ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮ್ ಆದ್ಮಿ ಪಕ್ಷ ಕರ್ನಾಟಕದ ಅಭ್ಯರ್ಥಿಗಳ ಪರಿಚಯ

By Mahesh
|
Google Oneindia Kannada News

ಬೆಂಗಳೂರು, ಮಾ.12: ಮುಂಬರುವ ಲೋಕಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ತನ್ನ ನಾಲ್ಕನೇ ಪಟ್ಟಿಯಲ್ಲಿ ಕರ್ನಾಟಕದ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಲಿರುವ ಅಭ್ಯರ್ಥಿಗಳನ್ನು ಹೆಸರಿಸಿದೆ. ಇನ್ಫೋಸಿಸ್ ನ ಮಾಜಿ ಸಿಎಫ್ ಒ ವಿ. ಬಾಲಕೃಷ್ಣನ್, ಡಾ. ಬಿಟಿ ಲಲಿತಾ ನಾಯಕ್, ರವಿಕೃಷ್ಣಾ ರೆಡ್ಡಿ ಸೇರಿದಂತೆ ಒಟ್ಟು 13 ಜನರು ಪಟ್ಟಿಯಲ್ಲಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ಈ ವಾರ ಬೆಂಗಳೂರಿಗೆ ಆಗಮಿಸಿ ರೋಡ್ ಶೋ, ಪ್ರಚಾರ ಮೆರವಣಿಗೆ ನಡೆಸಲಿದ್ದಾರೆ. ನಂತರ ಇನ್ನುಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಲಾಗುವುದು ಎಂದು ಎಎಪಿ ಕರ್ನಾಟಕ ಪ್ರಕಟಿಸಿದೆ.

'ಐಐಟಿ ಪದವಿಧರರೊಬ್ಬರ ಅತ್ಯಂತ ಯಶಸ್ವಿ ಕಂಪನಿ ಎಂದರೆ ಆಮ್ ಆದ್ಮಿ ಪಕ್ಷ. ದೇಶದಲ್ಲಿ ನಡೆಯುತ್ತಿರುವ ಈ ಕ್ರಾಂತಿಯಲ್ಲಿ ಭಾಗವಹಿಸಲು ನಾನು ಬಯಸುತ್ತೇನೆ. ಕೇವಲ 10 ರೂ. ಕೊಟ್ಟು ನಾನು ಪಕ್ಷದ ಸದಸ್ಯನಾಗಿದ್ದೇನೆ. ಎಎಪಿ ಜನ ಸಾಮಾನ್ಯರ ಒಳಿತಿಗೆ ಸಾಕಷ್ಟು ಕೆಲಸಗಳನ್ನು ಮಾಡಲಿದೆ ಎಂಬ ವಿಶ್ವಾಸ ನನಗಿದೆ'' ಎಂದು ಅವರು ಎಎಪಿ ಪಕ್ಷ ಸೇರಿದಾಗ ಬಾಲಕೃಷ್ಣನ್ ಹೇಳಿದ್ದರು. ಇದೇ ರೀತಿ ವಿವಿಧ ರಂಗಗಳಿಂದ ಬಂದಿರುವ ಸಾಧಕರು ಜನ ಸಾಮಾನ್ಯರ ಪಕ್ಷದ ಅಭ್ಯರ್ಥಿಗಳಾಗಿದ್ದು ಜನ ಪ್ರತಿನಿಧಿಗಳಾಗಿ ಲೋಕಸಭೆ ಪ್ರವೇಶ ಬಯಸಿದ್ದಾರೆ. ಕರ್ನಾಟಕದ ಅಭ್ಯರ್ಥಿಗಳ ಕಿರು ಪರಿಚಯ ಇಲ್ಲಿದೆ...

