ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆಯಲ್ಲಿ ಶೇ 76ರಷ್ಟು ಮತದಾನ

|
Google Oneindia Kannada News

ಬೆಂಗಳೂರು, ಆ.22 : ಮೂರು ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಶೇ 76ರಷ್ಟು ಮತದಾನವಾಗಿದೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಆ.25ರ ಸೋಮವಾರ ಫಲಿತಾಂಶ ಪ್ರಕಟಗೊಳ್ಳಲಿದೆ.

ಚಿಕ್ಕೋಡಿ-ಸದಲಗಾ, ಬಳ್ಳಾರಿ ಗ್ರಾಮಾಂತರ ಹಾಗೂ ಶಿಕಾರಿಪುರದ ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಉಪ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಶೇ.71, ಚಿಕ್ಕೋಡಿ-ಸದಲಗಾದಲ್ಲಿ ಶೇ. 86 ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಶೇ.73.08 ಮತದಾನವಾಗಿದೆ.

By Election

ಶಿಕಾರಿಪುರ ಕ್ಷೇತ್ರದ ಕೋಡಿಹಳ್ಳಿ, ಅಂಬಾರಗೊಪ್ಪ ಮತ್ತು ಈಸೂರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮತದಾನದ ಸಂದರ್ಭ ಮಾತಿನ ಚಕಮಕಿ ನಡೆಯಿತು. ಚಿಕ್ಕೋಡಿಯ ಇಂದಿರಾನಗರದಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ 20ಕ್ಕೂ ಹೆಚ್ಚು ಯುವಕರನ್ನು ಮತಗಟ್ಟೆಯಿಂದ ಹೊರಹಾಕಿದ ಘಟನೆ ನಡೆದಿದೆ. [ಉಪ ಚುನಾವಣೆ ಸಂಪೂರ್ಣ ವಿವರ]

ಇನ್ನು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಶೇ.73.08 ಮತದಾನವಾಗಿದೆ. ಬಿಜೆಪಿಯ ಓಬಳೇಶ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಅವರು ಕ್ಷೇತ್ರದಲ್ಲಿ ಚನಾವಣೆ ಕಣಕ್ಕೆ ಇಳಿದಿದ್ದರೂ ಅವರು ಮತದಾನ ಮಾಡಲು ಸಾಧ್ಯವಾಗಿಲ್ಲ. ಇಬ್ಬರು ಅಭ್ಯರ್ಥಿಗಳು ಬೇರೆ ಮತ ಕ್ಷೇತ್ರಗಳಿಗೆ ಸೇರಿದವರಾಗಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಉಪ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಆ.25ರ ಸೋಮವಾರ ಫಲಿತಾಂಶ ಪ್ರಕಟಗೊಳ್ಳಲಿದೆ. ಒನ್ ಇಂಡಿಯಾ ಕನ್ನಡ ಅಂದು ಬೆಳಗ್ಗೆಯಿಂದ ಫಲಿತಾಂಶದ ತಾಜಾ ವಿವರಗಳನ್ನು ನೀಡಲಿದೆ.

English summary
76 percent voting in Shikaripura, Bellary Rural and Chikkodi–Sadalga Assembly constituencies By-election. The result will be announced on August 25, Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X