ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶ್ವಿನಿ ನಾಚಪ್ಪ ಕ್ರೆಡಿಟ್ ಕಾರ್ಡ್ ಕಳವು; 1.7 ಲಕ್ಷ ಡ್ರಾ

By Srinath
|
Google Oneindia Kannada News

Former athlete Ashwini Nachappa loses Credit Card and money at Jayanagar Bangalore
ಬೆಂಗಳೂರು, ಡಿ. 3: ಒಂದು ಕಾಲದ ಖ್ಯಾತ ಅಥ್ಲೀಟ್ ಅಶ್ವಿನಿ ನಾಚಪ್ಪ ಅವರ ಕ್ರೆಡಿಟ್ ಕಾರ್ಡ್ ಕಳುವಾಗಿದೆ. ಆದರೆ ವಿಷಯ ಅದಲ್ಲಾ ಆ ಕಳುವಾದ ಕಾರ್ಡ್ ಬಳಸಿ ಸುಮಾರು 2 ಲಕ್ಷ ರೂ. ಡ್ರಾ ಮಾಡಲಾಗಿದೆ.

ಇಂದು ಬೆಳಗ್ಗೆ ಏನಾಯ್ತು ಅಂದರೆ 47 ವರ್ಷದ ಅಶ್ವಿನಿ ನಾಚಪ್ಪಾ ಅವರು ಅತಿಥಿಯಾಗಿ ಫೇಮ್ ಇಂಡಿಯಾ ಅಥ್ಲೆಟಿಕ್ಸ್ ಕಾರ್ಯಕ್ರಮದಲ್ಲಿ (ಹೆಚ್ಚಿನ ಮಾಹಿತಿಗೆ ಪಕ್ಕದ ಚಿತ್ರ ನೋಡಿ) ಪಾಲ್ಗೊಂಡಿದ್ದರು. ಅಮಾಯಕ ಅಶ್ವಿನಿ ನಾಚಪ್ಪ ಅವರು ಮಾಡಿದ ತಪ್ಪೆಂದರೆ ವೇದಿಕೆಯ ಮೇಲೆ ತಮ್ಮ ಹ್ಯಾಂಡ್ ಬ್ಯಾಗ್ ಇಟ್ಟು, ವೇದಿಕೆಯಿಂದ ಕೆಳಗಿಳಿದು ಹೋಗಿದ್ದಾರೆ.

ಸರಿಯಾಗಿ ಅದೇ ವೇಳೆಗೆ ಖದೀಮ ಯಾವೋನೂ ಅವರ ಬ್ಯಾಗ್ ಎಗರಿಸಿಬಿಟ್ಟಿದ್ದಾನೆ. ಆದರೆ ಅದೇ ಬ್ಯಾಗಿನಲ್ಲಿ ಅಶ್ವಿನಿ ಅವರು ಬ್ಯಾಂಕ್ ಕ್ರೆಡಿಟ್ ಕಾರ್ಡನ್ನು ಇಟ್ಟಿದ್ದರು. ಖದೀಮನಿಗೆ ಅದು ಕಂಡಾಕ್ಷಣ ನಿಧಿ ಸಿಕ್ಕಿದಂತಾಗಿದೆ.

ಆದರೆ ಬರೀ ಕಾರ್ಡ್ ದೊರೆತರೆ ಏನು ಪ್ರಯೋಜನ? ಅದರಿಂದ ಹಣ ಡ್ರಾ ಮಾಡಲು ಪಿನ್ ನಂಬರ್ ಬೇಕಲ್ಲವಾ? ಆದರೂ ಖದೀಮ ನಿರಾಶನಾಗದೆ ಕಾರ್ಡನ್ನು ಕೈಯಲ್ಲಿ ಹಿಡಿದು ಹಿಂದು ಮುಂದು ಎಲ್ಲಾ ತಿರುಗಾಡಿಸಿ ತಲೆ ಕೆಡಿಸಿಕೊಂಡಿದ್ದಾನೆ. ಆಗ ಕಾಣಿಸಿಕೊಂಡಿದೆ ಕಾರ್ಡ್ ಹಿಂಬದಿಯಿದ್ದ ನಾಲ್ಕು ನಂಬರುಗಳು!

