ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಳವೆ ಬಾವಿ ದುರಂತ: ದುನಿಯಾ ವಿಜಯ್ ಹೇಳಿದ್ದು ಕೇಳಿ!

By Mahesh
|
Google Oneindia Kannada News

'ಕ್ಯೂರಿಯಾಸಿಟಿ'ಗೆ ಸಿಕ್ಕ ಬೆಲೆ 'ಹ್ಯೂಮಾನಿಟಿ'ಗೆ ಸಿಕ್ಕಿಲ್ಲ. "CURIOSITY"ಗೆ ಮಂಗಳನ ಅಂಗಳ ಮುಟ್ಟಿರುವ ಮೇಧಾವಿಗಳು, ಮಾನವೀಯತೆಗೆ ಕೇವಲ ನೂರು ಆಳದಲ್ಲಿ ಬಿದ್ದ ಮಗುವನ್ನು ರಕ್ಷಿಸುವ ಯೋಚನೆಗಳನ್ನು ಮಾಡಬಾರದೇ! ಎಂದು ನಟ ದುನಿಯಾ ವಿಜಯ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಕೇಳಿದ್ದಾರೆ.

ಗಂಟೆಗೆ 20000kmವೇಗ Rocket.,3.5 ತಿಂಗಳುಗಳ ಕಾಲ ಉರಿದು ಮಂಗಳನ ಅಂಗಳ ತಲುಪಿ., ಸಾವಿರಾರು ವರ್ಷಗಳ ಹಿಂದೆ ನೀರಿತ್ತೇ ಎಂದು ಅಧ್ಯಯನ ಮಾಡುವ "CURIOSITY" ಉಳ್ಳ ನಮ್ಮ ಸಂಶೋಧಕರು ಕೇವಲ ನೂರು ಚಿಲ್ಲರೆ ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಬದುಕಿರುವ ಜೀವವನ್ನು ರಕ್ಷಿಸುವ ಯಂತ್ರ ತಯಾರು ಮಾಡಬಾರದೇಕೆ!

ಒಂದೂರಿನಲ್ಲಿ ಸಾವಿರ ಮನೆ ಎಂದರೂ.,ಮನೆಗೊಬ್ಬ ಮಗನಿದ್ದರೂ, 750 YOUTHS ಎಂದು ಅಂದಾಜು ಮಾಡೋಣ... ಆ ಊರಲ್ಲಿ ಅಮ್ಮಮ್ಮಾ ಎಂದರೆ ನೂರು ತೆರೆದ ಕೊಳವೆ ಬಾವಿಗಳಿರಬಹುದು ..!!

8.,10 ಯುವಕರ ತಂಡ ಕಟ್ಟಿಕೊಂಡರೇ ಸಾಕು.,ಒಂದೂರಿನ ಎಲ್ಲಾ ತೆರೆದ ಕೊಳವೆಗಳನ್ನು ಒಂದು ರಜಾದಿನದಲ್ಲಿ ಮುಚ್ಚಿಬಿಡಬಹುದು...!!!!
ಸರ್ಕಾರದ ನೀತಿ ನಿಯಮ., ಕಾನೂನು.,ಭೂಮಾಲೀಕರ ಜವಾಬ್ದಾರಿ ಎಲ್ಲವನ್ನೂ ಬಿಟ್ಟು ನಮ್ಮ ಕೈಲಿ ಈ ಕೆಲಸವಂತೂ ಕೆಲಸ ಖಂಡಿತಾ ಸಾಧ್ಯ...!!!
ಇದನ್ನು ಓದಿ ಎಲ್ಲಾದರೂ ಒಂದೇ ಒಂದು ಯುವಕರ ಗುಂಪು ಎಚ್ಚೆತ್ತುಕೊಂಡರೂ ಇಂದಿನ ಈ ವಿಷಯ ಸಾರ್ಥಕ..

ಮತ್ತು..ಭಾವನೆಗಳನ್ನೂ ಅರ್ಥ ಮಾಡಿಕೊಳ್ಳುವ "MACHINE"ಗಳನ್ನೂ ಕಂಡುಹಿಡಿದಿರುವ ನಮ್ಮ "GENIUS"ಗಳು, ಕೇವಲ ನೂರು ಅಡಿ ಆಳಗಳಲ್ಲಿ ಸಿಕ್ಕಿ ಸಾವನ್ನಪ್ಪುವ ಜೀವವನ್ನು ಉಳಿಸುವ ಯಂತ್ರವೊಂದನ್ನು ತಯಾರು ಮಾಡಬಾರದೇ?

