ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಹನೆಯ ಕಟ್ಟೆ ಒಡೆದರೆ ಸಂಸದನೂ ಲೆಕ್ಕಕ್ಕಿಲ್ಲ'

By Mahesh
|
Google Oneindia Kannada News

ಇಸ್ಲಾಮಾಬಾದ್, ಸೆ.17: ಪಾಕಿಸ್ತಾನದ ರಾಜಕೀಯ ಮುಖಂಡ ಕಿತ್ತಾಟ ನೆಲದಿಂದ ಆಗಸಕ್ಕೆ ಹಾರಿದೆ. ವಿಐಪಿಗಳಿಗಾಗಿ ವಿಮಾನವನ್ನು ಕಾಯ್ದಿರಿಸಿದ್ದ ಪ್ರಸಂಗದಲ್ಲಿ ಡಾ. ರಮೇಶ್‌ ಕುಮಾರ್‌ ಎಂಬ ಸಂಸದ ರೊಚ್ಚಿಗೆದ್ದ ಪ್ರಯಾಣಿಕರು ಹೊರದಬ್ಬಿಸಿಕೊಂಡಿದ್ದಾರೆ. ಮೊಬೈಲ್ ವಿಡಿಯೋ ತುಣುಕು ಈಗ ಎಲ್ಲೆಡೆ ಹರಿದಾಡುತ್ತಿದ್ದು ಚರ್ಚಾಸ್ಪದವಾಗಿದೆ. ಈ ರೀತಿ ಭಾರತದಲ್ಲಿ ಎಂದಾದರೂ ಸಾಧ್ಯವೇ ಎಂಬ ಪ್ರಶ್ನೆಗಳು ಎದ್ದಿವೆ.

ಪಾಕಿಸ್ತಾನದ ಮಾಜಿ ಒಳಾಡಳಿತ ಖಾತೆ ಸಚಿವ ರೆಹಮಾನ್‌ ಮಲಿಕ್‌ ಮತ್ತು ಆಡಳಿತಾರೂಢ ಪಿಎಂಎಲ್‌- ಎನ್‌ನ ಸಂಸದ ಡಾ. ರಮೇಶ್‌ ಕುಮಾರ್‌ ಅವರ ಬರುವಿಕೆಗಾಗಿ ಕರಾಚಿಯಿಂದ ಇಸ್ಲಾಮಾಬಾದ್‌ಗೆ ಹೊರಡಬೇಕಿದ್ದ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ ವಿಮಾನ(ಪಿಕೆ 370)ದ ಹಾರಾಟವನ್ನು ತಡೆಹಿಡಿಯಲಾಗಿತ್ತು. ಹೀಗಾಗಿ ಹಾರಾಟ ಎರಡು ಗಂಟೆ ವಿಳಂಬಗೊಂಡಿತ್ತು.

ಇದರಿಂದ ಪ್ರಯಾಣಿಕರ ಸಹನೆಯ ಕಟ್ಟೆ ಒಡೆದಿತ್ತು. ವಿಳಂಬವಾಗಿ ಬಂದ ರಾಜಕಾರಣಿಗಳನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡು ವಿಮಾನ ಏರಲು ಅವಕಾಶ ನೀಡಲಿಲ್ಲ. ಈ ಘಟನೆಯ ವಿಡಿಯೋ ದೃಶ್ಯಾವಳಿಯನ್ನು ಮಾಧ್ಯಮವೊಂದು ಪ್ರಸಾರ ಮಾಡಿದೆ. ಯೂಟ್ಯೂಬ್ ನಲ್ಲಿ ಭರ್ಜರಿಯಾಗಿ ಓಡುತ್ತಿದೆ.

ಈ ಕತ್ತೆಗಳನ್ನು ಹಿಡಿದು ತದುಕಿರಿ 2-3 ಗಂಟೆ ವಿಳಂಬ ಮಾಡಿದ್ದಾರೆ. ಮೈ ಫುಟ್ ವಿಐಪಿ, ನಾನು ಅವನನ್ನು ಚೆಚ್ಚಿಬಿಡುತ್ತೇನೆ ಎಂದು ಉರ್ದುವಿನಲ್ಲಿ ಪ್ರಯಾಣಿಕರೊಬ್ಬರು ಅರಚುವುದನ್ನು ವಿಡಿಯೋದಲ್ಲಿ ಕಾಣಬಹುದು.

