ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ಕಿಗಳಿಗೆ ವರದಾನ: ವಾಷಿಂಗ್ಟನ್ ಒಪ್ಪಂದಕ್ಕೆ ಅಂಕಿತ

By Srinath
|
Google Oneindia Kannada News

ನವದೆಹಲಿ, ಜೂನ್ 14: ಟೆಕ್ಕಿಗಳಿಗೆ ವರದಾನವಾಗಬಲ್ಲ ಒಪ್ಪಂದಕ್ಕೆ ಭಾರತ ಅಂಕಿತ ಹಾಕಿದೆ. ನಿನ್ನೆ ಶುಕ್ರವಾರ ಭಾರತವು ವಾಷಿಂಗ್ಟನ್ ಒಪ್ಪಂದದಡಿ ಕಾಯಂ ಸದಸ್ಯತ್ವ ಪಡೆದಿದೆ. ಅಂತಾರಾಷ್ಟ್ರೀಯ ಸ್ತರದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುವವರಿಗೆ ಮತ್ತು ಮುಂದೆ ಇಂಜಿನಿಯರುಗಳು ಅಮೆರಿಕಕ್ಕೆ ಹೋಗಿಬರಲು ಈ ಒಪ್ಪಂದ (Washington Accord- WA) ಊರುಗೋಲಾಗಲಿದೆ.

'ತಾಂತ್ರಿಕ ಮತ್ತು ಇಂಜಿನಿಯರಿಂಗ್ ಪದವೀಧರರಿಗೆ ಅಂತಾರಾಷ್ಟ್ರೀಯ ಸ್ತರದಲ್ಲಿ ಉದ್ಯೋಗಾವಕಾಶ ಹೆಚ್ಚಿಸುವುದಕ್ಕೆ ಇದು ನೆರವಾಗಲಿದೆ' ಎಂದು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಆಶಿಸಿದ್ದಾರೆ.

ಅಂದಹಾಗೆ ವಾಷಿಂಗ್ಟನ್ ಒಪ್ಪಂದಕ್ಕೆ ಇದುವರೆಗೂ 17 ರಾಷ್ಟ್ರಗಳು ಅಂಕಿತ ಹಾಕಿವೆ. ವಿಶ್ವಮಟ್ಟದಲ್ಲಿ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಅನುವು ಮಾಡಿಕೊಡಲು ಮತ್ತು ಗುಣಮಟ್ಟದ ಶಿಕ್ಷಣ ಲಭಿಸುವಂತಾಗಲು ಈ ಒಪ್ಪಂದ ನೆರವಾಗಲಿದೆ. (ಟಾಪ್- 200 ಪಟ್ಟಿಯಿಂದ ಹೊರಗಾದ IITs, IISc)

washington-accord-india-becomes-new-permanent-member-boost-for-techies

'ಈ ವಾಷಿಂಗ್ಟನ್ ಒಪ್ಪಂದದಿಂದ ನಮ್ಮ ದೇಶದ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಅತ್ಯುತ್ತಮ ಗುಣಮಟ್ಟವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ವಾಷಿಂಗ್ಟನ್ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರಗಳಲ್ಲಿ ಇರುವ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಈ ಶಿಕ್ಷಣ ಕಲ್ಪಿಸಿಕೊಡಬೇಕಾಗುತ್ತದೆ. ತದನಂತರ ಇಲ್ಲಿ ಪದವಿ ಪಡೆದವರಿಗೆ ವಿಶ್ವಮಟ್ಟದಲ್ಲಿ ಉದ್ಯೋಗಾವಕಾಶ ಕಲ್ಪಿಸುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ವಿವರಿಸಿದ್ದಾರೆ. (ಭಾರತದ ಟಾಪ್ 10 ವಿಶ್ವವಿದ್ಯಾಲಯಗಳು)

'ಅಂದಹಾಗೆ ಏಳು ವರ್ಷಗಳ ಹಿಂದೆಯೇ ಭಾರತವು ಇಂತಹ ವ್ಯವಸ್ಥೆ ಬಯಸಿ, ಒಪ್ಪಂದಕ್ಕೆ ಅಂಕಿತವಾಗಗಲು ಯತ್ನಿಸಿತ್ತು. ಆದರೆ ಅದು ಈಗ ನೆರವೇರಿದೆ' ಎಂದು ಹಿಂದಿನ ಮಾನವ ಸಂಪನ್ಮೂಲ ಸಚಿವರಾದ ಪಲ್ಲಂ ರಾಜು ಸಂತಸ ವ್ಯಕ್ತಪಡಿಸಿದ್ದಾರೆ. ನ್ಯೂಜಿಲ್ಯಾಂಡಿನಲ್ಲಿ ಇತ್ತೀಚೆಗೆ WA ಸದಸ್ಯ ರಾಷ್ಟ್ರಗಳ ಅಂತಾರಾಷ್ಟ್ರೀಯ ಇಂಜಿನಿಯರಿಂಗ್ ವಿಭಾಗ ಏರ್ಪಡಸಿದ್ದ ಶೃಂಗಸಭೆಯಲ್ಲಿ ಈ ಒಪ್ಪಂದ ನೆರವೇರಿದೆ.

English summary
Washington Accord: India becomes new permanent member - a boost for techies. In what can be seen as a boost for techies, India on Friday became a permanent member of the Washington Accord (WA), an elite international agreement on engineering studies and mobility of engineers. The country now joins a select group of 17 countries who are permanent signatories of the WA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X