ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ನೌಕರರಿಗೆ ಅ.6ರಂದು ಬಕ್ರೀದ್ ರಜೆ

|
Google Oneindia Kannada News

ಬೆಂಗಳೂರು, ಅ.1 : ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮವಾರ ಸರ್ಕಾರಿ ನೌಕರರಿಗೆ ಬಕ್ರೀದ್ ರಜೆ ನೀಡಬೇಕು ಎಂದು ಸಲ್ಲಿಸಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದು, ಸೋಮವಾರ ಅಧಿಕೃತವಾಗಿ ರಜೆ ಘೋಷಿಸಲಾಗಿದೆ.

ಹಿಂದಿನ ಸುದ್ದಿ : ಸಾಲು-ಸಾಲು ರಜೆಗಳು ಎದುರಾಗಿವೆ ಕರ್ನಾಟಕದ ಸರ್ಕಾರಿ ನೌಕರರಿಗೆ ಅ.6ರ ಸೋಮವಾರವೂ ರಜೆ ದೊರೆಯುವ ಸಾಧ್ಯತೆ ಇದೆ. ಬಕ್ರೀದ್ ರಜೆಯನ್ನು ಸೋಮವಾರ ನೀಡುವ ಪ್ರಸ್ತಾಪವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಿದ್ಧಪಡಿಸಿದ್ದು, ಮುಖ್ಯಮಂತ್ರಿಗಳ ಮುಂದಿಟ್ಟಿದೆ. ಇಂದು ಇದಕ್ಕೆ ಸಿಎಂ ಸಹಿ ಹಾಕುವ ಸಾಧ್ಯತೆ ಇದೆ.

ಪೂರ್ವನಿಗದಿಯಂತೆ ಭಾನುವಾರ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಬೇಕಿತ್ತು. ಮುಸ್ಲಿಂ ಸಂಪ್ರದಾಯದ ಪ್ರಕಾರ ಕರ್ನಾಟಕದಲ್ಲಿ ಸೋಮವಾರ ಹಬ್ಬದ ಆಚರಣೆ ಮಾಡುವುದರಿಂದ ಅಂದು ಸರ್ಕಾರಿ ರಜೆ ನೀಡುವ ಪ್ರಸ್ತಾವನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಿದ್ಧಪಡಿಸಿ, ಅದನ್ನು ಮುಖ್ಯಮಂತ್ರಿಗಳ ಒಪ್ಪಿಗೆಗಾಗಿ ಕಳುಹಿಸಿದೆ. [2014ರ ಸರ್ಕಾರಿ ರಜಾ ಪಟ್ಟಿ ಇಲ್ಲಿದೆ ನೋಡಿ]

Karnataka government

ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಮರಳಿದ ನಂತರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲಿದ್ದು, ನಂತರ ರಜೆಯ ಬಗ್ಗೆ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆದ್ದರಿಂದ ಗುರುವಾರದಿಂದ ಸರ್ಕಾರಿ ನೌಕರರಿಗೆ ಸಾಲು-ಸಾಲು ರಜೆ ದೊರೆಯಲಿದೆ.

ಸ್ವಚ್ಛತಾ ಆಂದೋಲನಾ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅ.2ರ ಗಾಂಧಿ ಜಯಂತಿಯಂದು 'ಸ್ವಚ್ಛ ಭಾರತ' ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ರಾಷ್ಟ್ರೀಯ ರಜಾದಿನವನ್ನು ರದ್ದುಪಡಿಸಲಾಗಿದೆ. ಎಲ್ಲಾ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ. [ಸ್ವಚ್ಛ ಭಾರತ ಅಭಿಯಾನಕ್ಕಾಗಿ ಗಾಂಧಿ ಜಯಂತಿ ರಜೆ ಇಲ್ಲ]

ಕರ್ನಾಟಕ ಸರ್ಕಾರ ಸಹ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಎಲ್ಲಾ ನೌಕರರು ಕಡ್ಡಾಯವಾಗಿ ಕಚೇರಿಗೆ ಆಗಮಿಸಬೇಕು ಎಂದು ಹೇಳಿದೆ. ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಿದ್ದಾರೆ. ಕೇಂದ್ರ ಸರ್ಕಾರದಂತೆ ರಜಾ ದಿನ ರದ್ದುಪಡಿಸಬೇಕೇ? ಎಂಬ ಕುರಿತು ಅಂತಿಮ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ.

ಸಾಲು-ಸಾಲು ರಜೆಗಳು
* ಅ.2 ಗಾಂಧಿ ಜಯಂತಿ
* ಅ.3 ಆಯುಧಪೂಜಾ
* ಅ.4 ವಿಜಯದಶಮಿ
* ಅ. 5 ಭಾನುವಾರ
* ಅ. 6 ಬಕ್ರೀದ್

English summary
The Karnataka government is likely to a declare holiday on October 6, on the occasion of Bakrid. A government order to this effect may be issued on Wednesday. The Department of Personnel and Administrative Reforms has submitted a proposal in this regard to the Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X