ಎಎಪಿ ಕರ್ನಾಟಕದ ಅಭ್ಯರ್ಥಿಗಳ ಪರಿಚಯ

ಎಎಪಿ ಕರ್ನಾಟಕದ ಅಭ್ಯರ್ಥಿಗಳ ಪರಿಚಯ

ಹೆಸರು: ಅಸ್ಫಾಕ್ ಅಹ್ಮದ್ ಮಡಕಿ
ಕ್ಷೇತ್ರ: ಚಿಕ್ಕೋಡಿ,
ಶಿಕ್ಷಣ: ಎಂಬಿಎ
ವಯಸ್ಸು: 36
ವೃತ್ತಿ: ಸಾಮಾಜಿಕ ಕಾರ್ಯಕರ್ತ/ಉದ್ಯಮಿ

ಬೆಳಗಾವಿಯಲ್ಲಿ ಸಾಹಿತ್ಯ ಕ್ಲಬ್ ಸ್ಥಾಪಿಸಿ ಸುಮಾರು 18 ವರ್ಷಗಳ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಸಾಹಿತ್ಯ,ಶಿಕ್ಷಣ, ಉದ್ಯೋಗ ತರಬೇತಿ, ರಾಜಕೀಯ, ಸಾಮಾಜಿಕ ಕಾರ್ಯಗಳ ಬಗ್ಗೆ ಅನೇಕ ಕಡೆ ಉಪನ್ಯಾಸ ನೀಡಿದ್ದಾರೆ.

ರಾಯಚೂರು ಕ್ಷೇತ್ರದ ಎಎಪಿ ಅಭ್ಯರ್ಥಿ

ರಾಯಚೂರು ಕ್ಷೇತ್ರದ ಎಎಪಿ ಅಭ್ಯರ್ಥಿ

ಹೆಸರು: ಭೀಮರಾಯ
ಕ್ಷೇತ್ರ: ರಾಯಚೂರು
ಶಿಕ್ಷಣ: ಎಲೆಕ್ಕ್ಟಿಕಲ್ ವಿಷಯದಲ್ಲಿ ಡಿಪ್ಲೋಮಾ
ವಯಸ್ಸು : 57
ವೃತ್ತಿ : ರೈತ
* 30 ವರ್ಷಗಳ ಕಾಲ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಕರ್ನಾಟಕ ರಾಜ್ಯ ಕಾರ್ಮಿಕ ಸಂಘದ ಸದಸ್ಯ, ರಾಘವೇಂದ್ರ ಕುಷ್ಟಗಿ ಅವರ ನೇತೃತ್ವದ ಜನ ಸಂಘ ಪರಿಷತ್ ನ ಸದಸ್ಯ, ಜಿಲ್ಲೆಯಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಳನದ ರುವಾರಿ.

ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ

ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ

ಹೆಸರು: ವಿ ಬಾಲಕೃಷ್ಣನ್
ಕ್ಷೇತ್ರ: ಬೆಂಗಳೂರು ಕೇಂದ್ರ
ವಿದ್ಯಾಭ್ಯಾಸ: ಬಿಎಸ್ಸಿ, ಸಿಎ
ವಯಸ್ಸು: 48
ವೃತ್ತಿ: ಇನ್ಫೋಸಿಸ್ ಸಂಸ್ಥೆ ಬೋರ್ಡ್ ನಿರ್ದೇಶಕರಾಗಿದ್ದರು, ಮಾಜಿ ಸಿಎಫ್ ಒ

ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ

ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ

ಹೆಸರು: ಕೆ. ಅರ್ಕೇಶ್
ಕ್ಷೇತ್ರ: ಚಿಕ್ಕಬಳ್ಳಾಪುರ
ಶಿಕ್ಷಣ: ಪಿಜಿ ಡಿಪ್ಲೋಮಾ
ವಯಸ್ಸು: 60
ವೃತ್ತಿ: ಮಾಜಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್, ಸಿಆರ್ ಪಿಎಫ್
* ಕಾಡುಗಳ್ಳ ವೀರಪ್ಪನ್ ಹಿಡಿಯಲು ಹೊರಟ ತಂಡದ ಪ್ರಮುಖ ಮುಂದಾಳು, ಡಾ. ರಾಜ್ ಕುಮಾರ್ ಅಪಹರಣ ಪ್ರಕರಣದ ಸುಖ್ಯಾಂತದಲ್ಲಿ ಶ್ರಮವಹಿಸಿದ್ದು ಜನತೆಗೆ ತಿಳಿದಿದೆ. ರಾಷ್ಟ್ರಪತಿಗಳ ಪದಕವನ್ನು ಅರ್ಕೇಶ್ ಅವರು ಪಡೆದಿದ್ದಾರೆ.

