ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ದೇಶ, ವಿದೇಶಗಳ ಸಂಕ್ಷಿಪ್ತ ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ಮೇ.13: ಕೂಡಂಕುಳಂ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವನ್ನು ದಕ್ಷಿಣ ವಿದ್ಯುತ್ ಜಾಲದೊಂದಿಗೆ ಬೆಸೆಯಲಾಗಿದೆ. ಭಾರತ-ರಷ್ಯ ಪರಮಾಣು ಸಹಯೋಗದಲ್ಲಿ ಕೈಗೊಳ್ಳಲಾಗಿರುವ ವಿದ್ಯುತ್ ಉತ್ಪಾದನೆ ತಮಿಳುನಾಡಿನ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳು ವಿದ್ಯುತ್ ಹಂಚಿಕೆ ಲೆಕ್ಕಾಚಾರ ಶುರು ಮಾಡಿಕೊಳ್ಳಬೇಕಿದೆ. ಆದರೆ, ಸ್ಥಳೀಯರಿಗೆ ಮಾತ್ರ ಇದು ಮಾರಕವೆನಿಸಿ ಕಳೆದ ಸಾವಿರ ದಿನಗಳಿಂದ ಹೋರಾಟ ಮುಂದುವರೆಸಿದ್ದಾರೆ.

ಮಂಗಳವಾರಕ್ಕೆ ಸರಿಯಾಗಿ ಅಣು ವಿದ್ಯುತ್ ಯೋಜನೆ ವಿರೋಧಿ ಕಾರ್ಯಕರ್ತರ ಪ್ರತಿಭಟನೆ 1002ನೇ ದಿನಕ್ಕೆ ಕಾಲಿಡುತ್ತದೆ. ತಿರುನಲ್ವೇಲಿ ಜಿಲ್ಲೆಯ ಇಡಿಂಥಕರೈ ಗ್ರಾಮಸ್ಥರು ಮೊಂಬತ್ತಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದರೆ. ಕರ್ನಾಟಕ ಸೇರಿದ ಇತರೆ ರಾಜ್ಯಗಳು ನಮ್ಮ ಪಾಲಿನ ವಿದ್ಯುತ್ ಯಾವಾಗ ಸಿಗಲಿದೆ ಎಂದು ಕಾಯುವಂತಾಗಿದೆ.

ಭಾರತ ಮತ್ತು ರಷ್ಯ ಸರ್ಕಾರಗಳ ಜಂಟಿ ಯೋಜನೆಯಾಗಿರುವ ತಮಿಳುನಾಡಿನ ಕೂಡಂಕುಳಂನ ಪರಮಾಣು ಸ್ಥಾವರಕ್ಕೆ ಇದ್ದ ಎಲ್ಲ ಅಡ್ಡಿ ಆತಂಕಗಳೂ ಕಳೆದ ಮೇ ತಿಂಗಳಿನಲ್ಲೇ ನಿವಾರಣೆಯಾಗಿತ್ತು. ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಇದ್ದ ಆತಂಕ ದೂರವಾಗಿ, ಸ್ಥಾವರಕ್ಕೆ ಸುಪ್ರೀಂಕೋರ್ಟ್ ನ್ಯಾಯಪೀಠ ಗ್ರೀನ್ ಸಿಗ್ನಲ್ ನೀಡಿತ್ತು. ತಿರುನಲ್ವೇಲಿ ಜಿಲ್ಲೆ ಜನರ ಪ್ರತಿಭಟನೆ ಸೇರಿದಂತೆ ದೇಶ, ವಿದೇಶಗಳ ಸಂಕ್ಷಿಪ್ತ ಸುದ್ದಿಗಳನ್ನು ಚಿತ್ರಗಳಲ್ಲ್ಲಿ ನೋಡಿ..

ಅಣು ವಿದ್ಯುತ್ ಸ್ಥಾವರ ವಿರುದ್ಧ ಹೋರಾಟ ನಿರಂತರ

ಅಣು ವಿದ್ಯುತ್ ಸ್ಥಾವರ ವಿರುದ್ಧ ಹೋರಾಟ ನಿರಂತರ

Atomic Energy Regulatory Board (AERB), Nuclear Power Corporation of India Ltd (NPCIL) ಹಾಗೂ Department of Atomic Energy (DAE) ಕೂಡಂಕುಳಂನ ಅಣು ಸ್ಥಾವರಕ್ಕೆ ಅಂತಿಮ ಕ್ಲಿಯರೆನ್ಸ್ ನೀಡಲಾಗಿದೆ.

ಕರ್ನಾಟಕಕ್ಕೆ ಎಷ್ಟು ಸಿಗಬಹುದು?

ಕರ್ನಾಟಕಕ್ಕೆ ಎಷ್ಟು ಸಿಗಬಹುದು?

