ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಒಗ್ಗಟ್ಟಿನಲ್ಲಿ ಬಲವಿದೆ' ಇದ್ಕೆ ಆಸ್ಟ್ರೇಲಿಯನ್ನರೇ ಸಾಕ್ಷಿ

By Mahesh
|
Google Oneindia Kannada News

ಪರ್ತ್, ಆ.6: ಆಸ್ಟ್ರೇಲಿಯನ್ನರು 'ಒಗ್ಗಟ್ಟಿನಲ್ಲಿ ಬಲವಿದೆ' ಎಂಬ ಮಾತನ್ನು ನಿಜಗೊಳಿಸಿದ್ದಾರೆ. ರೈಲು ಹತ್ತುವಾಗ ಕಾಲು ಸಿಕ್ಕಿಸಿಕೊಂಡು ಒದ್ದಾಡುತ್ತಿದ್ದ ವ್ಯಕ್ತಿಯೊಬ್ಬನ ನೆರವಿಗೆ ಬಂದ ಫ್ಲಾಟ್ ಫಾಮ್ ಆಸ್ಟ್ರೇಲಿಯನ್ನರು ರೈಲನ್ನು ಪಕ್ಕಕ್ಕೆ ತಳ್ಳುವ ಮೂಲಕ ಪ್ರಯಾಣಿಕನ ಕಾಲು ಉಳಿಸಿದ ಘಟನೆ ನಡೆದಿದೆ.

ಪ್ರಯಾಣಿಕನೊಬ್ಬನ ಕಾಲು ಸಿಕ್ಕಿಹಾಕಿಕೊಂಡ ಘಟನೆ ನಡೆಯುತ್ತಿದ್ದಂತೆಯೇ ರೈಲ್ವೆ ಇಲಾಖೆಯ ಸಿಬ್ಬಂದಿ ಕೂಡಲೇ ಎಚ್ಚರವಹಿಸಿದ್ದಾರೆ. ಮೊದಲು, ಒಂದು ಬದಿಗೆ ಎಲ್ಲಾ ಪ್ರಯಾಣಿಕರನ್ನೂ ಸೇರಿಸಿ ಟ್ರೈನನ್ನು ಓರೆ ಮಾಡುವ ಪ್ರಯತ್ನ ವಿಫಲವಾಗಿದೆ. ಬಳಿಕ, ಎಲ್ಲಾ ಪ್ರಯಾಣಿಕರು ಕೆಳಗಿಳಿದು ಒಂದು ಬದಿಯಿಂದ ಟ್ರೈನನ್ನು ಆ ಬದಿಯತ್ತ ತಳ್ಳಿದ್ದಾರೆ. ಈಗ, ಕಾಲು ಸಿಕ್ಕಿಕೊಂಡ ವ್ಯಕ್ತಿ ಬಂಧಮುಕ್ತನಾಗಿದ್ದಾನೆ.

Video: Australia shows the Power of people, a train tilted to rescue a passenger in Perth

ಒಗ್ಗಟ್ಟಿನಲ್ಲಿ ಬಲವಿದೆ ಎಂಬುದರ ನಿಜವಾದ ನಿದರ್ಶನ ಇಲ್ಲಿ ಕಂಡು ಬಂದಿದೆ. ಇದನ್ನು ನೋಡಿ ಆನಂದವಾಗಿದೆ. ಜನರ ಸ್ಪಂದನೆಯಿಂದ ನನ್ನ ಹೃದಯ ತುಂಬಿ ಬಂದಿದೆ. ನೆರವಾದ ಎಲ್ಲಾ ಜನರಿಗೆ, ರೈಲ್ವೆ ಸಿಬ್ಬಂದಿಗೆ ನನ್ನ ತುಂಬು ಕೃತಜ್ಞತೆ ಅರ್ಪಿಸುತ್ತೇನೆ ಎಂದು ಬಚಾವಾದ ವ್ಯಕ್ತಿ ಹೇಳಿದ್ದಾರೆ. ಈ ಅಪರೂಪದ ದೃಶ್ಯವಿರುವ ವಿಡಿಯೋ ನೋಡಿ

English summary
Australians showed the power of people. A group of people along with police tilted a train to rescue a passenger in Perth on Wednesday, Aug 6. Dozens of commuters helped police to free the passengers whose leg was trapped between a carriage and a platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X