ಬೆಂಗಳೂರು ದಕ್ಷಿಣ ಅಭ್ಯರ್ಥಿ ನೀನಾ

ಬೆಂಗಳೂರು ದಕ್ಷಿಣ ಅಭ್ಯರ್ಥಿ ನೀನಾ

ಹೆಸರು : ನೀನಾ ನಾಯಕ್
ಕ್ಷೇತ್ರ : ಬೆಂಗಳೂರು ದಕ್ಷಿಣ
ಶಿಕ್ಷಣ : ಮಾಸ್ಟರ್ ಆಫ್ ಸೋಷಿಯಲ್ ವರ್ಕ್ಸ್, ಮಾನವ ಹಕ್ಕು ಶಾಸ್ತ್ರದಲ್ಲಿ ಪ್ರಮಾಣ ಪತ್ರ
ವಯಸ್ಸು: 60
* ಮಕ್ಕಳ ಅಭಿವೃದ್ಧಿ ಹಾಗೂ ರಕ್ಷಣೆ ಕ್ಷೇತ್ರದಲ್ಲಿ 30 ವರ್ಷಗಳ ಅನುಭವ. ಮಕ್ಕಳ ಕಲ್ಯಾಣ ಅಭಿವೃದ್ಧಿ ಬಗ್ಗೆ ಕೃತಿಗಳನ್ನು ರಚಿಸಿದ್ದು, ರಾಷ್ಟ್ರಮಟ್ಟದಲ್ಲಿ ಅನೇಕ ಕಾರ್ಯಗಾರಗಳನ್ನು ನಡೆಸಿದ್ದು ಹಲವು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
ವೃತ್ತಿ: ಕರ್ನಾಟಕ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಆಧ್ಯಕ್ಷೆ

ಶಿವಮೊಗ್ಗ ಕ್ಷೇತ್ತ್ರದ ಅಭ್ಯರ್ಥಿ ಶ್ರೀಧರ್

ಶಿವಮೊಗ್ಗ ಕ್ಷೇತ್ತ್ರದ ಅಭ್ಯರ್ಥಿ ಶ್ರೀಧರ್

ಕೆ.ಜಿ. ಶ್ರೀಧರ್ ಅವರು ಚುನಾವಣಾ ರಾಜಕೀಯಕ್ಕೆ ಹೊಸಬರಾದರೂ ತುಂಗಾ ಮೂಲ ಉಳಿಸಿ ಹೋರಾಟ, ತುಂಗಭದ್ರಾ ಉಳಿಸಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಕುದುರೆಮುಖ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದರು. ಪರಿಸರ ಸಂಬಂಧಿ ಹೋರಾಟದಲ್ಲಿ ಇವರು ಯಾವತ್ತಿಗೂ ಮುಂದು.ಮ್ಯಾಗ್ಸೆಸ್ಸೆ ಪುರಸ್ಕೃತ ಕೆ.ವಿ. ಸುಬ್ಬಣ್ಣ ಅವರ ಜತೆಗೂಡಿ 1998ರಲ್ಲಿ ಇವರು ಮಲೆನಾಡಿನಾದ್ಯಂತ ಹಬ್ಬುತ್ತಿರುವ ಮಾನೋಕಲ್ಚರ್ ಪ್ಲಾಂಟೇಷನ್ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು. ಸಮಾಜ ಪರಿವರ್ತನ ಸಮುದಾಯ ಸಂಸ್ಥೆಯ ಎಸ್.ಆರ್. ಹಿರೇಮಠ್ ಅವರ ಜತೆಗೂಡಿ ಮಲೆನಾಡು ಜಾಗೃತಿ ಸಮುದಾಯ ಹುಟ್ಟುಹಾಕಿದ್ದರು. ಮಲೆನಾಡು ಭಾಗದ ರೈತರಿಗೆ ನೆರವಾಗಲು ರೂಪುಗೊಂಡಿರುವ ಮಲೆನಾಡು ಕೃಷಿ ಆಂದೋಲನ ಸಮಿತಿಯ ಸಂಚಾಲಕರಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಅಭ್ಯರ್ಥಿ

