ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಶಾಸಕರ ವಿದೇಶಿ ಟ್ರಿಪ್ ಶೀಟ್ ವಿವರ ಇಲ್ಲಿದೆ

By Srinath
|
Google Oneindia Kannada News

ಬೆಂಗಳೂರು, ಫೆ.28: ಕಳೆದ ಡಿಸೆಂಬರಿನಲ್ಲಿ 16 ದಿನಗಳ ಕಾಲ ದಕ್ಷಿಣ ಅಮೆರಿಕದ ಪ್ರವಾಸ ಮೋಜು ಅನುಭವಿಸಿದ್ದ ರಾಜ್ಯದ 30 ಶಾಸಕರು ಸರಕಾರಕ್ಕೆ ಸಲ್ಲಿಸಿರುವ 'ಸ್ಟಡಿ ರಿಪೋರ್ಟ್' ಬಹಿರಂಗವಾಗಿದೆ. ಸದರಿ ಶಾಸಕರು ವಿವಾದಿತ ವಿದೇಶಿ ಪ್ರವಾಸದಿಂದ ಜನವರಿಯಲ್ಲಿ ಮರಳಿದ್ದರು. ಈ ಮಧ್ಯೆ, ರಾಜ್ಯದ ನೂರಕ್ಕೂ ಹೆಚ್ಚು ತಾಲೂಕುಗಳು ಬರದ ಬೇಗೆಯಲ್ಲಿದ್ದವು ಎಂಬುದು ಗಮನಾರ್ಹ.

ಐದು ವರ್ಷಕ್ಕೊಮ್ಮೆ ಶಾಸಕರು ವಿದೇಶ ಪ್ರವಾಸಕ್ಕೆ ಹೋದರೆ ತಪ್ಪೇನೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಹ ಹೇಳಿದ್ದರು. ಅಷ್ಟಕ್ಕೂ ಶಾಸಕರ ವಿದೇಶ ಪ್ರವಾಸಕ್ಕೆ ಅನುಮತಿ ನೀಡುವುದು ಸರಕಾರ ಅಲ್ಲ. ಶಾಸಕಾಂಗ ಸಮಿತಿ ಅದನ್ನೆಲ್ಲಾ ನೋಡಿಕೊಳ್ಳುತ್ತದೆ. ಶಾಸಕರು ಪ್ರತಿ ವರ್ಷ ವಿದೇಶಕ್ಕೆ ಹೋಗ್ತಾರಪ್ಪಾ. ಅದರಲ್ಲಿ ತಪ್ಪೇನೂ ಇಲ್ಲ. ಸುಮ್ಮನೆ ಮಾಧ್ಯಮದವರು ವಿಷಯವನ್ನು ದೊಡ್ಡದು ಮಾಡ್ತಿದ್ದಾರೆ ಅಷ್ಟೇ' ಎಂದು ಸಿದ್ದು ಸಮರ್ಥಿಸಿಕೊಂಡಿದ್ದರು.

Karnataka 30 MLAs foreign trip study report submitted
ಏನೇ ಆಗಲಿ ಅರ್ಜೆಂಟೈನಾ, ಬ್ರೆಜಿಲ್, ಪೆರು ಮತ್ತು ಅಮೆಜಾನ್ ಮಳೆಗಾಡುಗಳಿಗೆ ಭೇಟಿ ನೀಡಿ ಮೋಜು ಅನುಭವಿಸಿದ್ದರು. ಇದರಿಂದ ಸರಕಾರದ ಖಜಾನೆಯಿಂದ 2 ಕೋಟಿ ಗೂ ಅಧಿಕ ಮೊತ್ತ ಕೈಬಿಟ್ಟಿತ್ತು. ಅಂದಹಾಗೆ ವಿದೇಶ ಪ್ರವಾಸಕ್ಕೆ ತೆರಳಿದ್ದ ಶಾಸಕರು ಕನ್ನಡ ಭಾಷೆಯಲ್ಲಿ ಸಿದ್ಧಪಡಿಸಿರುವ ಬೃಹತ್ ಪ್ರಮಾಣದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಇನ್ನೂ ಈ ವರದಿಯ ಮೇಲೆ ಕಣ್ಣಾಡಿಸಿಲ್ಲ.

ನಾವೇನೂ ಅಲ್ಲಿ ಡ್ಯಾನ್ಸ್ ಮಾಡಲು ಹೋಗಿರಲಿಲ್ಲ. ಅಲ್ಲಿನ ವಿಶಾಲ ಕೃಷಿ ತೋಟಗಳು, ಪಶುಸಂಗೋಪನೆಯನ್ನು ನೋಡಿಕೊಂಡು ಬಂದೆವು' ಎಂದು ಪ್ರವಾಸ ಮುಗಿಸಿ ಬಂದಿದ್ದ ಬಿಆರ್ ಯಾವಗಲ್ ಪ್ರತಿಕ್ರಯಿಸಿದ್ದರು.

