ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚೆ ಇಲ್ಲದೆ ಮಸೂದೆ ಪಾಸ್, ಅಧಿವೇಶನ ಮುಕ್ತಾಯ

|
Google Oneindia Kannada News

ಬೆಂಗಳೂರು, ಜು. 29 : ಅರ್ಕಾವತಿ ಡಿನೋಟಿಫಿ­ಕೇಷನ್‌ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿ ಬಿಜೆಪಿ ಸದಸ್ಯರು ಸೋಮವಾರ ಇಡೀ ದಿನ ಧರಣಿ ನಡೆಸಿದ ಕಾರಣ ವಿಧಾನಸಭೆ ಅಧಿವೇಶ­ನ­ವನ್ನು ಅನಿರ್ದಿಷ್ಟಾವಧಿಗೆ ಮುಂದೂ­ಡ­ಲಾಗಿದೆ. ಬುಧವಾರದವರೆಗೆ ವಿಧಾನಪರಿಷತ್‌ ಕಲಾಪ ನಡೆಯಲಿದೆ.

ಸೋಮವಾರ ಪದೇ ಪದೇ ವಿಧಾನಸಭೆ ಕಲಾಪವನ್ನು ಮುಂದೂಡಿದರು ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದ ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆ ಮುಂದುವರೆಯಿತು. ಗಲಾಟೆ ಮಧ್ಯೆಯೇ ವಿದ್ಯುತ್ ಖರೀದಿ ಹಗರಣ ತನಿಖೆಗೆ ಸದನ ಸಮಿತಿ, ಅತ್ಯಾಚಾರಿಗಳು ಗೂಂಡಾ ಕಾಯ್ದೆ ವ್ಯಾಪ್ತಿಗೆ ತರುವ ವಿಧೇಯಕಗಳು ಹಾಗೂ ಧನವಿನಿಯೋಗ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.

Siddaramaiah

ಗೂಂಡಾ ಕಾಯ್ದೆಗೆ ಒಪ್ಪಿಗೆ : ಅತ್ಯಾಚಾರ, ಲೈಂಗಿಕ ದೌರ್ಜನ್ಯ, ನಕಲಿ ವಿಡಿಯೋ ತಯಾರಿಕೆ ನಿಯಂತ್ರಿಸುವ ಕರ್ನಾಟಕ ಗೂಂಡಾ ತಿದ್ದುಪಡಿ ವಿಧೇಯಕ 2014ಕ್ಕೆ ವಿಧಾನ ಮಂಡಲದ ಉಭಯ ಸದನಗಳು ಒಪ್ಪಿಗೆ ನೀಡಿವೆ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಗೂಂಡಾ ಕಾಯ್ದೆ ಜಾರಿಗೆ ತರಲಾಗುವುದು ಎಂದು ಸರಕಾರ ಹೇಳಿತ್ತು. ಆದ್ದರಿಂದ ಈ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಲಾಗಿದೆ. [ಅರ್ಕಾವತಿ ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ]

ಮಹಿಳಾ ಪೀಡಕರು, ಲೈಂಗಿಕ ದೌರ್ಜನ್ಯ, ಕಿರುಕುಳ ನೀಡುವವರನ್ನು ಈ ವಿಧೇಯಕದಡಿ ಶಿಕ್ಷಿಸಬಹುದಾಗಿದೆ. ಇದರ ಜತೆಗೆ ಅಪಾಯಕಾರಿ ಚಟುವಟಿಕೆಗಳು, ಔಷಧ ಕಲಬೆರಕೆ, ಜೂಜುಕೋರರು, ರೌಡಿಗಳು, ಕೊಳೆಗೇರಿ ಕಬಳಿಕೆದಾರರು, ಆಡಿಯೋ ಮತ್ತು ವಿಡಿಯೋ ನಕಲಿ ಸಿಡಿ ತಯಾರಿಕೆ ಮತ್ತು ಮಾರಾಟ ಮಾಡುವವರು, ಮಹಿಳೆಯರು ಮತ್ತು ಇತರರ ಮೇಲೆ ಆ್ಯಸಿಡ್ ದಾಳಿ ನಡೆಸುವವರು, ಸೈಬರ್ ಅಪರಾಧದಲ್ಲಿ ಸಿಕ್ಕಿಬಿದ್ದವರು, ಭೂ ಒತ್ತುವರಿದಾರರ ವಿರುದ್ಧವೂ ಈ ಕಾನೂನಿನಡಿ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ.

ಎಂಟು ಮಸೂದೆ ಪಾಸ್ : ಸೋಮವಾರದ ವಿಧಾನಸಭೆ ಕಲಾಪದಲ್ಲಿ ಬಜೆಟ್‌ ಗೆ ಸಂಬಂಧಿಸಿದಂತೆ ಧನವಿನಿಯೋಗ ವಿಧೇಯಕ ಸೇರಿದಂತೆ ಹಲವಾರು ಮಹತ್ವದ ವಿಧೇಯಕಗಳನ್ನು ಯಾವುದೇ ಚರ್ಚೆಯಿಲ್ಲದೆ, ಪ್ರತಿಪಕ್ಷದ ಧರಣಿ-ಗದ್ದಲದ ನಡುವೆಯೇ ಅಂಗೀಕರಿಸಲಾಗಿದೆ. ಅಂಗೀರಕಾರವಾದ ವಿಧೇಯಕಗಳು

* ಕರ್ನಾಟಕ ಧನವಿನಿಯೋಗ ವಿಧೇಯಕ (ಸಂಖ್ಯೆ 2)-2014

* ಕರ್ನಾಟಕ ಧನವಿನಿಯೋಗ ವಿಧೇಯಕ (ಸಂಖ್ಯೆ 3)-2014

* ಅಪಾಯಕಾರಿ ಚಟುವಟಿಕೆಗಳ ಪ್ರತಿಬಂಧಕ (ತಿದ್ದುಪಡಿ) ವಿಧೇಯಕ - 2014

* ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ-2014

* ಕರ್ನಾಟಕ ಸಹಕಾರ ಸಂಘಗಳ ವಿಧೇಯಕ-2014

* ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ-2014

* ಶ್ರೀ ಮಲೈ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ-2014

* ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕ-2014.

English summary
The two Houses of the Karnataka State legislature passed a total of 10 Bills including two appropriation bills (the State budget) without discussion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X