ಹೌದು ಪಿನ್ ನಂಬರ್ ಮರೆತುಹೋಗಬಹುದು ಎಂದು ಸ್ವತಃ ಅಶ್ವಿನಿಯವರೇ ಅದನ್ನು ಕಾರ್ಡ್ ಹಿಂಬದಿ ಸ್ಪಷ್ಟವಾಗಿ ಬರೆದಿಟ್ಟಿದ್ದರು. (ಬಹುತೇಕ ಹೆಣ್ಣುಮಕ್ಕಳು ಮಾಡುವ ತಪ್ಪು ಇದೇ ರೀ!) ಅದೇ ಪಿನ್ ನಂಬರ್ ಎಂದು ಖಾತ್ರಿ ಪಡಿಸಿಕೊಂಡ ಖದೀಮ ಸರಸರನೆ ಸಮೀಪದ ಎಟಿಎಂ ಕೇಂದ್ರಕ್ಕೆ ನುಗ್ಗಿ ಚಕಚಕನೆ ಬರೋಬ್ಬರಿ 1.75 ಲಕ್ಷ ರೂ ಡ್ರಾ ಮಾಡಿದ್ದಾನೆ.

ಸರಿಯಾಗಿ ಅದೇ ಸಮಯದಲ್ಲಿ ಇತ್ತ ಮೇಡಂ ಅಶ್ವಿನಿ ಅವರ ಮೊಬೈಲ್ ವೈಬ್ರೇಟ್ ಆಗಿದೆ. ಏನೋ ಮೆಸೇಜ್ ಬಂತಲ್ಲಾ ಎಂದು ಮೇಡಂ ನೋಡಿದ್ದಾರೆ. ನಿಮ್ಮ ಖಾತೆಯಿಂದ ಇಂತಿಂಥ ಎಟಿಎಂ ಕೇಂದ್ರದಿಂದ ಇಷ್ಟು ಮೊತ್ತವನ್ನು ಡ್ರಾ ಮಾಡಿದ್ದೀರಿ, ಧನ್ಯವಾದಗಳು ಎಂಬ SMS ಸಂದೇಶ ಬಂದಿದೆ. ಅದನ್ನು ನೋಡಿ ಅಶ್ವಿನಿ ನಾಚಪ್ಪಗೆ ತಾವು ನಿಂತಿರುವ ನೆಲ ಕುಸಿದಂತಾಗಿದೆ. ಎಲ್ಲೋ ಏನೋ ಯಡವಟ್ಟಾಗಿದೆ ಎಂಬುದು ಮನವರಿಕೆಯಾಗಿದೆ.

ತಕ್ಷಣ ಬ್ಯಾಂಕಿಗೆ ಫೋನ್ ಮಾಡಿ ತಮ್ಮ ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಕಳ್ಳ ಕೊಳ್ಳೆ ಹೊಡೆದಾಗಿತ್ತು! ಇದೀಗ ಜಯನಗರ ಪೊಲೀಸ್ ಠಾಣೆಯಲ್ಲಿ ಮೇಡಂ ಅಶ್ವಿನಿ ದೂರು ದಾಖಲಿಸಿದ್ದಾರೆ. ಕಳೆದು ಹೋದ ಕಾರ್ಡು, ಪರ್ಸು, ದುಡ್ಡು ಸಿಗುತ್ತದಾ? ನಿಮ್ಮ ಕಾರ್ಡು ಜೋಪಾನ!

English summary
Former athlete Ashwini Nachappa loses Credit Card alongwith handbag. The thief immediately withdraws Rs 1.75 lakh money by using the stolen card at Jayanagar Bangalore on Dec 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X