ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾಕಿನಲ್ಲಿ ಬಾಂಬ್ ಬಿದ್ರೆ, ಭಾರತದಲ್ಲೇಕೆ ನಡುಕ

By Mahesh
|
Google Oneindia Kannada News

ಬಾಗ್ದಾದ್, ಜೂ.17: ಇರಾಕಿನಲ್ಲಿ ಏನಾಗುತ್ತಿದೆ? ಇದರಿಂದ ಭಾರತಕ್ಕೇನು ನಷ್ಟ? ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಲೆವಂಟ್ ಬಂಡುಕೋರರು ಜಾಗತಿಕ ಜಿಹಾದಿಗೆ ಕರೆ ನೀಡುತ್ತಿದೆಯೆ? ಕಾಶ್ಮೀರದಲ್ಲಿರುವ ಮುಸ್ಲಿಮರಿಗೆ ಕುಮ್ಮಕ್ಕು ನೀಡುತ್ತಿದೆಯೆ? ಎಂಬೆಲ್ಲ ಪ್ರಶ್ನೆಗಳ ನಡುವೆ ಇರಾಕ್ ನ ಅಮಾಯಕ ಜನತೆ ಮಾನ, ಪ್ರಾಣ ರಕ್ಷಣೆ ಮಹತ್ವದ್ದಾಗಿದೆ.

ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಲೆವಂಟ್'(ಐಎಸ್‌ಐಎಲ್)ನ ಬಂಡುಕೋರರು ಟ್ವಿಟರ್‌ನಲ್ಲಿ ಹೇಳಿಕೆಯೊಂದನ್ನು ನೀಡಿರುವುದಲ್ಲದೆ, ಮಾನವ ಹತ್ಯೆಯ ಭೀಭತ್ಸ ದೃಶ್ಯದ ಛಾಯಾಚಿತ್ರಗಳನ್ನು ಹರಿಯಬಿಡುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಾಮೂಹಿಕ ಹತ್ಯಾಕಾಂಡ ನಡೆದಿದೆಯೆನ್ನಲಾಗಿರುವ ಸಲಾಹುದ್ದೀನ್ ಪ್ರಾಂತದಲ್ಲಿ ಇಷ್ಟೊಂದು ಪ್ರಮಾಣದ ಶವಸಂಸ್ಕಾರಗಳು ನಡೆದಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲವೆಂದು ಅಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ಬಂಡುಕೋರರ ಈ ಹೇಳಿಕೆ ಸತ್ಯವಾಗಿದ್ದಲ್ಲಿ, ಈ ಸಂಖ್ಯೆ ಸಿರಿಯಾದಲ್ಲಿ ಕಳೆದ ವರ್ಷ ರಾಸಾಯನಿಕ ಅಸ್ತ್ರಗಳಿಗೆ ಬಲಿಯಾದವರ ಸಂಖ್ಯೆಗಿಂತಲೂ ಅಧಿಕವಾಗಲಿದೆ. ಸಿರಿಯದಲ್ಲಿ ಕಳೆದ ವರ್ಷ ಸಂಘರ್ಷದ ವೇಳೆ ಸರಕಾರವು ನಡೆಸಿದ ರಾಸಾಯನಿಕ ಅಸ್ತ್ರಗಳ ದಾಳಿಗೆ 1,400 ಮಂದಿ ಬಲಿಯಾಗಿದ್ದರು.[ವಿಷಾನಿಲ ಪ್ರಯೋಗಕ್ಕೆ ಜನ ಬಲಿ]

2005-2007ರ ಅವಯಲ್ಲಿ ಸಂಭವಿಸಿದಂತೆ ಮತ್ತೊಮ್ಮೆ ಇರಾಕ್‌ನಲ್ಲಿ ಶಿಯಾ ಹಾಗೂ ಸುನ್ನಿ ಸಮುದಾಯಗಳ ನಡುವೆ ಭೀಕರ ಸಂಘರ್ಷ ಉಂಟಾಗುವ ಭೀತಿ ವ್ಯಕ್ತಗೊಂಡಿದೆ. ಇರಾಕ್ ನ ಸಮಸ್ಯೆಗೆ ಏನು ಕಾರಣ, ಇದರಿಂದ ಬೆಲೆ ಏರಿಕೆ ಎದುರಿಸಬೇಕೇ? ಭಾರತ ತನ್ನ ವಿದೇಶಾಂಗ ನೀತಿ ಬದಲಾಯಿಸಲು ಇದು ಸೂಕ್ತ ಸಮಯವೇ? ಮುಂದೆ ಓದಿ...

