ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ನ್ಯೂಯಾರ್ಕ್ ಕೋರ್ಟಿನಿಂದ ಸಮನ್ಸ್

By Mahesh
|
Google Oneindia Kannada News

ನ್ಯೂಯಾರ್ಕ್, ಸೆ.26: ಅಮೆರಿಕ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕಿನ ವಿಮಾನ ನಿಲ್ದಾಣಕ್ಕೆ ಕಾಲಿಡುವ ಮೊದಲೇ ಅವರಿಗೆ ಇಲ್ಲಿನ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. 2002ರ ಗುಜರಾತ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಿದೆ.

2002ರಲ್ಲಿ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರದ ಕುರಿತು ಅಮೆರಿಕನ್ ಜೆಸ್ಟಿಸ್ ಸೆಂಟರ್(ಎಜೆಸಿ) ಎಂಬ ಮಾನವ ಹಕ್ಕು ಸಂಘಟನೆ ನ್ಯೂಯಾರ್ಕ್ ಕೋರ್ಟಿಗೆ ದೂರು ನೀಡಿತ್ತು.

ಈ ಸಂಬಂಧ ಅರ್ಜಿ ಕೈಗೆತ್ತಿಕೊಂಡಿರುವ ನ್ಯೂಯಾರ್ಕ್ ನ್ಯಾಯಾಲಯ (Federal Court of Southern District of New York), ಪ್ರಧಾನಿ ಮೋದಿ ಅವರಿಗೆ ಸಮನ್ಸ್ ಜಾರಿ ಮಾಡಿ, 21 ದಿನಗಳೊಳಗೆ ಉತ್ತರ ನೀಡುವಂತೆ ಸೂಚಿಸಿದೆ. [ಯುಎಸ್ ಪ್ರವಾಸದ ವೇಳಾಪಟ್ಟಿ]

U.S. court issues summons against Modi

ಒಂದು ವೇಳೆ ನಿಗದಿತ 21 ದಿನಗಳಲ್ಲಿ ಮೋದಿ ಅವರು ಉತ್ತರಿಸಲು ವಿಫಲರಾದ ಹಿನ್ನೆಲೆಯಲ್ಲಿ ದೂರುದಾರರು ತಮ್ಮ ಅರ್ಜಿಯಲ್ಲಿ ಕೋರಿರುವ ಪರಿಹಾರವನ್ನು ನೀಡುವಂತೆ ನ್ಯಾಯಾಧೀಶರು ಆದೇಶಿಸುವ ಸಾಧ್ಯತೆಯಿದೆ.

ಮೋದಿ ಅವರು ಫ್ರಾಂಕ್ ಫರ್ಟ್ ನಲ್ಲಿ ಉಳಿದು ನ್ಯೂಯಾರ್ಕ್ ತಲುಪಲಿದ್ದಾರೆ. ನಂತರ ಸೆ.29ರಂದು ವಾಷಿಂಗ್ಟನ್ ಸೇರಲಿದ್ದಾರೆ. ಅಮೆರಿಕ ಪ್ರವಾಸದ ವೇಳೆ ಉಭಯ ನಾಯಕರು ಆರ್ಥಿಕ ಪ್ರಗತಿ, ರಕ್ಷಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಸಿರಿಯಾ, ಅಫ್ಘಾನಿಸ್ತಾನ, ಇರಾಕ್‌ನಲ್ಲಿನ ಪ್ರಸ್ತುತ ಬೆಳವಣಿಗೆಗಳ ಕುರಿತು ಅವರು ಮೋದಿ ಮತ್ತು ಒಬಾಮಾ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಸೆ.29ರಂದು ಸುಮಾರು 11 ಟಾಪ್ ಕಾರ್ಪೊರೇಟ್ ದಿಗ್ಗಜರನ್ನು ಮೋದಿ ಉಪಹಾರ ಸಮಯದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ನಂತರ ನ್ಯೂಯಾರ್ಕ್ ನಲ್ಲಿ ಐದಾರು ಪ್ರಮುಖ ಕಂಪನಿಗಳ ಪ್ರತಿನಿಧಿಗಳ ಜೊತೆ ಮುಖಾಮುಖಿ ಚರ್ಚೆ ನಡೆಸಲಿದ್ದಾರೆ. [ಮೋದಿಗಾಗಿ ಕಾದಿರುವ ಯುಎಸ್ ನ ಟಾಪ್ ಸಿಇಒ]

English summary
A federal court in New York has issued summons against the Indian Prime Minister Narendra Modi for his role in presiding over the anti-Muslim pogrom in Gujarat during 2002 when he was Chief Minister of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X