ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಗಮ-ಮಂಡಳಿ ನೇಮಕಕ್ಕೆ ಎಐಸಿಸಿ ಮಾರ್ಗಸೂಚಿಗಳು

|
Google Oneindia Kannada News

ಬೆಂಗಳೂರು, ಸೆ.1 : ಉಪ ಚುನಾವಣೆ ಗೆಲುವಿನ ಬಳಿಕ ನಿಗಮ ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡಲು ಕರ್ನಾಟಕ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಈ ನೇಮಕಾತಿ ವೇಳೆ ಕೆಲವೊಂದು ಮಾರ್ಗಸೂಚಿಗಳನ್ನು ಪಾಲಿಸುವಂತೆ ಎಐಸಿಸಿ ಸೂಚನೆ ನೀಡಿದ್ದು, ಮಾರ್ಗಸೂಚಿಗಳನ್ನು ಕೆಪಿಸಿಸಿಗೆ ರವಾನಿಸಿದೆ.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಸಮನ್ವಯ ಸಮಿತಿ ಸಭೆ ಮುಗಿಸಿಕೊಂಡು ದೆಹಲಿಗೆ ತೆರಳಿದ ಬಳಿಕ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಗೆ ಕಳುಹಿಸಿಕೊಟ್ಟಿದ್ದಾರೆ. ಯುವಕರಿಗೆ ಮತ್ತು ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಲಾಗಿದೆ. [ರಾಜ್ಯಪಾಲರ ನೇಮಕ, ಸಿದ್ದರಾಮಯ್ಯ ಅಸಮಾಧಾನ]

AICC

ನೇಮಕಾತಿ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ದೂರವಿಡಿ, ಕ್ರಿಮಿನಲ್ ಹಿನ್ನಲೆಯುಳ್ಳವರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಡಿ ಎಂದು ಎಐಸಿಸಿ ರಾಜ್ಯ ನಾಯಕರಿಗೆ ಖಡಕ್ ಸೂಚನೆ ನೀಡಿದೆ. [ಸಮನ್ವಯ ಸಮಿತಿ ಸಭೆ ಮುಖ್ಯಾಂಶಗಳು]

ಮಾರ್ಗಸೂಚಿಯಲ್ಲಿನ ಪ್ರಮುಖ ಅಂಶಗಳು
* ಪಕ್ಷ ವಿರೋಧಿಗಳನ್ನು ನೇಮಕಾತಿ ವೇಳೆ ಪರಿಗಣಿಸಬಾರದು
*ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರಿಗೆ ಅವಕಾಶ ಬೇಡ ನೀಡಬಾರದು
*ಪಕ್ಷದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದವರಿಗೆ ಆದ್ಯತೆ ನೀಡಬೇಕು
* ಹೊಸದಾಗಿ ಪಕ್ಷ ಸೇರ್ಪಡೆಗೊಂಡವರಿಗೆ ಅವಕಾಶ ಬೇಡ
*ಯಾವುದೇ ಪ್ರಭಾವಕ್ಕೆ ಮಣಿಯದೆ ನಿಷ್ಠಾವಂತರಿಗೆ ಸ್ಥಾನ-ಮಾನ ನೀಡಿ
*ಯುವಕರಿಗೆ ಮತ್ತು ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡಿಬೇಕು
* ಪ್ರಾದೇಶಿಕ ಸಮತೋಲನದಡಿ ಎಲ್ಲಾ ವರ್ಗ, ಜಿಲ್ಲೆಗಳಿಗೂ ಅವಕಾಶ ಕೊಡಬೇಕು
*ಮೂಲ ಕಾಂಗ್ರೆಸ್ಸಿಗರಿಗೆ ಮತ್ತು ಅವಕಾಶ ವಂಚಿತರಿಗೆ ಹೆಚ್ಚು ಸ್ಥಾನ ನೀಡಬೇಕು
*ಕ್ರಿಮಿನಲ್ ಆರೋಪ ಎದುರಿಸುತ್ತಿರುವವರನ್ನು ದೂರವಿಡಿ
*ಸಾರ್ವಜನಿಕ ಜೀವನದಲ್ಲಿ ಕ್ಲೀನ್ ಇಮೇಜ್ ಮತ್ತು ಯುವ ನಾಯಕತ್ವ ನೋಡಿ ಅವಕಾಶ ನೀಡಬೇಕು [ಪಿಟಿಐ ಚಿತ್ರ]

English summary
The All India Congress Committee (AICC) has reportedly issued guidelines to the Karnataka Pradesh Congress Committee (KPCC) on appointments to the posts of various boards and corporations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X