ಎಲ್ಲೆಡೆ ಕಚ್ಚಾತೈಲ ಪೂರೈಕೆ ಸ್ಥಗಿತ ಭೀತಿ

ಎಲ್ಲೆಡೆ ಕಚ್ಚಾತೈಲ ಪೂರೈಕೆ ಸ್ಥಗಿತ ಭೀತಿ

ಒಪೆಕ್ ಸದಸ್ಯ ರಾಷ್ಟ್ರಗಳ ಪೈಕಿ ಇರಾಕ್ ಎರಡನೆ ಅತಿದೊಡ್ಡ ಕಚ್ಚಾತೈಲ ಪೂರೈಕೆದಾರ ರಾಷ್ಟ್ರವಾಗಿದೆ. ಬಂಡುಕೋರರು ಕಿರ್ಕುಕ್ ನಗರವನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಗುರುವಾರದಿಂದ ತೈಲ ಬೆಲೆಯು ಇತ್ತೀಚಿನ ಒಂಬತ್ತು ತಿಂಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ.

ಇರಾಕ್ ಬಿಕ್ಕಟ್ಟು ಮಧ್ಯಪ್ರಾಚ್ಯದ ತೈಲಪೂರೈಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ ಎಂಬ ಆತಂಕವನ್ನು ಇತ್ತೀಚೆಗೆ ಅಮೆರಿಕ ವ್ಯಕ್ತಪಡಿಸಿದ ಬೆನ್ನಲ್ಲೇ ತೈಲ ಬೆಲೆಗಳಲ್ಲಿ ಏರಿಕೆ ಕಂಡು ಬರತೊಡಗಿದೆ.

12 ರಾಷ್ಟ್ರಗಳ ಒಪೆಕ್ ಅತಿದೊಡ್ಡ ರಾಷ್ಟ್ರಗಳಲ್ಲಿ ಒಂದಾಗಿರುವ ಇರಾಕ್ ದಿನವೊಂದಕ್ಕೆ 33 ಲಕ್ಷ ಬ್ಯಾರೆಲ್ ತೈಲೋತ್ಪಾದನೆ ಮಾಡುತ್ತಿದೆ.

ಇರಾಕಿನಲ್ಲಿರುವ ಭಾರತೀಯರಲ್ಲಿ ಆತಂಕ

ಇರಾಕಿನಲ್ಲಿರುವ ಭಾರತೀಯರಲ್ಲಿ ಆತಂಕ

ಇರಾಕಿನಲ್ಲಿರುವ ಭಾರತೀಯರಲ್ಲಿ ಆತಂಕ ಮನೆ ಮಾಡಿದ್ದು ಶೀಯಾ ಸುನ್ನಿ ಸಮುದಾಯದ ಸಂಘರ್ಷ ಯುದ್ಧ ರೂಪ ಪಡೆದುಕೊಂಡರೆ ಇರಾಕಿನಲ್ಲಿರುವ ಸುಮಾರು 18,000 ಭಾರತೀಯರ ಜೀವ ರಕ್ಷಣೆಯಾಗಬೇಕಾಗುತ್ತದೆ.

