ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಸುದ್ದಿ : ಬುರ್ಜ್ ಖಲೀಫಾದಿಂದ 'ಮಹಾ' ಜಿಗಿತ

By Mahesh
|
Google Oneindia Kannada News

ಬೆಂಗಳೂರು, ಏ.25 : ದುಬೈನಲ್ಲಿರುವ ಜಗತ್ತಿನ ಅತ್ಯಂತ ಎತ್ತರದ (2,722 ಅಡಿ ) ಗಗನಚುಂಬಿ ಕಟ್ಟಡ ದುಬೈನ ಬುರ್ಜ್ ಖಲೀಫಾದಿಂದ ಫ್ರಾನ್ಸಿನ ಇಬ್ಬರು ಬೇಸ್ ಜಂಪರ್ಸ್ ‌ಗಳು ಜಿಗಿದು ಇತ್ತೀಚೆಗೆ ವಿಶ್ವ ದಾಖಲೆ ಬರೆದಿದ್ದಾರೆ. ಈ ಮಹಾ ಜಂಪ್ ಚಿತ್ರಗಳು, ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಯೂಟ್ಯೂಬ್ ನಲ್ಲಿ 23 ಲಕ್ಷಕ್ಕೂ ಅಧಿಕ ಜನ ವಿಡಿಯೋ ವೀಕ್ಷಿಸಿದ್ದಾರೆ. ಜಂಪ್ ದೃಶ್ಯಗಳು ಹಂಚಿಕೆಯಾಗುತ್ತಿವೆ,

ಏ.21ರಂದು ಬೆಳಗ್ಗೆ ಫ್ರಾನ್ಸ್ ನ ವೃತ್ತಿಪರ ಬೇಸ್ ಜಂಪರ್ಸ್ ವಿನ್ಸ್ ರಫೆಟ್ ಮತ್ತು ಫ್ರೆಡ್ ಫ್ಯೂಗನ್ ಎಂಬವರು 828 ಮೀಟರ್ ಎತ್ತರದ ಕಟ್ಟಡ ಬುರ್ಜ್ ಖಲೀಫಾದಿಂದ ಎರಡು ಬಾರಿ ನೆಲಕ್ಕೆ ಹಾರಿ ದಾಖಲೆ ನಿರ್ಮಿಸಿದರು. ಈ ಮೂಲಕ ವಿನ್ಸ್ ರಫೆಟ್ ಮತ್ತು ಫ್ರೆಡ್ ಫ್ಯೂಗನ್ ಈ ಸಾಧನೆಯೊಂದಿಗೆ ಅವರ ದಾಖಲೆ ಗಿನ್ನಿಸ್ ಪುಸ್ತಕದಲ್ಲಿ ಸೇರ್ಪಡೆಯಾಗಿದ್ದಾರೆ.

ಈ ಹಿಂದೆ 2010ರಲ್ಲಿ ಎಮಿರೆಟ್ಸ್ ‌ನ ಜಂಪರ್ ‌ಗಳಾದ ನಾಸಿರ್ ನೆಯಾಡಿ ಮತ್ತು ಒಮರ್ ಅಲ್ ಹೆಗಲಾನ್ 672 ಮೀಟರ್ ಎತ್ತರದಿಂದ ಕೆಳಕ್ಕೆ ಹಾರಿ ವಿಶ್ವದಾಖಲೆ ನಿರ್ಮಿಸಿದ್ದರು. ಅವರ ಈ ದಾಖಲೆಯನ್ನು ವಿನ್ಸ್ ರಫೆಟ್ ಮತ್ತು ಫ್ರೆಡ್ ಫ್ಯೂಗನ್ ಮುರಿದಿದ್ದಾರೆ.

ಸ್ವಿಟ್ಝರ್ ‌ಲೆಂಡ್‌ ನ ಲಾವುಟೆರ್ ‌ಬೆಯ್ನೆನ್ ಪರ್ವತ ದುಬೈನ ಬುರ್ಜ್ ಖಲೀಫಾದಷ್ಟೇ ಎತ್ತರವನ್ನು ಹೊಂದಿದ್ದು, ಈ ಪರ್ವತದಿಂದ ಕೆಳಕ್ಕೆ ಜಿಗಿಯುವ ಮೂಲಕ ಸತತ ಅಭ್ಯಾಸ ನಡೆಸಿದ್ದ ವಿನ್ಸ್ ರಫೆಟ್ ಮತ್ತು ಫ್ರೆಡ್ ಫ್ಯೂಗನ್ ಅವರು ಬುರ್ಜ್ ಖಲೀಫಾ ತುದಿಯಿಂದ ಹಾರುವ ಯೋಜನೆ ಹಾಕಿಕೊಂಡಿದ್ದರು. ಉಳಿದಂತೆ, ಇನ್ನಷ್ಟು ಕುತೂಹಲಕಾರಿ ಚಿತ್ರಸುದ್ದಿಗಳನ್ನು ತಪ್ಪದೇ ನೋಡಿ..

ಬುರ್ಜ್ ಖಲೀಫಾದಿಂದ 'ಮಹಾ' ಜಿಗಿತ

ಬುರ್ಜ್ ಖಲೀಫಾದಿಂದ 'ಮಹಾ' ಜಿಗಿತ

ಕೆಲವು ಸಮಯಗಳ ಹಿಂದೆ ವಿನ್ಸ್ ರಫೆಟ್ ಮತ್ತು ಫ್ರೆಡ್ ಫ್ಯೂಗನ್ ಅವರು ದುಬೈನ ದೊರೆ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ಟೋಮ್ ಅವರನ್ನು ಸಂಪರ್ಕಿಸಿ ಅವರಿಂದ ಅನುಮತಿ ಪಡೆದಿದ್ದರು. ಇವರಿಗೆ ಸಹಾಯಕವಾಗಲು ಕಟ್ಟಡದ ತುದಿಯಲ್ಲಿ 3 1 ವಿಸ್ತೀರ್ಣದ ಪ್ಲಾಟ್ ‌ಫಾರ್ಮ್ ನಿರ್ಮಿಸಲಾಗಿತ್ತು.

