ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವಿಶ್ವದ ಕಲ್ಯಾಣ ನಮ್ಮಿಬ್ಬರ ಹೆಗಲ ಮೇಲಿದೆ'

By Mahesh
|
Google Oneindia Kannada News

ವಾಷಿಂಗ್ಟನ್, ಸೆ.30: ಇಡೀ ವಿಶ್ವದ ಕಲ್ಯಾಣಕ್ಕಾಗಿ ನಾವಿಬ್ಬರೂ ಹೆಗಲಿಗೆ ನರೇಂದ್ರ ಮೋದಿ ಮಾಂತ್ರಿಕ ಭಾಷಣ ಹೆಗಲು ಸೇರಿಸಿ ಜತೆ ಜತೆಯಾಗಿ ಮುನ್ನಡೆಯೋಣ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ-ಅಮೆರಿಕ ಮೇರು ನಾಯಕರಿಬ್ಬರು ಶ್ವೇತಭವನದಿಂದ ಜಂಟಿ ಘೋಷಣಾ ವಾಕ್ಯ ಪ್ರಕಟಿಸಿದ್ದಾರೆ.ಚುನಾವಣೆ ಸಂದರ್ಭದಲ್ಲಿ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿ ಯಶ ಸಾಧಿಸಿದ ಒಬಾಮಾ ಹಾಗೂ ಮೋದಿ ಅವರು ವಾಲ್ ಸ್ಟ್ರೀಟ್ ಜರ್ನಲ್ ಗೆ ಜಂಟಿ ಸಂಪಾದಕೀಯ ಬರೆದು ಇತಿಹಾಸ ಸೃಷ್ಟಿಸಿದ್ದಾರೆ.

ಬರಾಕ್ ಒಬಾಮಾ ಹಾಗೂ ನರೇಂದ್ರ ಮೋದಿ ಅವರು ಔತಣಕೂಟದಲ್ಲಿ ಪಾಲ್ಗೊಂಡಿದ್ದು, ಜಂಟಿ ಸಂಪಾದಕೀಯ ಹೊರಡಿಸಿದ್ದರ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯದ ಅಧಿಕಾರಿ ಅಕ್ಬರುದ್ದೀನ್ ಅವರು ಮಾಧ್ಯಮಗಳಿಗೆ ವಿವರಣೆ ನೀಡಿದರು. ಉಭಯ ನಾಯಕರಲ್ಲಿ ನಡೆದ ಸುಮಾರು 90 ನಿಮಿಷಗಳ ಮಾತುಕತೆಯ ನಂತರ ಈ ಸಂಪಾದಕೀಯ ಸಿದ್ಧಪಡಿಸಲಾಯಿತು ಎಂದರು.[ಮೋದಿ ಮಾಂತ್ರಿಕ ಭಾಷಣ]

ಅಧ್ಯಕ್ಷ ಒಬಾಮಾ ಅವರು ನೀಡಿದ್ದ ಖಾಸಗಿ ಭೋಜನಕೂಟಕ್ಕೆ ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದಂತೆಯೇ ನಾಯಕದ್ವಯರು ಈ ಐತಿಹಾಸಿಕ ಜಂಟಿ ಘೋಷಣಾ ವಾಕ್ಯ ಹೊರಡಿಸಿದ್ದಾರೆ. ಈ ಘೋಷಣಾ ವಾಕ್ಯ ಕೇವಲ ಭಾರತ ಮತ್ತು ಅಮೆರಿಕಗಳ ಲಾಭಕ್ಕೆ ಮಾತ್ರವಲ್ಲದೆ, ಇಡೀ ವಿಶ್ವ ಕಲ್ಯಾಣಕ್ಕಾಗಿ, ಲಾಭಕ್ಕಾಗಿ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಶಾಂತಿ-ಸಮೃದ್ಧಿಗಾಗಿ ಈ ನಮ್ಮ ವಿಶೇಷ ಪಾಲುದಾರಿಕೆ. ವಿಜ್ಞಾನ, ತಂತ್ರಜ್ಞಾನ, ರಕ್ಷಣೆ, ಭದ್ರತೆ, ಆರ್ಥಿಕ ಅಭಿವೃದ್ಧಿ ಸೇರಿದಂತೆ ಎಲ್ಲ ರಾಷ್ಟ್ರಗಳೊಂದಿಗೆ ಪರಸ್ಪರ ಸಹಕಾರದೊಂದಿಗೆ ನಾವು ಮುನ್ನಡೆಯುವ ಅಗತ್ಯವಿದೆ.

