ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಮದ್ಯ ಮಾರಾಟ ; ಲೀಟರುಗಳ ಲೆಕ್ಕದಲ್ಲಿ

By Shami
|
Google Oneindia Kannada News

ಬೆಂಗಳೂರು, ಜೂ. 26 : ಕಳೆದ ಆರ್ಥಿಕ ವರ್ಷದಲ್ಲಿ (13-14) ಕರ್ನಾಟಕ ಪಾನೀಯ ನಿಗಮವು 6,699 ಲಕ್ಷ ಲೀಟರ್‌ ಸ್ವದೇಶಿ ಮದ್ಯ ಮತ್ತು 9 ಲಕ್ಷ ಲೀಟರ್‌ ವಿದೇಶಿ ಮದ್ಯವನ್ನು ಮಾರಾಟ ಮಾಡಿದೆ ಎಂದು ಯಮಕನಮರಡಿ ಶಾಸಕ, ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಬಸವಕಲ್ಯಾಣದ ಜೆಡಿಎಸ್‌ ಶಾಸಕ ಮಲ್ಲಿಕಾರ್ಜುನ ಖೂಬಾ ಅವರ ಪ್ರಶ್ನೆಗೆ ನಿನ್ನೆ ಅಂದರೆ ಬುಧವಾರ ಲಿಖಿತ ಉತ್ತರ ನೀಡಿದ ಸಚಿವರು, 'ಕಳೆದ ವರ್ಷ ಪಾನೀಯ ನಿಗಮಕ್ಕೆ 6,777 ಲಕ್ಷ ಲೀ. ಸ್ವದೇಶಿ ಮದ್ಯ ಮತ್ತು 9 ಲಕ್ಷ ವಿದೇಶಿ ಮದ್ಯ ಸರಬರಾಜು ಆಗಿತ್ತು ಎಂದರು.

ಈ ಪೈಕಿ 6,699 ಲಕ್ಷ ಲೀಟರ್‌ ಸ್ವದೇಶಿ ಮದ್ಯ ಮತ್ತು 9 ಲಕ್ಷ ಲೀಟರ್‌ ವಿದೇಶಿ ಮಾರಾಟವಾಗಿದ್ದು ಸರಕಾರಕ್ಕೆ ಒಟ್ಟು 12,072.01 ಕೋಟಿ ರೂಪಾಯಿ ವರಮಾನ ಬಂದಿದೆ' ಎಂದು ಸಚಿವರು ಅಂಕಿ ಅಂಶ ನೀಡಿದರು.

Alcohol sales in Karnataka during fiscal 2013-14 in litres

ಇದೇ ಅವಧಿಯಲ್ಲಿ ಕಲಬೆರಕೆ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 11 ಪ್ರಕರಣಗಳು ದಾಖಲಾಗಿದ್ದವು. ಇಲಾಖಾ ಮಟ್ಟದಲ್ಲಿ ದಂಡ ವಿಧಿಸಿ ಆರು ಪ್ರಕರಣ ಇತ್ಯರ್ಥಪಡಿಸಲಾಗಿದೆ. ಐದು ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ಸತೀಶ್ ಜಾರಕಿಹೊಳಿ ಸದನಕ್ಕೆ ಮಾಹಿತಿ ನೀಡಿದರು.

ಮದ್ಯ ಸರಬರಾಜು ಮಾಡುವ ಹೊಣೆಯನ್ನು ಸರಕಾರವೇ ಹೊತ್ತುಕೊಂಡಿದೆ. ಅದಕ್ಕಾಗಿ ಪಾನೀಯ ನಿಗಮವನ್ನೂ ಸ್ಥಾಪಿಸಿದೆ. ರಾಜ್ಯದ ನಾನಾ ಭಾಗಗಳಲ್ಲಿರುವ ಡಿಪೊಗಳ ಮೂಲಕ ಮದ್ಯ ಪೂರೈಕೆ ವ್ಯವಸ್ಥಿತವಾಗಿ ಆಗುತ್ತದೆ.

ಕೊನೆ ಗುಟುಕು : ರಾಜ್ಯದಲ್ಲಿ ನಿಧನಿಧಾನವಾಗಿ ಬರಗಾಲ ಆವರಿಸಿಕೊಳ್ಳುತ್ತಿದೆ. ಯಾರನ್ನೂ ನಂಬುವ ಕಾಲ ಇದಲ್ಲ, ಈಚೀಚೆಗಂತೂ ಮುಂಗಾರು ಮಳೆಯನ್ನೂ ನಂಬುವ ಹಾಗಿಲ್ಲ. ಕುಡಿಯುವ ನೀರಿಗೂ ತತ್ವಾರ. ಆದರೆ, ಬೀರು, ಬ್ರಾಂಡಿ, ವಿಸ್ಕಿ, ರಮ್ಮು, ವೋಡ್ಕ, ವೈನು ಮುಂತಾದುವಕ್ಕೆ ಬರಗಾಲ ಇಲ್ಲ. ಏನೋ ಅಂತೂ ದ್ರವ ಪೂರೈಕೆಗೆ ಹಾಗೂಹೀಗೂ ಕೊರತೆಯಿಲ್ಲ ಎನ್ನಬಹುದು.

English summary
Karnataka State Beverages corporation has sold 6,699 lac liters of indigenous alcohol and 9 lacs of Indian made foreign liquor (IMFL) during fiscal 2013-14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X