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಅಭ್ಯರ್ಥಿ

ಹೆಸರು: ರವಿಕೃಷ್ಣಾ ರೆಡ್ಡಿ
ಕ್ಷೇತ್ರ : ಬೆಂಗಳೂರು ಗ್ರಾಮಾಂತರ
ಶಿಕ್ಷಣ: ಮೆಕಾನಿಕಲ್ ಇಂಜಿನಿಯರ್
ವಯಸ್ಸು: 40
ವೃತ್ತಿ: ಮಾಜಿ ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಕನ್ನಡ ಬರಹಗಾರ

ಯುಎಸ್ ನಲ್ಲಿ ಸಾಫ್ಟ್ ವೇರ್ ವೃತ್ತಿಪರರಾಗಿದ್ದ ರವಿಕೃಷ್ಣಾರೆಡ್ಡಿ ಅವರು ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತರಾಗಲು ಹುದ್ದೆ ತೊರೆದು ಬಂದವರು. ಬೆಂಗಳೂರಿನ ಆನೇಕಲ್ ತಾಲೂಕಿನ ಬೊಮ್ಮಸಂದ್ರ ನಿವಾಸಿಯಾಗಿರುವ ರವಿ ಅವರು ರೈತರ ಸಂಕಷ್ಟವನ್ನು ಬಲ್ಲವರಾಗಿದ್ದಾರೆ. ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಸಕ್ರಿಯರಾಗಿರುವ ರವಿ ಅವರು ಲೋಕಸತ್ತಾ ಪಕ್ಷದಲ್ಲಿದ್ದವರು ಈಗ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಅಭ್ಯರ್ಥಿ ವಾಸುದೇವ

ದಕ್ಷಿಣ ಕನ್ನಡ ಜಿಲ್ಲೆ ಅಭ್ಯರ್ಥಿ ವಾಸುದೇವ

ಹೆಸರು: ಎಂ.ಆರ್ ವಾಸುದೇವ
ಕ್ಷೇತ್ರ: ದಕ್ಷಿಣ ಕನ್ನಡ (ಮಂಗಳೂರು)
ಶಿಕ್ಷಣ: ಎಂಎಸ್ಸಿ, ಎಂಬಿಎ
ವಯಸ್ಸು: 61
ವೃತ್ತಿ: ಮಂಗಳೂರು ಮ್ಯಾನೇಜ್ಮೆಂಟ್ ಅಸೋಸಿಯೇಷನ್(MMA) ಅಧ್ಯಕ್ಷ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ನಿರ್ದೇಶಕ

ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕೇರಿಸಿದ ಕೀರ್ತಿ ವಾಸುದೇವ ಅವರಿಗೆ ಸಲ್ಲುತ್ತದೆ. ಎಂಎಂಎ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಮಂಗಳೂರಿನ ಮೂಲ ಸೌಕರ್ಯ ಕೊರತೆ, ನಗರ ಸಾರಿಗೆ, ವಿಮಾನ ಯಾನ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ವಿನ್ಯಾಸಗೊಳಿಸಿರುವ ವಾಸುದೇವ ಅವರನ್ನು ಎಎಪಿ ಆಯ್ಕೆ ಮಾಡಿದೆ.

