಜೆಪಿ)

English summary
Lok Sabha Polls 2014- Bangalore North Lok Sabha constituency Congress candidate internal election nomination today Mar 7. Many aspirants. Congress candidate internal election will be held on March 13. Also for Dakshina Kannada Congress candidate internal election will be on march 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X