ನರಗುಂದ ಶಾಸಕ ಯಾವಗಲ್ ಸಲ್ಲಿಸಿರುವ ವರದಿ ಪ್ರಕಾರ ಶಾಸಕರು ವಿದೇಶಿ ನೆಲದಲ್ಲಿ ಚೆರ್ರಿ ಜ್ಯೂಸ್ ಮಾಡುವುದನ್ನು ಮತ್ತು ಒಣಹಣ್ಣುಗಳ ಮಾರುಕಟ್ಟೆ ವ್ಯವಸ್ಥೆಯನ್ನು ನೋಡಿಕೊಂಡು ಬಂದರಂತೆ. ಹಣ್ಣು ಪ್ಯಾಕೇಜಿಂಗ್ ಅನ್ನು ಸಹ ನೋಡಿದರಂತೆ.

3900 ಅಡಿ ಮೇಲಿದ್ದ ಹಿಮಚ್ಛಾದಿತ ಪ್ರದೇಶವನ್ನು ಹೆಲಿಕಾಪ್ಟರಿನಲ್ಲಿ ಹೋಗಿ ನೋಡಿಕೊಂಡು ಬಂದೆವು. ಅಷ್ಟೇ ಅಲ್ಲ. ಟ್ರೈನಿನಲ್ಲೂ ಹೋಗಿದ್ದೆವು. ಸುವಿಶಾಲ ಕೃಷಿ ಪ್ರದೇಶಗಳಲ್ಲಿ ಅಸಂಖ್ಯಾತ ಕುರಿಗಳು ಮತ್ತು ಹಸುಗಳು ಮೇಯುತ್ತಿರುವುದನ್ನು ಕಣ್ಣಾರೆ ಕಂಡೆವು. ಜನಾಶಯಗಳನ್ನು ಕಂಡೆವು. ಓಹ್! ಬಿಡಿ ಆ ಅನುಭವ ಅದ್ಭುತವಾಗಿತ್ತು ಎಂದು ವರ್ಣಿಸಿದ್ದಾರೆ.

ನ್ಯೂಜಿಲ್ಯಾಂಡಿನಲ್ಲಿ ನಾವು ಮಳೆಗಾಡುಗಳನ್ನು ನೋಡಿಕೊಂಡು ಬಂದೆವು. ಮರ ಕಡಿಯವುದು ನಿಸರ್ಗದ ಮೇಲೆ ಬೀರುವ ಅಡ್ಡಪರಿಣಾಮದ ಬಗ್ಗೆ ತಿಳಿದುಕೊಂಡೆವು. ಪರ್ವತಗಳ ಸಾಲಿನಲ್ಲಿ ರೋಪ್ ವೇನಲ್ಲಿ ನಲಿದಾಡಿದೆವು. ಕರ್ನಾಟಕದ ಬೆಟ್ಟ ಪ್ರದೇಶಗಳಲ್ಲೂ ಈ ವ್ಯವಸ್ಥೆಯನ್ನು ಅಳವಡಿಸಬೇಕು.

ಮುಖ್ಯವಾಗಿ ಇಲ್ಲಿ ಜಾತಿ ವ್ಯವಸ್ಥೆಯೇ ಇಲ್ಲಾ ಕಣ್ರೀ. ಜನ ಸಿಕ್ಕಾಪಟ್ಟೆ ಶಿಸ್ತೋ ಶಿಸ್ತು. ಇಲ್ಲೆಲ್ಲಾ ಪೇ ಟಂಡ್ ಯೂಸ್ ಟಾಯ್ಲೆಟ್ಟುಗಳೇ ಇರೋದು. ಕರ್ನಾಟಕದಲ್ಲೂ ಹೆಲಿಕಾಪ್ಟರ್ ಟೂರಿಸಂ ಶುರು ಮಾಡಬೇಕು. ಕೃಷಿಯನ್ನು ವೈಜ್ಞಾನಿಕ ಪದ್ಧತಿಯಲ್ಲಿ ಕೈಗೊಳ್ಳುತ್ತಿದ್ದಾರೆ.

English summary
Karnataka 30 MLAs foreign trip study report submitted. In December 2013, thirty Karnataka MLAs had embarked on a 16-day South American journey for a 'foreign study tour', that had came under media scanner as well as earned public anger. The MLAs who were part of the controversial 'foreign junket' returned back home in January. Now, their so-called "study report" has come out in the open.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X