ಭಯೋತ್ಪಾದಕತೆ ಮಟ್ಟ ಹಾಕೋಣ

ಭಯೋತ್ಪಾದಕತೆ ಮಟ್ಟ ಹಾಕೋಣ

ನಾವು ಒಟ್ಟಿಗೇ ಭಯೋತ್ಪಾದಕತೆಯನ್ನು ಎದುರಿಸೋಣ, ಮಟ್ಟ ಹಾಕೋಣ. ದೇಶ ಪ್ರಜೆಗಳನ್ನು ಭಯೋತ್ಪಾದಕ ದಾಳಿಗಳಿಂದ ರಕ್ಷಿಸೋಣ. ಪ್ರಕೃತಿ ವಿಕೋಪಗಳಂಥ ಸಂದರ್ಭಗಳಲ್ಲಿ ಪರಸ್ಪರ ನೆರವಿಗೆ ನಿಲ್ಲೋಣ ಎಂದಿರುವುದು ಮಹತ್ವ ಪಡೆದುಕೊಳ್ಳಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇರಾಕಿನಲ್ಲಿ ನಡೆದಿರುವ ಐಎಸ್ಐಎಸ್ ಉಗ್ರರ ದಾಳಿಗಳನ್ನು ಹತ್ತಿಕ್ಕಲು ಅಮೆರಿಕಕ್ಕೆ ಭಾರತ ನೆರವು ನೀಡುವುದೇ ಎಂಬುದನ್ನು ಕಾದು ನೋಡಬೇಕಿದೆ.

ಪರಮಾಣು ನಿಶ್ಯಸ್ತ್ರೀಕರಣ ವಿಚಾರ

ಪರಮಾಣು ನಿಶ್ಯಸ್ತ್ರೀಕರಣ ವಿಚಾರ

ಪರಮಾಣು ನಿಶ್ಯಸ್ತ್ರೀಕರಣ ವಿಚಾರದಲ್ಲಿ ಯಾವುದೇ ತಾರತಮ್ಯ ಬೇಡ. ವಿನಾಶಕಾರಿ ಶಸ್ತ್ರಾಸ್ತ್ರಗಳು ಉಗ್ರರಿಗೆ ದೊರೆಯದಂತೆ ನಿಯಂತ್ರಿಸುವ ಮೂಲಕ ಸಾಮೂಹಿಕ ನಾಶವನ್ನು ತಡೆಯೋಣ ಎಂದು ಜಂಟಿ ಹೇಳಿಕೆಯಲ್ಲಿ ಹೇಳಲಾಗಿದೆ.

ಒಬಾಮ ಏರ್ಪಡಿಸಿರುವ ಔತಣ ಕೂಟದಲ್ಲಿ

ಒಬಾಮ ಏರ್ಪಡಿಸಿರುವ ಔತಣ ಕೂಟದಲ್ಲಿ

ಒಬಾಮ ಏರ್ಪಡಿಸಿರುವ ಔತಣ ಕೂಟದಲ್ಲಿ ಸೋಮವಾರ ರಾತ್ರಿ ಪಾಲ್ಗೊಂಡ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಬಿಸಿ ನೀರು ಕುಡಿದರು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ನವರಾತ್ರಿ ಸಂದರ್ಭದಲ್ಲಿ ಮೋದಿ ಅವರು ಉಪವಾಸ ವ್ರತ ಆಚರಿಸುತ್ತಾರೆ.

