ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಹೂ ಬಾಸ್ ಮೇಲೆ ಲೈಂಗಿಕ ಕಿರುಕುಳದ ಕೇಸ್

By Prasad
|
Google Oneindia Kannada News

ಕ್ಯಾಲಿಫೋರ್ನಿಯಾ, ಜು. 12 : ಅಮೆರಿಕಾ ಮೂಲದ ಬಹುರಾಷ್ಟ್ರೀಯ ಇಂಟರ್ನೆಟ್ ಕಂಪನಿ ಯಾಹೂದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ತನ್ನ ಹಿರಿಯ ಮಹಿಳಾ ಮೇಲಧಿಕಾರಿಯ ಮೇಲೆ ಲೈಂಕಿಕ ಕಿರುಕುಳ ನೀಡಿದ ಮತ್ತು ಕಾರಣವಿಲ್ಲದೆ ಕೆಲಸದಿಂದ ತೆಗೆದುಹಾಕಿದ ಕೇಸ್ ದಾಖಲಿಸಿದ್ದಾರೆ.

ಯಾಹೂ ಮೊಬೈಲ್ ಘಟಕದ ಇಂಜಿನಿಯರಿಂಗ್ ವಿಭಾಗದ ಹಿರಿಯ ನಿರ್ದೇಶಕಿಯಾಗಿದ್ದ ಮಾರಿಯಾ ಝಾಂಗ್ ಮೇಲೆ 2013 ಫೆಬ್ರವರಿಯಿಂದ ಯಾಹೂದಲ್ಲಿ ಪ್ರಿನ್ಸಿಪಾಲ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ನಾನ್ ಶಿ ಎಂಬಾಕೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಮೊಕದ್ದಮೆ ಹೂಡಿದ್ದಾರೆ.

ಕ್ಯಾಲಿಫೋರ್ನಿಯಾದ ಸನ್ನಿವೇಲ್ ನಲ್ಲಿ ಹಲವಾರು ಬಾರಿ ತನ್ನೊಂದಿಗೆ ಮೌಖಿಕ ಮತ್ತು ಡಿಜಿಟಲ್ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಳೆಂದು ಆಕೆ ಆರೋಪಿಸಿದ್ದಾಳೆ. ತನ್ನೊಂದಿಗೆ ಸಂಭೋಗ ನಡೆಸಿದರೆ ನಿನಗೆ ಭವ್ಯ ಭವಿಷ್ಯವಿದೆ ಎಂದು ಕೂಡ ಮಾರಿಯಾ ಝಾಂಗ್ ಹೇಳುತ್ತಿದ್ದಳೆಂದು ದೂರಿನಲ್ಲಿ ಯುವತಿ ತಿಳಿಸಿದ್ದಾಳೆ.

Yahoo executive sues female boss for sexual harassment

ಇಂಥ ಅಸಂಬದ್ಧ ಮತ್ತು ಅನೈತಿಕ ಲೈಂಗಿಕ ಕ್ರಿಯೆಗೆ ಸಮ್ಮತಿಸದಿದ್ದಾಗ 2013ರ ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ತನ್ನ ಕೆಲಸ ತೃಪ್ತಿದಾಯಕವಾಗಿಲ್ಲ ಎಂದು ಪ್ರತಿಕೂಲ ಷರಾ ಬರೆದಿದ್ದರು ಎಂದು ಮಾರಿಯಾ ಮೇಲೆ ನಾನ್ ಶಿ ಆರೋಪಿಸಿದ್ದಾರೆ.

ಮಾರಿಯಾ ಸ್ಥಾಪಿಸಿದ್ದ ಮೊಬೈಲ್ ಕಂಪನಿ ಅಲೈಕ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಯಾಹೂ ಕಂಪನಿ, ಯುವತಿ ಮಾಡಿರುವ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದೆ ಮತ್ತು ಹಿರಿಯ ನಿರ್ದೇಶಕಿ ಪರವಾಗಿ ಹೇಳಿಕೆ ನೀಡಿದೆ. ಮಾರಿಯಾ ಅತ್ಯುತ್ತಮ ಉದ್ಯೋಗಿಯಾಗಿದ್ದು, ಆಕೆಗೆ ಅಂಟಿದ ಕಳಂಕ ನಿವಾರಣೆಯಾಗುವವರೆಗೆ ನ್ಯಾಯಾಲಯದಲ್ಲಿ ಹೋರಾಡುತ್ತೇವೆ ಎಂದು ಕಂಪನಿ ಹೇಳಿಕೆ ನೀಡಿದೆ.

ನ್ಯಾಯಾಲಯದಲ್ಲಿ ಸಲ್ಲಿಸಿರುವ ದೂರಿನಲ್ಲಿ, ಮಾನವ ಸಂಪನ್ಮೂಲ ಇಲಾಖೆ ಕೂಡ ತನ್ನ ದೂರಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿತು ಮತ್ತು ಸಂಬಳ ನೀಡದೆ ರಜಾ ನೀಡಿತ್ತು ಎಂದು ಕೂಡ ಹೇಳಲಾಗಿದೆ.

English summary
A female executive working with the America based multinational internet company Yahoo Inc has sued her female boss for sexual harassment. A case has been filed against the boss in California on charges of harassment and wrongful termination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X