ಹುಬ್ಬಳ್ಳಿ-ಧಾರವಾಡ ಅಭ್ಯರ್ಥಿ ಹೇಮಂತ್

ಹುಬ್ಬಳ್ಳಿ-ಧಾರವಾಡ ಅಭ್ಯರ್ಥಿ ಹೇಮಂತ್

ಹುಬ್ಬಳ್ಳಿ-ಧಾರವಾಡ ಅಭ್ಯರ್ಥಿ ಹೇಮಂತ್
ಹೆಸರು: ಹೇಮಂತ್ ಕುಮಾರ್
ಕ್ಷೇತ್ರ : ಹುಬ್ಬಳ್ಳಿ-ಧಾರವಾಡ
ಶಿಕ್ಷಣ: ಕಾಲೇಜ್ ಡ್ರಾಪ್ ಔಟ್
ವಯಸ್ಸು : 47
ವೃತ್ತಿ: ಸಾಮಾಜಿಕ ಕಾರ್ಯಕರ್ತ
ಕರ್ನಾಟಕದಲ್ಲಿ ಕಿಸಾನ್ ಚಳವಳಿ ಆರಂಭಿಸಿದ ಹೇಮಂತ್ ಕುಮಾರ್ ಅವರು ರಾಜ್ಯ ರೈತ ಸಂಘದ ಪ್ರಮುಖ ಸದಸ್ಯರು. ಐಐಟಿ ವ್ಯಾಸಂಗವನ್ನು ಬದಿಗೊತ್ತಿ ರೈತರ ಸಮಸ್ಯೆಗೆ ಸ್ಪಂದಿಸಲು ಉತ್ತರ ಕರ್ನಾಟಕದತ್ತ ದಾಪುಗಾಲು ಹಾಕಿದರು. ಭ್ರಷ್ಟಾಚಾರ ವಿರೋಧಿ ಆಂದೋಳನ ಜನ ಲೋಕಪಾಲ್ ಗಾಗಿ ಒತ್ತಾಯಿಸಿ ನಡೆದ ಹೋರಾಟದಲ್ಲಿ ಸಕ್ರಿಯರಾಗಿದ್ದವರು. ಹೇಮಂತ್ ಅವರು ರೈತರ ಪಾಲಿಗೆ ನಡೆದಾಡುವ ವಿಶ್ವಕೋಶ ಎನಿಸಿದ್ದಾರೆ.

ಬೆಂಗಳೂರು ಉತ್ತರ ಅಭ್ಯರ್ಥಿ ಬಾಬು

ಬೆಂಗಳೂರು ಉತ್ತರ ಅಭ್ಯರ್ಥಿ ಬಾಬು

ಹೆಸರು: ಪ್ರೊ. ಬಾಬು ಮ್ಯಾಥ್ಯೂ
ಕ್ಷೇತ್ರ: ಬೆಂಗಳೂರು ಉತ್ತರ
ಶಿಕ್ಷಣ: ಬಿಎಸ್ ಸಿ, ಎಲ್ ಎಲ್ ಬಿ, ಎಲ್ ಎಲ್ ಎಂ, ಎಂ.ಫಿಲ್. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದಲ್ಲಿ ಚಿನ್ನದ ಪದಕ
ವಯಸ್ಸು: 64
ಕಾನೂನಿನ ಪ್ರೊಫೆಸರ್ ಆಗಿ ವಿವಿಧ ವಿವಿಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿರುವ ಬಾಬು ಮ್ಯಾಥ್ಯೂ ಅವರು ನೆಹರೂ ಅವರ ಚಿಂತನೆಯನ್ನು ಅಳವಡಿಸಿಕೊಂಡವರು. ಕಾರ್ಮಿಕರ ಒಕ್ಕೂಟದ ಉಪಾಧ್ಯಕ್ಷರಾಗಿದ್ದವರು. ಕಾರ್ಮಿಕರ ಹಕ್ಕು, ಕಾನೂನು, ಮಕ್ಕಳ ಹಕ್ಕು, ಮಾನವ ಹಕ್ಕು ಈ ಬಗ್ಗೆ ಆಳವಾದ ಜ್ಞಾನವುಳ್ಳವರು.

ಡಾ. ಬಿ.ಟಿ ಲಲಿತಾನಾಯಕ್ : ಗುಲ್ಬರ್ಗಾ

ಡಾ. ಬಿ.ಟಿ ಲಲಿತಾನಾಯಕ್ : ಗುಲ್ಬರ್ಗಾ

ಲಲಿತಾ ನಾಯಕ್ ಅವರು ಗುಲ್ಬಗಾ ಮೀಸಲಾತಿ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿದ್ದ ಡಾ. ಬಿ,ಟಿ ಲಲಿತಾ ನಾಯಕ್ ಇತ್ತೀಚೆಗೆ ಎಎಪಿ ಸೇರಿದವರು. ಆದರೆ, ಕರ್ನಾಟಕದಲ್ಲಿ ಮಾಜಿ ಸಚಿವೆಯಾಗಿ ಅನುಭವವುಳ್ಳವರು. ಬಂಜಾರಾ(ಲಂಬಾಣಿ) ಸಮುದಾಯದಿಂದ ಬಂದಿರುವ ಲಲಿತಾ ಅವರು ಸಾಹಿತ್ಯ ಕೃಷಿಯಲ್ಲೂ ಪಳಗಿದವರು. ಅನೇಕ ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.

