ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳಿಗಳ ಹೊಸ ವರ್ಷಾಚರಣೆ ಇನ್ನಿತರ ಚಿತ್ರ ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ಏ.23 : ನೇಪಾಳದ ಹಿಂದೂಗಳು ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದಾರೆ. ಮಹಾಯಜ್ಞ ಸಾಂಪ್ರದಾಯಿಕ ಕ್ರಿಯೆಗಳನ್ನು ಮುಗಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕನ್ನಡಿಗರು ಅರ್ಚಕರಾಗಿರುವ ಕಠ್ಮಂಡುವಿನ ಪಶುಪತಿ ನಾಥ ದೇಗುಲದ ಪ್ರಾಂಗಣವನ್ನು ನೇಪಾಳಿಗಳು ದೀಪಗಳಿಂದ ಅಲಂಕರಿಸಿದ್ದಾರೆ.

ಲಕ್ಷ್ಮಿ ದೇವಿಗೂ ಕೂಡಾ ಇದೇ ಸಂದರ್ಭದಲ್ಲಿ ಮಹಾಪೂಜೆ ಸಲ್ಲಿಸಲಾಗಿದ್ದು, ಹೆಚ್ಚಿನ ಆದಾಯ, ಸುಖ ಶಾಂತಿ ನೆಮ್ಮದಿ ಕರುಣಿಸುವಂತೆ ಪ್ರಾರ್ಥಿಸಲಾಗಿದೆ. ಉಳಿದಂತೆ, ಚಿತ್ರಗಳಲ್ಲಿ ವಿಶ್ವ ಭೂ ದಿನಾಚರಣೆ, ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಪಂದ್ಯ, ವಾಷಿಂಗ್ಟನ್ ನಲ್ಲಿ ಯೋಧರಿಗೆ ತಯಾರಾದ ರೋಬೋ ಕೈ, ಕೇಂಬ್ರಿಡ್ಜ್ ರಾಣಿ ಮುಂತಾದ ಚಿತ್ರಗಳಿವೆ ತಪ್ಪದೇ ನೋಡಿ..

ನೇಪಾಳಿಗಳ ಹೊಸ ವರ್ಷಾಚರಣೆ

ನೇಪಾಳಿಗಳ ಹೊಸ ವರ್ಷಾಚರಣೆ

ನೇಪಾಳದ ಹಿಂದೂಗಳು ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದಾರೆ. ಮಹಾಯಜ್ಞ ಸಾಂಪ್ರದಾಯಿಕ ಕ್ರಿಯೆಗಳನ್ನು ಮುಗಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೇಂಬ್ರಿಡ್ಜ್ ನ ರಾಣಿ ಕೇಟ್ ಸಂಭಾಷಣೆ

ಕೇಂಬ್ರಿಡ್ಜ್ ನ ರಾಣಿ ಕೇಟ್ ಸಂಭಾಷಣೆ

ಕೇಂಬ್ರಿಡ್ಜ್ ನ ರಾಣಿ ಕೇಟ್ ಅವರು ಪುಟ್ಟ ಬಾಲಕಿಯ ಜತೆ ಸಂಭಾಷಣೆ ನಿರತರಾಗಿದ್ದಾರೆ. ಆಸ್ಟ್ರೇಲಿಯಾದ ಉಲೂರು ಪ್ರಾಂತ್ಯಕ್ಕೆ ಬಂದಿರುವ ಕೇಂಬ್ರಿಡ್ಜ್ ನ ರಾಜ ಪರಿವಾರ ಮೂರು ವಾರಗಳ ಕಾಲ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸ ಮಾಡಲಿದ್ದಾರೆ. ಪ್ರಿನ್ಸ್ ಜಾರ್ಜ್ ಗೆ ಇದು ಮೊದಲ ಸಾಗರೋತ್ತರ ಪ್ರವಾಸ ಎನಿಸಿದೆ.

ಮನಿಲಾದಲ್ಲಿ ಮಿಸ್ ಅರ್ಥ್ ಸ್ಪರ್ಧಿಗಳು

ಮನಿಲಾದಲ್ಲಿ ಮಿಸ್ ಅರ್ಥ್ ಸ್ಪರ್ಧಿಗಳು

ಫಿಲಿಪ್ಪೀನ್ಸ್ ನ ಮನಿಲಾದಲ್ಲಿ ಮಿಸ್ ಅರ್ಥ್ ಸೌಂದರ್ಯ ಸ್ಪರ್ಧೆ ನಡೆಯುತ್ತಿದ್ದು, ವಿಶ್ವ ಭೂ ದಿನಾಚಾರಣೆ ಸಂದೇಶ ಸಾರುತ್ತಿರುವ ರೂಪದರ್ಶಿಗಳು