ವಾಷಿಂಗ್ಟನ್‌ ಗೆ ಆಗಮಿಸಿದ ಮೋದಿ

ವಾಷಿಂಗ್ಟನ್‌ ಗೆ ಆಗಮಿಸಿದ ಮೋದಿ

ನ್ಯೂಯಾರ್ಕ್ ನ ಸೆಂಟ್ರಲ್ ಪಾರ್ಕ್, ಮ್ಯಾಡಿಸನ್ ಸ್ಕ್ವೇರ್, 11 ಜನ ಟಾಪ್ ಸಿಇಒ ಹಾಗೂ ಸಿಎಫ್ ಐನಲ್ಲಿ ಭಾಷಣದ ನಂತರ ಮೋದಿ ಅವರು ವಾಷಿಂಗ್ಟನ್ ಗೆ ಆಗಮಿಸಿದರು. ಶ್ವೇತ ಭವನಕ್ಕೆ ತೆರಳಿ ಒಬಾಮಾ ಅವರು ನೀಡಿದ ಔತಣಕೂಟದಲ್ಲಿ ಪಾಲ್ಗೊಂಡರು.

ಔತಣಕೂಟದಲ್ಲಿ ಒಬಾಮಾ ಜೊತೆಗೆ ಅಮೆರಿಕದ ಉಪಾಧ್ಯಕ್ಷ ಜೋ ಬೀಡೆನ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿಯವರೊಂದಿಗೆ ಮೋದಿ ಚರ್ಚಿಸಿದರು.

ಬಿಲ್ ಕ್ಲಿಂಟನ್ ಜೊತೆ ಮೋದಿ

ಬಿಲ್ ಕ್ಲಿಂಟನ್ ಜೊತೆ ಮೋದಿ

ಮೋದಿಯವರು ಮಂಗಳವಾರ ವಾಷಿಂಗ್ಟನ್‌ನಲ್ಲಿರುವ ಲಿಂಕನ್ ಸ್ಮಾರಕ, ಮಾರ್ಟಿನ್ ಲೂಥರ್ ಕಿಂಗ್ ಸ್ಮಾರಕ ಹಾಗೂ ಮಹಾತ್ಮಾಗಾಂಧಿ ಪ್ರತಿಮೆಗೆ ಭೇಟಿ ನೀಡಲಿದ್ದಾರೆ.

ಸುಷ್ಮಾ ಸ್ವರಾಜ್ ಜೊತೆ ಒಬಾಮಾ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜೊತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ

ಒಬಾಮಾಗೆ ಮೋದಿಯಿಂದ ಉಡುಗೊರೆ

ಒಬಾಮಾಗೆ ಮೋದಿಯಿಂದ ಉಡುಗೊರೆ ರೂಪದಲ್ಲಿ ಭಗವದ್ಗೀತೆ ಪುಸ್ತಕ ನೀಡಲಾಗಿದೆ ಎಂದು ಅಕ್ಬರುದ್ದೀನ್ ಅವರು ಟ್ವೀಟ್ ಮಾಡಿದ್ದಾರೆ.

ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಜೊತೆ

ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಜೊತೆ

ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಹಾಗೂ ಹಿಲ್ಲರಿ ಕ್ಲಿಂಟನ್ ಜೊತೆ ಪ್ರಧಾನಿ ಮೋದಿ ಹಾಗೂ ಸುಷ್ಮಾ ಸ್ವರಾಜ್

ಡಿನ್ನರ್ ನಲ್ಲಿದ್ದ ಅತಿಥಿಗಳು

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ನೀಡಿದ ಔತಣಕೂಟದಲ್ಲಿ ಭಾಗವಹಿಸಿದ ಅತಿಥಿಗಳ ವಿವರ ನೀಡಿದ ಅಕ್ಬರುದ್ದೀನ್

English summary
After using technology successfully in their respective election campaigns, US President Barack Obama and Prime Minister Narendra Modi have for the first time interacted digitally to come out with a joint editorial.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X