ವಿನ್ಸ್ ರಫೆಟ್ ಮತ್ತು ಫ್ರೆಡ್ ಫ್ಯೂಗನ್ ಜಿಗಿತ

ಬುರ್ಜ್ ಖಲೀಫಾದಿಂದ ವಿನ್ಸ್ ರಫೆಟ್ ಮತ್ತು ಫ್ರೆಡ್ ಫ್ಯೂಗನ್ ಜಿಗಿದ ವಿಡಿಯೋ

ಮುಂಬೈನಲ್ಲಿ ಝಾಕಿರ್ ಗೆ ಸನ್ಮಾನ

ಮುಂಬೈನಲ್ಲಿ ಝಾಕಿರ್ ಗೆ ಸನ್ಮಾನ

ಮುಂಬೈನಲ್ಲಿ ತಬಲಾ ಮಾಂತ್ರಿಕ ಉಸ್ತಾದ್ ಝಾಕಿರ್ ಹುಸೇನ್ ಗೆ ಮಾಸ್ಟರ್ ದೀನಾನಾಥ್ ಮಂಗೇಷ್ಕರ್ ಪುರಸ್ಕಾರ ನೀಡುತ್ತಿರುವ ಭಾರತ ರತ್ನ ಲತಾ ಮಂಗೇಷ್ಕರ್

ಲಾಸ್ ಏಂಜಲೀಸ್ ನಲ್ಲಿ ರಾಕ್ ಸ್ಟಾರ್ಸ್

ಲಾಸ್ ಏಂಜಲೀಸ್ ನಲ್ಲಿ ರಾಕ್ ಸ್ಟಾರ್ಸ್

ಲಾಸ್ ಏಂಜಲೀಸ್: ಸ್ಲೇಯರ್ ನ ಕೆರಿ ಕಿಂಗ್(ಎಡ) ಗ್ಯಾರಿ ಹೊಲ್ಟ್ (ಬಲ) ಅವರು 6ನೇ ವಾರ್ಷಿಕ ರಿವಾಲ್ವರ್ ಗೋಲ್ಡನ್ ಗಾಡ್ಸ್ ಪ್ರಶಸ್ತಿ ಸಮಾರಂಭದಲ್ಲಿ ನೋಕಿಯಾ ಕ್ಲಬ್ ನಲ್ಲಿ ಸಂಗೀತ ಪ್ರದರ್ಶನ ನೀಡಿದರು.

ರೋಮ್ ನಲ್ಲಿ ಸೋಲಾರ್ ಪವರ್

ರೋಮ್ ನಲ್ಲಿ ಸೋಲಾರ್ ಪವರ್

ರೋಮ್ : ನೆವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಟ್ರೈನ್ ಗೆ ಶಕ್ತಿ ಒದಗಿಸಲು ಕಟ್ಟಡದ ಮೇಲ್ಚಾವಣಿ ಮೇಲೆ ಹೊದಿಸಲಾಗಿರುವ ಸೌರಶಕ್ತಿ ಫಲಕಗಳು. ಸುಮಾರು 3200 ಸೋಲಾರ್ ಪ್ಯಾನಲ್ ಗಳನ್ನು ಸುಮಾರು ನಾಲ್ಕು ಕಟ್ಟಡದ ರೂಫ್ ಟಾಪ್ ಮಾಡಲಾಗಿದೆ. ಇದರಿಂದ ಸುಮಾರು 0.7 ವ್ಯಾಟ್ ವಿದ್ಯುತ್ ಸಿಗುತ್ತಿದ್ದು, 992 ಬ್ಯಾರೆಲ್ ನಷ್ಟು ಇಂಧನ ಉಳಿತಾಯ ಮಾಡಲಾಗುತ್ತಿದೆ.

ತಂಜಾವೂರಿನಲ್ಲಿ ಭರತನಾಟ್ಯ ಪ್ರದರ್ಶನ

ತಂಜಾವೂರಿನಲ್ಲಿ ಭರತನಾಟ್ಯ ಪ್ರದರ್ಶನ

ತಂಜಾವೂರಿನ ಬೃಹದೇಶ್ವರ ದೇಗುಲದಲ್ಲಿ ಭರತನಾಟ್ಯ ಜುಗಲ್ ಬಂದಿ ಕಾರ್ಯಕ್ರಮ ಏ.26ರಂದು ನಡೆಯಲಿದೆ. ರಾಧಾ ಶ್ರೀಧರ್ ಅವರ ಶಿಷ್ಯೆಯರಾದ ಕುಮಾರಿ ಶ್ವೇತಾ ಹಾಗೂ ಸಿಂಧು ಪುರೋಹಿತ್ ಅವರು ನೃತ್ಯ ಮಾಡಲಿದ್ದಾರೆ.

English summary
Todays news stories in pics around the world: Todays news stories in pics around the world: Two French base jumpers Vince Reffet and Fred Fugen duo broke the Guinness World Record for their 828-metre jump from Burj Khalifa snatching the title from Emirati jumpers Nasser Al Neyadi and Omar Al Hegelan for their 672-metre base jump in 2010. Oneindia News brings to you interesting photographs from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X