ಒಂದುವೇಳೆ ಐಎಸ್ ಐಎಸ್ ಸಂಘಟನೆ ಏನಾದರೂ ಮಾಲಿಕಿ ಸರ್ಕಾರವನ್ನು ಹೊಡೆದುರುಳಿ ಬಾಗ್ಲಾದ್ ವಶಪಡಿಸಿಕೊಂಡರೆ ಇದು ಇತರೆ ಉಗ್ರ ಸಂಘಟನೆಗಳಿಗೆ ಸ್ಪೂರ್ತಿಯಾಗಬಹುದು. ಅಲ್ ಖೈದಾ ಮುಂತಾದ ಸಂಘಟನೆ ತನ್ನ ಪ್ರಭಾವ ಬೀರಿ ಜಾಗತಿಕ ಜಿಹಾದ್ ಹೆಸರಿನಲ್ಲಿ ಭಾರತದ ಜಮ್ಮು ಮತ್ತ್ತು ಕಾಶ್ಮೀರ ಸೇರಿದಂತೆ ಅನೇಕ ರಾಷ್ಟ್ರಗಳ ಮುಸ್ಲಿಂ ಜನಾಂಗವನ್ನು ತಪ್ಪು ದಾರಿಗೆಳೆಯಬಹುದು.

 ಸೇನಾ ಕಾರ್ಯಾಚರಣೆ ಬಗ್ಗೆ ಯುಎಸ್ ಚಿಂತನೆ

ಸೇನಾ ಕಾರ್ಯಾಚರಣೆ ಬಗ್ಗೆ ಯುಎಸ್ ಚಿಂತನೆ

ಸುನ್ನಿ ಉಗ್ರರಿಂದ ಮುತ್ತಿಗೆಗೆ ಒಳಗಾಗಿರುವ ಇರಾಕ್‌ನಲ್ಲಿ ಸೇನಾ ಕಾರ್ಯಾಚರಣೆ ನಡೆಸುವ ಬಗ್ಗೆ ತೀವ್ರ ಪರಿಶೀಲನೆ ನಡೆಸಿರುವ ಅಮೆರಿಕ, ದೇಶದಲ್ಲಿ ಸ್ಥಿರತೆ ಮೂಡಿಸುವ ನಿಟ್ಟಿನಲ್ಲಿ ಇರಾನ್ ಜತೆ ಸಮಾಲೋಚನೆ ನಡೆಸಿದೆ.

ಈಗಾಗಲೇ ಇರಾಕಿನ ಹಲವು ಪಟ್ಟಣ, ನಗರಗಳನ್ನು ವಶಪಡಿಸಿಕೊಂಡು ರಾಜಧಾನಿ ಬಾಗ್ದಾದ್‌ನತ್ತ ನುಗ್ಗುತ್ತಿರುವ ಸುನ್ನಿ ಉಗ್ರ ನಿಯಂತ್ರಣಕ್ಕಾಗಿ ಇರಾಕ್‌ನಲ್ಲಿ ಸೇನಾಕಾರ್ಯಚರಣೆ ಕುರಿತಂತೆ ಅಧ್ಯಕ್ಷ ಬರಾಕ್ ಒಬಾಮಾ ಅವರ ಭದ್ರತಾ ಸಲಹೆಗಾರರು ಇರಾಕ್‌ನ ಪ್ರಧಾನಿ ನುರಿ-ಅಲ್-ಮಲ್ಲಿಕಿ ಜತೆ ಮಾತುಕತೆ ನಡೆಸಿದ್ದಾರೆ.
ಹಿಂಸಾಚಾರ ಮೇರೆ ಮೀರಿದೆ

