ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವಕರೇ, ಏಳಿ ಎದ್ದೇಳಿ ದೇಶದ ಭವಿಷ್ಯ ಬದಲಿಸಿ: ಮೋದಿ

By Mahesh
|
Google Oneindia Kannada News

ನ್ಯೂಯಾರ್ಕ್, ಸೆ.28: ಇಲ್ಲಿನಸೆಂಟ್ರಲ್ ಪಾರ್ಕಿನಲ್ಲಿ ಗ್ಲೋಬಲ್ ಸಿಟಿಜನ್ ಫೆಸ್ಟಿವಲ್ ಉದ್ಘಾಟಿಸಿ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 'ಹೌ ಆರ್ ಯು ಡೂಯಿಂಗ್ ನ್ಯೂಯಾರ್ಕ್..' ಎಂದು ತಮ್ಮ ಭಾಷಣ ಆರಂಭಿಸುತ್ತಿದ್ದಂತೆ ಅಭೂತಪೂರ್ವ ಚಪ್ಪಾಳೆ ಸದ್ದು ಕೇಳಿ ಬಂದಿತು. ಸುಮಾರು 60ಸಾವಿರಕ್ಕೂ ಅಧಿಕ ಮಂದಿಯನ್ನು ಒಮ್ಮೆಗೆ ಮೋದಿ ಸೂಜಿಗಲ್ಲಿನಂತೆ ಸೆಳೆದುಬಿಟ್ಟರು.

ಇದಕ್ಕೂ ಮೊದಲು ಆಸ್ಟ್ರೇಲಿಯಾ ಮೂಲದ ಬಾಲಿವುಡ್ ನಟ,ಎಕ್ಸ್ ಮೆನ್ ಸರಣಿ ಚಿತ್ರಗಳ ನಾಯಕ ಹ್ಯೂ ಜಾಕ್ಮನ್ ಅವರು ಮಾತನಾಡಿ, ಮೋದಿ ಅವರ ಬಗ್ಗೆ ಅಲ್ಲಿ ನೆರೆದಿದ್ದವರಿಗೆ ಪರಿಚಯ ಮಾಡಿಸಿದರು. ಭಾರತದಲ್ಲಿ ಚಹಾ ಮಾರಾಟಗಾರನಾಗಿದ್ದವರು ಇಂದು ದೇಶದ ಪ್ರಧಾನಿಯಾಗಿದ್ದಾರೆ. ಇದು ಪ್ರಜಾಪ್ರಭುತ್ವದ ಶಕ್ತಿ ಎಂದರು.[ಬಾಂಧವ್ಯದ ಭಾಷಣ ಬಿಗಿದ ಮೋದಿ]

800ಮಿಲಿಯನ್ ಯುವ ಜನಾಂಗ ಭಾರತದ ಭವ್ಯ ಭವಿತವ್ಯ ಬರೆಯಲಿದೆ. ನೀವು ಕೈಜೋಡಿಸಿ. ಆರೋಗ್ಯ, ಶುದ್ಧ ನೀರು ಮತ್ತು ಶುಚಿತ್ವಕ್ಕೆ ಒತ್ತು ಕೊಡಬೇಕಾಗಿದೆ. ನಿಮ್ಮಲ್ಲಿ ನೀವು ನಂಬಿಕೆ ಇರಿಸಿಕೊಳ್ಳಲಿ . ಯುವಕರು ಎದ್ದರೆ ದೇಶ ಉದ್ಧಾರ ಸಾಧ್ಯ. ಸುಖ ಜೀವನ ನಡೆಸುವ ನೀವುಗಳು ಕಡು ಬಡವರಿಗೆ ಸಹಾಯಹಸ್ತ ಚಾಚುವ ಮನೋಸ್ಥಿತಿ ಮತ್ತು ಉದಾರತೆಯನ್ನು ತೋರುತ್ತಿರುವುದು ಒಂದು ಪ್ರಶಂಸಾರ್ಹ ವಿಚಾರ. ವಿಶ್ವದಾದ್ಯಂತ ಬಡತನವನ್ನು ನಿರ್ಮೂಲನೆ ಮಾಡಲು ನಿಮ್ಮ ಸೇವೆ ನಿಜಕ್ಕೂ ಎಲ್ಲರಿಗೂ ಆದರ್ಶ ಎಂದು ಮೋದಿ ತಮ್ಮ ಭಾಷಣದಲ್ಲಿ ಬಣ್ಣಿಸಿದರು.

