ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಹಾದಿಗಳಿಂದ ಕೊಲೆ ಬೆದರಿಕೆ, ಟ್ವಿಟ್ಟರ್ ಹೈ ಅಲರ್ಟ್

By Mahesh
|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಸೆ.11: ಇರಾಕಿನ ಐಎಸ್ ಐಎಸ್ ಬೆಂಬಲಿತ ಜಿಹಾದಿಗಳು ತನ್ನ ಉದ್ಯೋಗಿಗಳ ಹತ್ಯೆಗೈಯ್ಯುವ ಬೆದರಿಕೆ ಹಾಕಿರುವುದನ್ನು ಟ್ವಿಟ್ಟರ್ ಸಂಸ್ಥೆ ಗಂಭೀರವಾಗಿ ಪರಿಗಣಿಸಿದೆ. ಸಂಸ್ಥೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನ ಉದ್ಯೋಗಿಗಳಿಗೆ ಅರೇಬಿಕ್ ಭಾಷೆಯ ಸಂದೇಶದ ಮೂಲಕ ಬೆದರಿಕೆ ಒಡ್ಡಲಾಗಿತ್ತು.

ಉಗ್ರರ ಸಂದೇಶವನ್ನು Vocativ ವೆಬ್ ತಾಣ ಇಂಗ್ಲೀಷ್ ಗೆ ತರ್ಜುಮೆ ಮಾಡಿತ್ತು. ಇದರ ಆಧಾರದ ಮೇಲೆ ನಮ್ಮ ತನಿಖಾ ತಂಡ ಈಗ ಉಗ್ರರ ಸಂದೇಶಗಳ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ತಜ್ಞರ ಅಭಿಪ್ರಾಯ ಕೇಳುತ್ತಿದ್ದಾರೆ ಎಂದು ಟ್ವಿಟ್ಟರ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.

ಉತ್ತರ ಇರಾಕ್ ಹಾಗೂ ಸಿರಿಯಾದಲ್ಲಿ ಭಯೋತ್ಪಾದನೆಯಲ್ಲಿ ತೊಡಗಿರುವ ಉಗ್ರರು ಸಾಮಾಜಿಕ ಜಾಲ ತಾಣಗಳು ಅದರಲ್ಲೂ ಟ್ವಿಟ್ಟರ್ ಬಳಸಿ ತಮ್ಮ ಸಂದೇಶಗಳನ್ನು ಎಲ್ಲೆಡೆ ಹರಡುತ್ತಿದ್ದರು. ಉಗ್ರ ಸಂಘಟನೆಗಳ ಟ್ವಿಟ್ಟರ್ ಐಡಿ ಗುರುತಿಸಿ ಅಂಥವನ್ನು ಡಿಲೀಟ್ ಮಾಡತೊಡಗಿದ ಬೇ ಏರಿಯಾ ಉದ್ಯೋಗಿಗಳ ಮೇಲೆ ಉಗ್ರರು ಈಗ ಕೆಂಗಣ್ಣು ಬೀರಿದ್ದಾರೆ. [ಉಗ್ರರ ಸದೆಬಡೆಯಲು ಒಬಾಮಾ ರಣತಂತ್ರ]

Twitter investigates death threats from ISIS-affiliated militants

ಜೆರುಸಲೇಂ ಮೂಲದ ಅಲ್ ನುಸ್ರಾ ಅಲ್ ಮಕ್ದಿಸಿಯಾ ಸಂಘಟನೆಯ ಖಾತೆ ಎನ್ನಲಾದ @dawlamoon ನಿಂದ ಈ ಬೆದರಿಕೆ ಸಂದೇಶಗಳು ಬಂದಿವೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಇರಾಕಿನ ಉಗ್ರರ ಬಗ್ಗೆ ಇತ್ತೀಚೆಗೆ ಮಾತನಾಡುತ್ತಾ ISIS ಉಗ್ರರಿಗೆ ಸಾಮಾಜಿಕ ಜಾಲ ತಾಣಗಳ ದುರ್ಬಳಕೆ ಮಾಡಿಕೊಳ್ಳುವುದು ಕರಗತವಾಗಿದೆ ಇದರಿಂದ ಅಮಾಯಕ ಮುಸ್ಲಿಂ ಯುವಕರು ಜಿಹಾದಿಗಳಾಗಿ ಪರಿವರ್ತನೆಗೊಳ್ಳುತ್ತಿರುವುದು ದುರಂತ ಎಂದಿದ್ದರು.

ಇದಾದ ಮೇಲೆ ಟ್ವಿಟ್ಟರ್ ತನ್ನ ಒಡಲಿನಲ್ಲಿದ್ದ ಉಗ್ರ ಸಂಘಟನೆಗಳ ಖಾತೆಗಳನ್ನು ಅಳಿಸಲು ಮುಂದಾಯಿತು. ಐಸಿಸ್‌ನ ಖಾತೆಯನ್ನು ನಿಷ್ಕ್ರಿಯಗೊಳಿಸಿದ ಹಿನ್ನೆಲೆಯಲ್ಲಿ ಐಸಿಸ್‌ನೊಂದಿಗೆ ನಂಟನ್ನು ಹೊಂದಿರುವ ಗುಂಪೊಂದು ರವಿವಾರ ರಾತ್ರಿ ನಿರಂತರವಾಗಿ ಬೆದರಿಕೆಯ ಟ್ವೀಟ್‌ಗಳನ್ನು ಅಪ್‌ಲೋಡ್‌ ಮಾಡಿದ ಹಿನ್ನೆಲೆಯಲ್ಲಿ ಸೋಮವಾರದಂದು ಈ ಖಾತೆಯನ್ನೂ ಸ್ಥಗಿತಗೊಳಿಸಲಾಯಿತು. [ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!]

ಟ್ವಿಟರ್‌ನ ಉದ್ಯೋಗಿಗಳ ಮೇಲೆ ನೇರ ದಾಳಿ ನಡೆಸಲು ಇದೀಗ ಕಾಲ ಕೂಡಿ ಬಂದಿದೆ. ನೌಕರರ ಮೇಲೆ ದೈಹಿಕವಾಗಿ ಹಿಂಸಿಸಿ ಅವರನ್ನು ಹತ್ಯೆಗೈಯ್ಯಲಾಗುವುದು. ಒಂದು ವೇಳೆ ಟ್ವಿಟರ್‌ನ ಆಡಳಿತ ಮಂಡಳಿ ಟ್ವಿಟರ್‌ ಖಾತೆಯನ್ನು ಸ್ಥಗಿತಗೊಳಿಸುವುದನ್ನು ಮುಂದುವರಿಸಿದ್ದೇ ಆದಲ್ಲಿ ನೇರವಾಗಿ ಸಂಸ್ಥೆಯ ಉದ್ಯೋಗಿಗಳ ಮೇಲೆಯೇ ದಾಳಿ ನಡೆಸಲಾಗುವುದು ಎಂದು ಬೆದರಿಕೆ ಸಂದೇಶದಲ್ಲಿ ಸ್ಪಷ್ಟ ಎಚ್ಚರಿಕೆಯನ್ನು ನೀಡಲಾಗಿದೆ.

English summary
Twitter is investigating apparent death threats against its employees made by Islamic militants. The jihadists with ties to ISIS tweeted that they might send lone assassins to murder employees of the San Francisco-based tech company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X