ಕುವೆಂಪು ವಿವಿ ಗೌರವ ಡಾಕ್ಟರೇಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ, ಪರಿಷತ್ ಸದಸ್ಯೆ, ಶಾಸಕಿಯಾಗಿ ಅನುಭವ ಹೊಂದಿದ್ದಾರೆ. ರಾಜ್ಯ್ತೋತ್ಸವ ಪ್ರಶಸ್ತಿ, ರಾಜೀವ್ ಗಾಂಧಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ಪಡೆದವರಾಗಿದ್ದಾರೆ.

ಕೋಲಾರ ಕ್ಷೇತ್ರದ ಅಭ್ಯರ್ಥಿ ರಾಮಯ್ಯ

ಕೋಲಾರ ಕ್ಷೇತ್ರದ ಅಭ್ಯರ್ಥಿ ರಾಮಯ್ಯ

ಹೆಸರು : ಕೋಟಿಗಾನಹಳ್ಳಿ ರಾಮಯ್ಯ
ವಯಸ್ಸು: 59
ಕ್ಷೇತ್ರ: ಕೋಲಾರ(ಎಸ್ ಸಿ)
ದಲಿತ ಮುಖಂಡರಾದ ಕೆ.ರಾಮಯ್ಯ ಅವರು ದಲಿತ ಸಂಘರ್ಷ ಸಮಿತಿ ಮೂಲಕ ಬೆಳೆದವರು. ಬಂಡಾಯ ಗೀತೆಗಳು, ದಲಿತ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರಾಮಯ್ಯ ಅವರು ದಲಿತರ ಅಭಿವೃದ್ಧಿಗಾಗಿ ಶ್ರಮಿಸಿದವರು.

ಪತ್ರಕರ್ತರಾಗಿ ಕೂಡಾ ಅನುಭವ ಹೊಂದಿರುವ ರಾಮಯ್ಯ ಅವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಆದಿಮ ಸಂಸ್ಥೆ ಮೂಲಕ ಹುಣ್ಣಿಮೆ ಹಾಡು ಜನಪ್ರಿಯ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸುವರ್ಣ ರಂಗ ಸಮ್ಮಾನ್ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿದೆ.

ಬೀದರ್ ಕ್ಷೇತ್ರದ ಅಭ್ಯರ್ಥಿ ಚಂದ್ರಕಾಂತ್

ಬೀದರ್ ಕ್ಷೇತ್ರದ ಅಭ್ಯರ್ಥಿ ಚಂದ್ರಕಾಂತ್

ಹೆಸರು: ಚಂದ್ರಕಾಂತ್ ಕುಲಕರ್ಣಿ
ಕ್ಷೇತ್ರ: ಬೀದರ್
ಶಿಕ್ಷಣ: ಎಂ.ಟೆಕ್
ವಯಸ್ಸು: 54
ವೃತ್ತಿ: ಪ್ರೊಫೆಸರ್
ಸುಮಾರು 28 ವರ್ಷಗಳ ಪ್ರಾಧ್ಯಾಪಕರಾಗಿ ಅನುಭವ ಹೊಂದಿರುವ ಕುಲಕರ್ಣಿ ಅವರು ವಿದ್ಯಾರ್ಥಿಗಳು ಹಾಗೂ ಯುವ ಜನತೆಯ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.

ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಫೋಟೊ

ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಫೋಟೊ

ಆಮ್ ಆದ್ಮಿ ಪಕ್ಷದ ಕರ್ನಾಟಕ ಅಭ್ಯರ್ಥಿಗಳ ಗ್ರೂಪ್ ಫೋಟೊ

English summary
Aam Aadmi Party Karnataka Lok Sabha poll candidates profiles: Karnataka candidates name announces in 4th list, Which includes Former Infosys CFO V Balakrishnan, Prof Babu Mathew, Ravikrishna Reddy, Dr. B.T Lalitha nayak and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X