ಭಾರತೀಯ ಇಂಜಿನಿಯರ್ ಸಂಶೋಧನೆ

ಭಾರತೀಯ ಇಂಜಿನಿಯರ್ ಸಂಶೋಧನೆ

ವಾಷಿಂಗ್ಟನ್: ಭಾರತೀಯ ಮೂಲದ ಇಂಜಿನಿಯರ್ ಕಪಿಲ್ ಡಿ. ಕೆ ಅವರು ರಕ್ಷಣಾ ಸಂಶೋಧನಾ ಕೇಂದ್ರ DARPA ನಲ್ಲಿ ಹೊಚ್ಚ ಹೊಸ ಉನ್ನತ ತಂತ್ರಜ್ಞಾನ ಸಾಧನವನ್ನು ಪರೀಕ್ಷಿಸುತ್ತಿದ್ದಾರೆ. ಗಾಯಗೊಂಡ ಯೋಧರಿಗೆ ಕೃತಕ ಕೈ ಜೋಡಣೆ ಮಾಡಲು ರೋಬೋಟಿಕ್ ತಂತ್ರಜ್ಞಾನ ಬಳಸಲಾಗುತ್ತಿದೆ. ಪರಿಪೂರ್ಣ ರೊಬೊಟ್ ATLAS ಕೂಡಾ ಇದೇ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡುತ್ತಿದೆ.AP/PTI Photo

ಚಾಂಪಿಯನ್ಸ್ ಲೀಗ್ ಉಪಾಂತ್ಯ ಪಂದ್ಯ

ಚಾಂಪಿಯನ್ಸ್ ಲೀಗ್ ಉಪಾಂತ್ಯ ಪಂದ್ಯ

ಮ್ಯಾಡ್ರಿಡ್: ಚಾಂಪಿಯನ್ಸ್ ಲೀಗ್ ಉಪಾಂತ್ಯ ಪಂದ್ಯದಲ್ಲಿ ಇಂಗ್ಲೆಂಡಿನ ಚೆಲ್ಸಿ ವಿರುದ್ಧ ಸ್ಪೇನಿನ ಅಟ್ಲೆಟಿಕೊ ಮ್ಯಾಡ್ರಿಡ್ ಸೆಣಸಾಟ ನಡೆಸಿದೆ. ಪಂದ್ಯದಲ್ಲಿ ಗೋಲು ಇಲ್ಲದೆ ಡ್ರಾ ಸಾಧಿಸಿಕೊಂಡಿವೆ. ಮತ್ತೊಂದು ಗುಂಪಿನಲ್ಲಿ ಸ್ಪೇನಿನ ರಿಯಲ್ ಮ್ಯಾಡ್ರಿಡ್ ತಂಡ ಜರ್ಮನಿಯ ಬಯಾನ್ ಮೂನಿಕ್ ವಿರುದ್ಧ ಸೆಣಸಲಿದೆ.

ಬಾಲಿವುಡ್ ನಟಿ ಮಲೈಕಾ ಯುಎಸ್ ಎಗೆ

ಬಾಲಿವುಡ್ ನಟಿ ಮಲೈಕಾ ಯುಎಸ್ ಎಗೆ

ಬಾಲಿವುಡ್ ನಟಿ ಮಲೈಕಾ ಯುಎಸ್ ಎ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಐಐಎಫ್ ಎ 2014ರ ಸಮಾರಂಭ ಫ್ಲೋರಿಡಾದಲ್ಲಿ ನಡೆಯಲಿದೆ.

ದಕ್ಷಿಣ ಕೊರಿಯಾ ಜಲ ದುರಂತದ ಕಹಿ ನೆನಪು

ದಕ್ಷಿಣ ಕೊರಿಯಾ ಜಲ ದುರಂತದ ಕಹಿ ನೆನಪು

ದಕ್ಷಿಣ ಕೊರಿಯಾ ಜಲ ದುರಂತದ ಕಹಿ ನೆನಪು ಇನ್ನೂ ಕಾಡುತ್ತಿದೆ. ಹಡಗು ಮುಳುಗಿ ಸುಮಾರು 150ಕ್ಕೂ ಅಧಿಕ ಜನ ಮೃತಪಟ್ಟಿದ್ದರೆ 170 ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಸಕ್ಕೆಂದು ತೆರಳಿದ್ದ ನೂರಕ್ಕೂ ಶಾಲಾ ಮಕ್ಕಳ ಜತೆಗೆ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.

English summary
Todays news stories in pics around the world: Nepalese Hindu devotee lights an oil lamp during the last day of a Mahayagya, holy rituals that last for seven days, near Pashupatinath temple in Katmandu, Nepal, Oneindia News brings to you interesting photographs from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X