ಕೂಡಂಕುಳಂ ಯೋಜನೆಯಡಿ 1300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ನಿಯಮದ ಪ್ರಕಾರ ವಿದ್ಯುತ್ ಸ್ಥಾವರ ಇರುವ ರಾಜ್ಯಕ್ಕೆ ಉತ್ಪಾದನೆಯ ಶೇ 50 ರಷ್ಟು ಉತ್ಪನ್ನ ಸೇರಲಿದ್ದು, ಉಳಿದದ್ದು ಬೇಡಿಕೆ ಆಧಾರದ ಮೇಲೆ ಕೇಂದ್ರ ಸರ್ಕಾರ ಹಂಚಿಕೆ ಮಾಡಲಿದೆ. ಕರ್ನಾಟಕ 220 ಮೆ.ವ್ಯಾ ಹಾಗೂ ಕೇರಳ 133 ಮೆ.ವ್ಯಾ ವಿದ್ಯುತ್ ಬೇಡಿಕೆ ಇಟ್ಟಿದೆ.

ಇತ್ತೀಚೆಗೆ ಕೂಡಂಕುಳಂ ಸ್ಥಾವರ ನಿಲ್ಲಿಸುವಂತೆ ಕೋರಿ ಹಾಕಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.
 ಸುಂದರ ಕೇಶವಿನ್ಯಾಸ ಸ್ಪರ್ಧೆ

ಸುಂದರ ಕೇಶವಿನ್ಯಾಸ ಸ್ಪರ್ಧೆ

ಟುಲ್ಕರಮ್ ನ ವೆಸ್ಟ್ ಬ್ಯಾಂಕ್ ಸಿಟಿಯಲ್ಲಿ ಸುಂದರ ಕೇಶವಿನ್ಯಾಸ ಸ್ಪರ್ಧೆ ಸೋಮವಾರ ನಡೆಯಿತು. ಸುಮಾರು ಏಳು ವರ್ಷಗಳ ನಂತರ ಪ್ಯಾಲೇಸ್ಟೀನ್ ಹಾಗೂ ಅರಬ್ ಇಸ್ರೇಲಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷ

ಫರಿದಾಬಾದಿನ ಬಿರುಸಿನ ಮಳೆ, ಗಾಳಿ

ಫರಿದಾಬಾದಿನ ಬಿರುಸಿನ ಮಳೆ, ಗಾಳಿ

ಫರಿದಾಬಾದಿನ ಬಿರುಸಿನ ಮಳೆ, ಗಾಳಿ ಚಳಿ ನಡುವೆ ಯುವತಿಯೊಬ್ಬಳು ಸ್ಕೂಟಿಯಲ್ಲಿ ಹೋಗುತ್ತಿರುವ ಚಿತ್ರ .PTI Photo

ಹೈದರಾಬಾದಿನಲ್ಲಿ ಪುರಸಭೆ ಸಂಗ್ರಾಮ

ಹೈದರಾಬಾದಿನಲ್ಲಿ ಪುರಸಭೆ ಸಂಗ್ರಾಮ

ಆಂಧ್ರಪ್ರದೇಶದಲ್ಲಿ ಸೀಮಾಂಧ್ರದಲ್ಲಿ ಟಿಡಿಪಿ, ತೆಲಂಗಾಣದಲ್ಲಿ ಕಾಂಗ್ರೆಸ್ ಪುರಸಭೆ, ಮುನ್ಸಿಪಲ್ ಚುನಾವಣೆ ಗೆದ್ದ ಸಂಭ್ರಮಾಚರಣೆ ನಡೆದಿದೆ. ಚಿತ್ರದಲ್ಲಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಪಿ. ಲಕ್ಷ್ಮಯ್ಯ ಅವರನ್ನು ಕಾಣಬಹುದು. PTI Photo

ಭೋಪಾಲ್ ನಲ್ಲಿ ಸಾವಿನಿಂದ ಬಚಾವ್

ಭೋಪಾಲ್ ನಲ್ಲಿ ಸಾವಿನಿಂದ ಬಚಾವ್

ಭೋಪಾಲ್ ನಲ್ಲಿ ಅಶೋಕ್ ಸಾಹು ಎಂಬ ಯುವಕನನ್ನು ಸಾವಿನಿಂದ ಬಚಾವ್ ಮಾಡಲಾಗಿದೆ. ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಸಾಹು ಯತ್ನಿಸಿದ್ದ, ಪೊಲೀಸರು ನೀರು ಸುರಿದು ರಕ್ಷಿಸಿದ್ದಾರೆ. PTI Photo

ಸಬ್ ಮೆರಿನ್ ಒಳಗೆ ಬ್ರಿಟಿಷ್ ಪಿನ್ಸ್

ಸಬ್ ಮೆರಿನ್ ಒಳಗೆ ಬ್ರಿಟಿಷ್ ಪಿನ್ಸ್

ಸಬ್ ಮೆರಿನ್ HMS ಅಲೈಯನ್ಸ್ ಒಳ ಹೊಕ್ಕಿರುವ ಬ್ರಿಟಿಷ್ ಪಿನ್ಸ್ ವಿಲಿಯಂ. ಇಂಗ್ಲೆಂಡಿನ ಗೊಸ್ಪಾರ್ಟ್ ನ ನೇವಿ ಸಬ್ ಮೆರಿನ್ ಮ್ಯೂಸಿಯಂನಿಂದ ಬಂದಿರುವ ಚಿತ್ರ.

English summary
Todays news stories in pics around the world: Tirunelveli : Anti-nuclear activists during the 1000th day of their protest against the Kudankulam Nuclear Power Plant at Idinthakarai village in Tirunelveli and Oneindia News brings to you interesting photographs from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X