ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ-ಭಾರತ ಜಂಟಿ ಮಂಗಳಯಾನ

By Mahesh
|
Google Oneindia Kannada News

ವಾಷಿಂಗ್ಟನ್, ಅ.1: ಮಂಗಳ ಗ್ರಹಕ್ಕೆ ಪ್ರತ್ಯೇಕವಾಗಿ ತಮ್ಮದೇ ಆದ ನೌಕೆಗಳನ್ನು ಕಳುಹಿಸಿರುವ ಭಾರತ ಮತ್ತು ಅಮೆರಿಕ ಉಭಯ ದೇಶಗಳು ಹಾಗೂ ಜಾಗತಿಕ ಸಮುದಾಯಕ್ಕೆ ವರದಾನವಾಗಬಲ್ಲ ಈ ಮಂಗಳಯಾನ ಕಾರ್ಯಕ್ರಮ ಜಂಟಿಯಾಗಿ ಹಮ್ಮಿಕೊಳ್ಳುವುದಾಗಿ ಘೋಷಿಸಿವೆ.

ಜಂಟಿಯಾಗಿ ಅಂಗಾರಕನ ಕಕ್ಷೆಗೆ ಗಗನನೌಕೆ ಕಳುಹಿಸಲು ಎರಡೂ ರಾಷ್ಟ್ರಗಳ ನಡುವೆ ಮಾಡಿಕೊಳ್ಳಲಾಗಿರುವ ಒಪ್ಪಂದ ಪತ್ರಕ್ಕೆ ನಾಸಾ (ಅಮೆರಿಕ)ದ ಅಧ್ಯಕ್ಷ ಮತ್ತು ಆಡಳಿತಾಧಿಕಾರಿ ಚಾಲ್ರ್ಸ್ ಬೋಲ್ಡೆನ್ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಅಧ್ಯಕ್ಷ ಕೆ.ರಾಧಾಕೃಷ್ಣನ್ ಅವರು ನಿನ್ನೆ ಟೊರೆಂಟೋದಲ್ಲಿ ಸಹಿ ಹಾಕಿದ್ದಾರೆ.

ರಾಷ್ಟ್ರಗಳ ಮಧ್ಯೆ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ನಾಸಾ ಇಸ್ರೋ ಮಾರ್ಸ್ ಕಾರ್ಯತಂಡ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಒಪ್ಪಂದ ಪತ್ರದಲ್ಲಿ ನಮೂದಿಸಲಾಗಿದೆ.

US India Collaborate On Mars Exploration

2020ರಲ್ಲಿ ಬಾಹ್ಯಾಕಾಶ ನೌಕೆಯನ್ನು ಮಂಗಳಗ್ರಹಕ್ಕೆ ಕಳುಹಿಸುವ ಗುರಿ ಹೊಂದಿರುವ ಭಾರತ ಮತ್ತು ಅಮೆರಿಕ ನಾಸಾ ಮತ್ತು ಇಸ್ರೋ ಯಾವ ರೀತಿಯಾಗಿ ಮುಂದುವರೆಯಬೇಕು ಎಂಬ ಬಗ್ಗೆಯೂ ಇಬ್ಬರೂ ವಿಜ್ಞಾನಿಗಳು ಸಹಿ ಹಾಕಿದ್ದಾರೆ.

ನಾಸಾ-ಇಸ್ರೋ ಕಡತಗಳ ಸಹಿಯಿಂದಾಗಿ ಮಂಗಳಯಾನದಲ್ಲಿ ವೈಜ್ಞಾನಿಕವಾಗಿ ಪ್ರಗತಿ ಸಾಧಿಸುವುದು ಹಾಗೂ ಈ ಭೂಮಿಯ ಮೇಲಿನ ಜನತೆಯ ಜೀವನವನ್ನು ಸುಧಾರಿಸುವುದು ಎರಡೂ ಕೆಲಸಗಳು ಒಟ್ಟಿಗೇ ಕಾರ್ಯಗತವಾಗಲಿವೆ ಎಂದು ನಾಸಾ ಅಧ್ಯಕ್ಷ ಚಾಲ್ರ್ಸ್ ಬೋಲ್ಡೆನ್ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದ ಮೊತ್ತಮೊದಲ ಮಂಗಳಯಾನದ ಬಾಹ್ಯಾಕಾಶ ನೌಕರೆ ಸೆ.24 ರಂದು ಅಂಗಾರಕನ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಗೊಂಡು ಅಲ್ಲಿಂದ, ಅಂಗಾರಕನ ಮೇಲ್ಮೈ ಚಿತ್ರಗಳನ್ನು ರವಾನಿಸಿತ್ತು. ಅಮೆರಿಕ ಕಳುಹಿಸಿರುವ ಮಾವೆನ್ ಬಾಹ್ಯಾಕಾಶ ನೌಕೆ ಕೂಡ ಈಗಾಗಲೇ ಮಂಗಳನ ಅಂಗಳ ಸೇರಿದೆ.

English summary
India and the US, after sending their own respective spacecraft into Mars’ orbit, have now agreed to cooperate on future explorations of the Red Planet, which America said will yield “tangible benefits” to both the countries and the world at large.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X