ನೆಹರೂ ಜಾಕೆಟ್ ತೊಟ್ಟಿದ್ದ ಮೋದಿ

ನೆಹರೂ ಜಾಕೆಟ್ ತೊಟ್ಟಿದ್ದ ಮೋದಿ

ಬಿಳಿ ಬಣ್ಣದ ಕುರ್ತಾ ಮತ್ತು ನೀಲಿ ಬಣ್ಣ ಜಾಕೆಟ್(ನೆಹರೂ ಜಾಕೆಟ್ ಎಂದೇ ಖ್ಯಾತಿ) ತೊಟ್ಟಿದ್ದ ಮೋದಿ ನೀವೆಲ್ಲರೂ ಸುಖವಾಗಿದ್ದೀರೆಂದು ಭಾವಿಸಿದ್ದೇನೆ. ಹೌ ಆರ್ ಯು ಡೂಯಿಂಗ್ ನ್ಯೂಯಾರ್ಕ್ ನಮಸ್ತೆ ಎಂದರು

ಯುವ ಶಕ್ತಿಯ ಮುಂದೆ ನಾನು ನಿಂತಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನಿಮ್ಮ ನಡುವೆ ಭವಿಷ್ಯದ ವ್ಯಕ್ತಿಗಳಿದ್ದಾರೆ ಎಂಬ ನಂಬಿಕೆ ನನಗಿದೆ. ಕೆಲವರು ಹಿಂದಿನವರ ನೀತಿವಂತಿಕೆಯಿಂದ ವಿಶ್ವ ಬದಲಾಗುತ್ತದೆ ಎಂದು ನಂಬಿಕೊಂಡಿದ್ದಾರೆ ಎಂದು ಹೇಳಿದರು.

ಎಂಥಾ ಬದಲಾವಣೆ ಬೇಕಾದರೂ ಸಾಧ್ಯ

ಎಂಥಾ ಬದಲಾವಣೆ ಬೇಕಾದರೂ ಸಾಧ್ಯ

ವಿಶ್ವ ಆದರ್ಶವಂತಿಕೆ, ಆವಿಷ್ಕಾರ, ಶಕ್ತಿ ಹಾಗೂ ಸಾಧಿಸಬಲ್ಲ ಮನೋಧರ್ಮದಿಂದ ಹೆಚ್ಚು ಯೌವ್ವನ ಹಾಗೂ ಶಕ್ತಿವಂತಿಕೆಯನ್ನು ಪಡೆಯುತ್ತದೆ. ಅದೇ ನನ್ನ ಭಾರತದ ಕುರಿತ ನಂಬಿಕೆಯಾಗಿದೆ ಎಂದು ಹೇಳಿದಾಗ, ಸಭೆಯಲ್ಲಿ ನೆರೆದಿದ್ದ ಯುವಕರು ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಯುವಕರು ಬಯಸಿದರೆ ಎಂಥಾ ಬದಲಾವಣೆ ಬೇಕಾದರೂ ಸಾಧ್ಯ ಎಂದರು.

ಶಾಂತಿ ಮಂತ್ರ ಪಠಿಸಿದ ಪ್ರಧಾನಿ ಮೋದಿ

ಶಾಂತಿ ಮಂತ್ರ ಪಠಿಸಿದ ಪ್ರಧಾನಿ ಮೋದಿ

ಸಂಸ್ಕೃತ ಶ್ಲೋಕ ಸರ್ವೇ ಭವಂತು ಸುಖಿನಾ, ಸರ್ವೇ ಸಂತು ನಿರಾಮಯ, ಸರ್ವ ಭದ್ರಾಣಿ ಪಶ್ಯಂತು, ಮಾ ಕಶ್ಚಿಕ್ ದುಃಖ್ ಭಾಗ್‍ಭವತ್, ಓಂ ಶಾಂತಿ ಶಾಂತಿ... ಎಂದು ಶ್ಲೋಕವನ್ನು ಉದ್ಧರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ವೈವಿಧ್ಯಮ ವ್ಯಕ್ತಿತ್ವದ ಹ್ಯೂ ಜಾಕ್ಮನ್