ಒಂದು ಆಶಾಕಿರಣ ಮೂಡಿಸಬಾರದೇ

ಒಂದು ಆಶಾಕಿರಣ ಮೂಡಿಸಬಾರದೇ

ಸತ್ತ, ಕೊಳೆತ ಮಗ್ಧ ಜೀವಗಳ ದೇಹಕ್ಕೋಸ್ಕರ ಮಾತ್ರ ಇಷ್ಟೆಲ್ಲಾ ಪ್ರಯತ್ನ ಪಡಬೇಕೇ? ಏನೇನೋ ಕಂಡಿಹಿಡಿದಿರುವ ನಮ್ಮ ತಂತ್ರಜ್ಞರು ಇದಕ್ಕಾಗಿ ಸ್ವಲ್ಪ ಸಮಯ ಆಲೋಚನೆ ಮೀಸಲಿಟ್ಟು ಒಂದು ಆಶಾಕಿರಣ ಮೂಡಿಸಬಾರದೇ!

ದರ್ಶನ್ ಬದುಕಿ ಬಂದದ್ದೇ ದಾಖಲೆ

ದರ್ಶನ್ ಬದುಕಿ ಬಂದದ್ದೇ ದಾಖಲೆ

* ಮಣಿಕಂದನ್ ಅವರ ಬೋರ್ ವೆಲ್ ರಾಬೋಟ್ ಮೂಲಕ ಅಂದು 300 ಅಡಿ ಆಳಕ್ಕೆ ಸಿಲುಕಿದ್ದ ದರ್ಶನ್ ಎಂಬ ಬಾಲಕನನ್ನು ರಕ್ಷಿಸಲಾಯಿತು.

ಮಿಕ್ಕವೆಲ್ಲ ದುಃಖಕರ ಸುದ್ದಿ ತಂದಿವೆ.

ಮಿಕ್ಕವೆಲ್ಲ ದುಃಖಕರ ಸುದ್ದಿ ತಂದಿವೆ.

* ನಮ್ಮ ಸೇನೆಯ ಯೋಧರು ಪ್ರಿನ್ಸ್ ಎಂಬ ಬಾಲಕನನ್ನು ರಕ್ಷಿಸಿದರೂ ಎರಡು ಹೃದಯಗಳು ದುರಂತವನ್ನು ತಪ್ಪಿಸಿಕೊಂಡಿದ್ದು ಬಿಟ್ಟರೆ ಮಿಕ್ಕವೆಲ್ಲ ದುಃಖಕರ ಸುದ್ದಿ ತಂದಿವೆ. They are only two souls to escape the tragedy till date

ಮಾಹಿ, ಅಕ್ಷತಾ ಸಾವಿನ ದುಃಖ ಮರೆಯಾಗಿಲ್ಲ

ಮಾಹಿ, ಅಕ್ಷತಾ ಸಾವಿನ ದುಃಖ ಮರೆಯಾಗಿಲ್ಲ

ಮಾಹಿ, ಅಕ್ಷತಾ ಸಾವಿನ ದುಃಖ ಮರೆಯಾಗಿಲ್ಲ.... the land around the borewell has turned into a excavation site.. but with no wnd positive outcome

ಮಾನವತಾವಾದಿ ದುನಿಯಾ ವಿಜಯ್

ಮಾನವತಾವಾದಿ ದುನಿಯಾ ವಿಜಯ್

ದುನಿಯಾ ವಿಜಯ್ ಸಿನಿಮಾದಲ್ಲಿ ಮಾಡೋ ಪಾತ್ರಗಳಲ್ಲಿ ಮಾತ್ರ ಹೀರೋ ಅಲ್ಲ, ಅವರು ನಿಜಜೀವನದಲ್ಲೂ ಹೀರೋ. ಕಷ್ಟ ಅಂತ ಮನೆಗೆ ಬರೋ ಅದೆಷ್ಟೋ ಜನರಿಗೆ ವಿಜಿ ಸಹಾಯಮಾಡ್ತಾರೆ. ವಿಜಿ ಸರಿಯಾಗಿ ಯೋಚನೆ ಮಾಡೀನೇ ಇಂತಹಾ ಕೆಲಸಗಳನ್ನೆಲ್ಲಾ ಮಾಡ್ತಾರೆ. ಹೆಚ್ಚಿನ ವಿವರ ಇಲ್ಲಿ ಓದಿ

English summary
Actor Duniya Vijay has urged Government authorities and Technologists to find solution to curb Borewell tragedy. Man's curiosity has landed him on mars, 55million kms away, but his humanity is still failing to rescue a child just few feet below says his Facebook page post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X