ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರ ವಿದ್ಯಾರ್ಥಿಗಳಿಗೆ ಮೋಡಿ ಮಾಡಲಿದ್ದಾರೆ ಮೋದಿ

|
Google Oneindia Kannada News

ಬೆಂಗಳೂರು, ಸೆ.4 : ಪ್ರಧಾನಿ ನರೇಂದ್ರ ಮೋದಿ ಶಿಕ್ಷಕರ ದಿನವಾದ ಶುಕ್ರವಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡುವ ಭಾಷಣವನ್ನು ಕರ್ನಾಟಕದ 56 ಲಕ್ಷಕ್ಕೂ ಅಧಿಕ ಮಕ್ಕಳು ವೀಕ್ಷಿಸಲಿದ್ದಾರೆ. ರಾಜ್ಯದ ವಿದ್ಯಾರ್ಥಿ­ಗಳಿಗೆ ಈ ಭಾಷಣದ ವೀಕ್ಷಣೆಗೆ ಅವಕಾಶ ಕಲ್ಪಿಸಲು ರಾಜ್ಯ ಶಿಕ್ಷಣ ಇಲಾಖೆ ಸಕಲ ರೀತಿಯಲ್ಲಿ ಸಜ್ಜಾಗಿದೆ.

ಶಿಕ್ಷಕರ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ 4.45ರ ತನಕ ದೆಹಲಿಯ ಮಾಣೆಕ್‌ ಷಾ ಸಭಾಂಗಣ­ದಲ್ಲಿ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತ­ನಾಡಲಿ­­ದ್ದಾರೆ. ಈ ಭಾಷಣ ಟಿವಿ, ರೆಡಿಯೋ ಮತ್ತು ಹಲವಾರು ವೆಬ್‌ಸೈಟ್‌ಗಳಲ್ಲಿ ನೇರ ಪ್ರಸಾರವಾಗಲಿದೆ. [ಶಿಕ್ಷಕರ ದಿನಾಚರಣೆಯೋ? ಗುರು ಉತ್ಸವವೋ?]

Narendra Modi

ಕರ್ನಾಟಕದಲ್ಲಿ ಭಾಷಣ ಪ್ರಸಾರದ ಬಗ್ಗೆ ಮಾಹಿತಿ ನೀಡಿರುವ ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಅದೋನಿ ಸೈಯದ್‌ ಸಲೀಂ ಅವರು, ರಾಜ್ಯದಲ್ಲಿ ಸರ್ಕಾರಿ, ಅನುದಾನಿತ, ಖಾಸಗಿ ಸೇರಿದಂತೆ ಒಟ್ಟು 74 ಸಾವಿರ ಶಾಲೆಗಳಿವೆ. ಇಲ್ಲಿ ಸುಮಾರು ಒಂದು ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆ­ಯುತ್ತಿದ್ದಾರೆ. 40 ಸಾವಿರ ಶಾಲೆಗಳಲ್ಲಿ ಟಿವಿ ಸೌಲಭ್ಯವಿದ್ದು, 56 ಲಕ್ಷ ವಿದ್ಯಾರ್ಥಿಗಳು ಟಿವಿ ಮೂಲಕ ಪ್ರಧಾನಿ ಭಾಷಣ ನೋಡಲಿದ್ದಾರೆ ಎಂದು ತಿಳಿಸಿದರು.

ಟಿವಿ ಇಲ್ಲದ ಶಾಲೆಗಳಲ್ಲಿ ಕಂಪ್ಯೂಟರ್‌ ಮೂಲಕ ಕಾರ್ಯಕ್ರಮ ವೀಕ್ಷಿಸಲು ಹಾಗೂ ರೇಡಿಯೊ ಮೂಲಕ ಆಲಿಸಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಗಳಲ್ಲಿರುವ ಶಿಕ್ಷಕರ ತರಬೇತಿ ಕೇಂದ್ರ­ಗಳಲ್ಲೂ ಕಾರ್ಯಕ್ರಮ ಪ್ರಸಾರಕ್ಕೆ ಅವಕಾಶ ಕಲ್ಪಿಸ­ಲಾಗಿದೆ ಎಂದರು. ಶಿಕ್ಷಕರ ದಿನಾಚರಣೆ ಕಾರ್ಯ­ಕ್ರಮಕ್ಕೆ ಯಾವುದೇ ತೊಂದರೆ­ಯಾಗ­ದಂತೆ ಸಂವಾದ ವೀಕ್ಷಣೆಗೆ ಅವಕಾಶ ಕಲ್ಪಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಏನಿದು ಕಾರ್ಯಕ್ರಮ? : ಸೆ.5ರ ಶುಕ್ರವಾರ ಶಿಕ್ಷಕರ ದಿನ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಈ ಸಂದರ್ಭದಲ್ಲಿ ಮಾತನಾಡಲಿದ್ದಾರೆ. ನಂತರ ವಿವಿಧ ರಾಜ್ಯಗಳ ಏಳು ಶಾಲೆಗಳ ವಿದ್ಯಾರ್ಥಿ­­ಗ­ಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಲಿದ್ದಾರೆ.

ನೇರ ಪ್ರಸಾರ : ಪ್ರಧಾನಮಂತ್ರಿ ಅವರ ಈ ಕಾರ್ಯಕ್ರಮವನ್ನು ದೂರದರ್ಶನ, ಡಿಡಿ ನ್ಯೂಸ್‌, ಡಿಡಿ ಭಾರತಿ, ಡಿಡಿ ಚಂದನ ಸೇರಿದಂತೆ 15 ಪ್ರಾದೇಶಿಕ ಚಾನೆಲ್‌ಗಳು, 52 ಖಾಸಗಿ ಚಾನೆಲ್‌ಗಳು ಮತ್ತು ಆಕಾಶವಾಣಿ­ ನೇರಪ್ರಸಾರ ಮಾಡಲಿವೆ.

English summary
The Karnataka Education department has made arrangements for 56 lakh school students to watch Prime Minister Narendra Modi’s speech on September 5 on the occasion of Teachers Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X