ವೈವಿಧ್ಯಮ ವ್ಯಕ್ತಿತ್ವದ ಹ್ಯೂ ಜಾಕ್ಮನ್

ಅಭಿವೃದ್ಧಿ ಶೀಲ ದೇಶಗಳಲ್ಲಿ ಕಿರುಸಾಲ ಯೋಜನೆ ಪ್ರವರ್ತಕ, ಗ್ಲೋಬಲ್ ಪಾವರ್ಟಿ ಪ್ರಾಜೆಕ್ಟ್‌ನ ವಿಶ್ವವ್ಯಾಪಿ ಸಲಹೆಗಾರ, ಆರ್ಟ್ ಆಫ್ ಎಲಿಸಿಯಮ್, ಎಮ್ ಪಿ ಟಿ ವಿ ಫಂಡ್ ಫೌಂಡೇಶನ್‌, ಬೋನ್ ಮ್ಯಾರೊ ಸಂಸ್ಥೆ, ಬ್ರಾಡ್ ವೆ ಕೇರ್ಸ್/ಇಕ್ವಿಟಿ ಫೈಟ್ಸ್ ಎಐಡಿಎಸ್ ಫಂಡ್ ರೈಸಿಂಗ್ ಹೀಗೆ ಹಲವಾರು ಸಂಘ ಸಂಸ್ಥೆಗಳ ಮೂಲಕ ದೇಣಿಗೆ ಸಂಗ್ರಹಿಸಿ ಬಡವರು, ನಿರ್ಗತಿಕರು, ಪರಿತ್ಯಕ್ತರಿಗೆ ತಲುಪಿಸುತ್ತಿದ್ದಾರೆ. ನಟ, ನಿರ್ಮಾಪಕ, ಸಮಾಜ ಸೇವಕ ಅಲ್ಲದೆ ಯೋಗಪಟು, ಸಂಗೀತಗಾರ, ಕ್ರೀಡಾಪಟುವಾಗಿ ಕೂಡಾ ಜಾಕ್ಮನ್ ರನ್ನು ಗುರುತಿಸಬಹುದು.

ನರೇಂದ್ರ ಮೋದಿ ಮುಂದಿನ ಕಾರ್ಯಕ್ರಮ

ನರೇಂದ್ರ ಮೋದಿ ಮುಂದಿನ ಕಾರ್ಯಕ್ರಮ

ಇದಾದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾ ಮತ್ತು ಕೆನಡಾದಲ್ಲಿ ವಾಸವಾಗಿರುವ ಸಿಖ್ ಸಮುದಾಯದ ನಿಯೋಗವೊಂದನ್ನು ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದರು. ಇದಲ್ಲದೆ ಭಾನುವಾರ ರಾತ್ರಿ ಮ್ಯಾಡಿಸನ್ ಸ್ಕ್ವಯರ್ ಗಾರ್ಡನ್ ನಲ್ಲಿ 20 ಸಾವಿರಕ್ಕೂ ಹೆಚ್ಚು ಎನ್‍ಆರ್‍ಐಗಳನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.

ಹ್ಯೂ ಜಾಕ್ಮನ್ ದಂಪತಿ ಜೊತೆ ಪ್ರಧಾನಿ ಮೋದೊ. ಚಿತ್ರಗಳ ಕೃಪೆ: ಪಿಟಿಐ

ತುಂಬಿ ತುಳುಕಿದ್ದ ಸಭಾಂಗಣದಲ್ಲಿ ಮೋದಿ

ಸೆಂಟ್ರಲ್ ಪಾರ್ಕಿನ ತುಂಬಿ ತುಳುಕಿದ್ದ ಸಭಾಂಗಣದಲ್ಲಿ ಮೋದಿ ಭಾಷಣ ವಿಡಿಯೋ

English summary
Prime Minister Narendra Modi addressed the Global Citizen Festival at Central Park in New York where he pitched for healthcare, clean water and sanitation for all.Modi was introduced to the crowd by actor Hugh Jackman as someone who started as a "tea salesman" and went on to become Chief Minister of Gujarat and then Prime Minister of India with a huge mandate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X