ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.1: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಸೆ.1: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

6.00: ಬಿಸಿಸಿಐ ಅಧ್ಯಕ್ಷರಾಗಿ ಎನ್ ಶ್ರೀನಿವಾಸನ್ ಪುನರ್ ನೇಮಕಕ್ಕೆ ಸುಪ್ರೀಂ ಅಡ್ಡಿಪಡಿಸಿದೆ. 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಗೆ ಸಂಬಂಧಿಸಿದಂತೆ ಎನ್ ಶ್ರೀನಿವಾಸನ್ ಆರೋಪ ಎದುರಿಸುತ್ತಿದ್ದಾರೆ.
5.30: ಭಾರತದಲ್ಲಿ ರಕ್ಷಣಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 33.58 ಬಿಲಿಯನ್ ಡಾಲರ್ ಹೂಡಿಕೆಗೆ ಜಪಾನ್ ಅಸ್ತು.
5.20: ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಡ್ಡಿಪಡಿಸಲು ಯತ್ನಿಸಿದೆ.ಕೆಪಿಎಲ್ ನಲ್ಲಿ ಕನ್ನಡತನವಿಲ್ಲ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಮೈದಾನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
4.30: ಐಸಿಐ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದೆ.
3.30 :ವಿಜಯ್ ಮಲ್ಯ ಸುಸ್ತಿದಾರ ಬಾಕಿದಾರ ಎಂದು ಸಾಲ ಕೊಟ್ಟ ಬ್ಯಾಂಕುಗಳು ಘೋಷಿಸಿವೆ. ಬೇಕಾಂತಲೇ ಸಾಲ-ಬಡ್ಡಿ ಕಟ್ಟದೇ ಉಳಿಸಿಕೊಂಡಿದ್ದಾರೆ ಎಂದಿವೆ.

N Srinivasan

10.22: ಪಾಕಿಸ್ತಾನದಲ್ಲಿ ಪ್ರಧಾನಿ ನವಾಜ್ ಷರೀಫ್ ಪದಚ್ಯುತಿಗಾಗಿ ಆಗ್ರಹಿಸಿ ಉಗ್ರ ಹೋರಾಟ ನಡೆದಿದೆ. ತಾಹೀರ್ ಉಲ್ ಖಾದ್ರಿ ಹಾಗೂ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಅವರು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.

10.15 : ಸಿರಿಯಾದ ವೈಮಾನಿಕ ದಾಳಿಗೆ 42 ಮಕ್ಕಳು ಬಲಿಯಾಗಿದ್ದಾರೆ.

Updates India, International News in Brief Sept 01

10.00: ಜಪಾನ್ ಪ್ರವಾಸ ನಿರತ ನರೇಂದ್ರ ಮೋದಿ ಅವರು ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಬೆನ್ನಲ್ಲೇ ಟೋಕಿಯೋದ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆ ಉದ್ದೇಶಿಸಿ ಮಾತನಾಡಲಿದ್ದಾರೆ.
9.45: ಪ್ರಪ್ರಥಮ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿಯನ್ನು ಅಭಿಷೇಕ್ ಬಚ್ಚನ್ ಒಡೆತನದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಗೆದ್ದುಕೊಂಡಿದೆ. ಫೈನಲ್ ನಲ್ಲಿ ಯು ಮುಂಬಾ ತಂಡವನ್ನು ಸೋಲಿಸಿತು.
9.30: ಪುನರುತ್ಥಾನಗೊಂಡ ನಲಂದಾ ವಿಶ್ವವಿದ್ಯಾಲಯ ಸೋಮವಾರ ಪುನರ್ ಆರಂಭಗೊಂಡಿದೆ.
9.15: ಗಣೇಶ ದೇವರ ವಿರುದ್ಧ ಟ್ವೀಟ್ ಮಾಡಿದ ಆರೋಪ ಹೊತ್ತಿರುವ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ವಿರುದ್ಧ ಜಲಂಧರ್ ನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.
English summary
Top news in brief for the day: Pakistan crisis deepens as PTI Chief Imran Khan and Tahir-ul-Qadri refuse to end protests and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X