ಹಿಂಸಾಚಾರ ಮೇರೆ ಮೀರಿದೆ

ಇರಾಕ್ ಮತ್ತು ಸಿರಿಯಾದ ಇಸ್ಲಾಮಿಕ್ ಉಗ್ರರು ಹಲವು ದೊಡ್ಡ ದೊಡ್ಡ ನಗರ, ಪಟ್ಟಣಗಳನ್ನು ಈಗಾಗಲೇ ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಪ್ರಸ್ತುತ ರಾಜಧಾನಿ ಬಾಗ್ದಾದ್‌ನತ್ತ ನುಗ್ಗಿಬರುತ್ತಿದ್ದಾರೆ. ಈ ಹೋರಾಟಗಾರರಿಗೆ ಸುನ್ನಿ ಪಂಥದ ಇತರೆ ಸಂಘಟನೆಗಳೂ ಕೂಡ ಕೈ ಜೋಡಿಸಿದ್ದು, ಇರಾಕ್‌ನಲ್ಲಿ ಕಳೆದ ಹಲವು ದಿನಗಳಿಂದ ಉಗ್ರರು ಭಾರೀ ಸಮರವನ್ನೇ ಸಾರಿದ್ದಾರೆ. ಕಳೆದ 5 ದಿನಗಳಿಂದಲೂ ಈ ಹಿಂಸಾಚಾರ ಮೇರೆ ಮೀರಿದೆ. ಜನ ಸಾಮಾನ್ಯರು ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ.

ಚಿತ್ರದಲ್ಲಿ :ಅಲ್ಗೋಷ್ ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ

Islamic State in Iraq and Syria

Islamic State in Iraq and Syria

2006ರಲ್ಲಿ ಸ್ಥಾಪನೆಯಾದ ಐಎಸ್ಐಎಸ್ ಸಂಘಟನೆ ಪ್ರತ್ಯೇಕಾ ಇರಾಕ್ ಇಸ್ಲಾಂ ರಾಷ್ಟ್ರ ನಿರ್ಮಾಣಕ್ಕಾಗಿ ಹೋರಾಟ ನಡೆಸುತ್ತಿದೆ. ಈ ಸಂಘಟನೆ ಜತೆ ಜಿಹಾದಿ ಉಗ್ರ ಸಂಘಟನೆಗಳು ಕೈಜೋಡಿಸಿವೆ ಇರಾಕ್ ಹಾಗೂ ಸಿರಿಯಾದಲ್ಲಿ ವಹಾಬಿ ಚಳವಳಿಯಿಂದ ಪ್ರೇರಿತವಾದ ಈ ಸಂಘಟನೆ ಐಎಸ್ ಐಎಲ್ ಎಂದು ಕರೆಯಲಾಗುತ್ತದೆ. ಈ ಲೆವೆಂಟ್ ನಲ್ಲಿ ಸಿರಿಯಾಅ, ಲೆಬನಾನ್, ಇಸ್ರೇಲ್, ಪ್ಯಾಲೇಸ್ಟೀನ್, ಜೋರ್ಡಾನ್, ಸಿಪ್ರಾಸ್, ಹತಾಯ್ ಸೇರಿದೆ.

ಇವರ ಜಾಗತಿಕ ಹೋರಾಟದ ಭೂಪಟದಲ್ಲಿ ಭಾರತದ ಕಾಶ್ಮೀರವಲ್ಲದೆ, ಉತ್ತರ ಹಾಗೂ ಪಶ್ಚಿಮ ಭಾರತ, ಗುಜರಾತಿನ ಕೆಲವು ಭಾಗ ಕೂಡಾ ಸೇರಿದೆ. ಜಾಗತಿಕ ಜಿಹಾದಿಗಳನ್ನು ರೂಪಿಸಿ ಅಫ್ಘಾನಿಸ್ತಾನದಲ್ಲಿ 1996ರಲ್ಲಿ ತಾಲಿಬಾನಿಗಳು ನೆಲೆ ನಿಂತ ಹಾಗೆ ವಿವಿಧ ದೇಶಗಳಲ್ಲಿ ಐಎಸ್ಐಎಲ್ ಸಂಘಟನಾಕಾರರು ಚುರುಕಾಗುತ್ತಿದ್ದಾರೆ. ಭಾರತ ಎಚ್ಚೆತ್ತುಕೊಳ್ಳಲಿದ್ದಾರೆ ಮತ್ತೆ ಅಪಾಯ ಕಟ್ಟಿಟ್ಟ ಬುತ್ತಿ.

English summary
Unrest in West Asia is bad news for the region and India in multiple ways. First, if the violence breaks out into a full-fledged war it will affect the millions of Indians working in the region. As Iraq's mounting unrest pushes crude oil prices to their highest levels this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X