ಮಲಿಕ್ ಅವರಿಗೆ ಪ್ರಯಾಣಿಕನೊಬ್ಬನ ಮಾತು

ಮಲಿಕ್ ಅವರಿಗೆ ಪ್ರಯಾಣಿಕನೊಬ್ಬನ ಮಾತು

'ಮಲಿಕ್‌ ಸಾಹಾಬ್‌, ನಮ್ಮನ್ನು ಕ್ಷಮಿಸಿ, 250 ಪ್ರಯಾಣಿಕರಿಗೆ ತೊಂದರೆ ನೀಡಿದ್ದಕ್ಕೆ ನಿಮಗೆ ನಾಚಿಕೆ ಆಗಬೇಕು. ಇದಕ್ಕಾಗಿ ನೀವು ಕ್ಷಮೆ ಕೇಳಬೇಕು' ಎಂದು ಪ್ರಯಾಣಿಕನೊಬ್ಬ ಹೇಳಿರುವುದೂ ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಸಂಸದ ರಮೇಶ್‌ ಕುಮಾರ್‌ ಅವರು ಕಂಡುಬಂದಿಲ್ಲ. ಆದರೆ, ಪ್ರಯಾಣಿಕರು ಅವರನ್ನೂ ಹೊರದಬ್ಬಿದ್ದಾರೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ಆರೋಪ ತಳ್ಳಿ ಹಾಕಿದ ಮಲಿಕ್

ವಿಮಾನ ಹಾರಾಟ 50 ನಿಮಿಷಗಳ ವಿಳಂಬವಾಗುತ್ತದೆ ಎಂದು ನನಗೆ ತಿಳಿಸಲಾಗಿತ್ತು. ಅದರಂತೆ ನಾನು ವಿಮಾನದ ಕಡೆ ತಡವಾಗಿ ಬಂದೆ ಎಂದು ರೆಹಮಾನ್ ಮಲಿಕ್ ಹೇಳಿದ್ದಾರೆ.

ಪಿಎಂಎಲ್ ಎನ್ ಸಚಿವನ ಜೊತೆ ಹೋಲಿಸಬೇಡಿ

ಪಿಎಂಎಲ್ ಎನ್ ಸಚಿವನ ಜೊತೆ ಹೋಲಿಸಬೇಡಿ. ಪಿಟಿಐ ಕಾರ್ಯಕರ್ತನೊಬ್ಬನ ಕಿರುಚಾಟ ಕೇಳಿಸಿಕೊಂಡು ನಾನು ಹಿಂತಿರುಗಿದೆ. ವಿಮಾನ ವಿಳಂಬಕ್ಕೂ ಪಿಎಂಎಲ್ ಎನ್ ಸಚಿವನಿಗೂ ನನಗೂ ಲಿಂಕ್ ಮಾಡಬೇಡಿ

ವಿಮಾನಯಾನದ ಸಮಯ ಹೀಗಿತ್ತು: ಮಲಿಕ್

ವಿಮಾನಯಾನದ ಸಮಯ ಹೀಗಿತ್ತು ಎಂದು ವೇಳಾಪಟ್ಟಿ ನೀಡಿ ಸಮರ್ಥಿಸಿಕೊಂಡ ಮಲಿಕ್

ಘಟನೆ ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದೆ

ವಿಐಪಿಗಳಿಂದ ಪ್ರಯಾಣಿಕರಿಗೆ ಆದ ತೊಂದರೆ, ಮಲಿಕ್ ಅವರಿಗೆ ಪ್ರಯಾಣಿಕರೊಬ್ಬರ ಮಾತು ಎಲ್ಲವೂ ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದೆ

English summary
A shocking mobile video, which has been uploaded on YouTube, has gone viral. The video shows that former Interior Minister of Pakistan -- Rehman Malik has been thrown off of a plane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X