ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟಿಕೆ ಪಿಸ್ತೂಲಿಂದ ಬ್ಯಾಂಕ್ ದರೋಡೆ ಮಾಡಿದ ಬಾಲಕ

By Srinath
|
Google Oneindia Kannada News

teen-boy-robs-german-bank-with-toy-gun-caught-while-fleeing-on-cycle
ಬರ್ಲಿನ್ (ಜರ್ಮನಿ), ಜ.27: ಜರ್ಮನ್ ಬ್ಯಾಂಕುಗಳು ಸುರಕ್ಷಿತ, ಅವುಗಳಿಗೆ ಹೆಚ್ಚು ಭದ್ರತೆಯಿರುತ್ತದೆ ಎಂಬ ನಂಬಿಕೆ ಮಣ್ಣುಪಾಲಾಗಿದೆ. 16 ವರ್ಷದ ಬಾಲಕನೊಬ್ಬ ಕಳೆದ ವಾರ ಕೈಯಲ್ಲಿ ಪಿಸ್ತೂಲು ಹಿಡಿದು, ಬ್ಯಾಂಕಿನೊಳಕ್ಕೆ ಪ್ರವೇಶಿಸಿದ್ದಾನೆ.

ಅದನ್ನು ಕಂಡುಬೆಚ್ಚಿಬಿದ್ದ ಸಿಬ್ಬಂದಿ ಅವನ ಆದೇಶವನ್ನು ಪಾಲಿಸುತ್ತಾ, ಬ್ಯಾಂಕ್ ದರೋಡೆಗೆ ಮೌನ ಸಾಕ್ಷಿಯಾಗಿ ನಿಂತಿದ್ದಾರೆ. ಆದರೆ ಅವನ್ನು ಕೈಯಲ್ಲಿ ಹಿಡಿದಿದ್ದು ನಿಜವಾದ ಪಿಸ್ತೂಲು ಅಲ್ಲ. ಬದಲಿಗೆ, ಅವನು ಆಟಕ್ಕಾಗಿ ಬಳಸುತ್ತಿದ್ದ ಪಿಸ್ತೂಲು.

ಆದರೂ ಸಲೀಸಾಗಿ ಬ್ಯಾಂಕ್ ದೋಚಿದ ಹದಿಹರಯದ ಬಾಲಕ ಹಣ ದೋಚಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಹಾಗೆ ಪಾರಾಗಲು ಅವನು ಬಳಸಿದ ಸಾಧನ ಅವನಿಗೆ ಕೈಕೊಟ್ಟಿದೆ. ಏಕೆಂದರೆ ಅಬೋಧ ಬಾಲಕ ಬ್ಯಾಂಕ್ ದೋಚಿದ ಬಳಿಕ ಪರಾರಿಯಾಗಲು ಬಳಸಿದ್ದು ಸೈಕಲ್ ಅನ್ನು. ಸೈಕಲ್ಲಿನಲ್ಲಿ ಎಷ್ಟೂ ಅಂತ ವೇಗವಾಗಿ ಪರಾರಿಯಾಗಲು ಸಾಧ್ಯ. ಸಿಬ್ಬಂದಿ ಮತ್ತು ಪೊಲೀಸರು ಅವನ ಮೇಲೆ ಮುಗಿಬಿದ್ದು, ಹಿಡಿದು ಹಾಕಿದ್ದಾರೆ.

ಜರ್ಮನಿಯ ದಕ್ಷಿಣ ಭಾಗದಲ್ಲಿರುವ Bad Fuessingನ ಬವೇರಿಯಾ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಂದ ಸಮೀಪದಲ್ಲೇ ಇರುವ ಆಸ್ಟ್ರಿಯಾಕ್ಕೆ ಪರಾರಿಯಾಗುವುದು ಬಾಲಕನ ಉದ್ದೇಶವಾಗಿತ್ತು. ಆದರೆ ಸೈಕಲ್ ಬಳಸಿದ್ದೇ ಅವನಿಗೆ ಮುಳುವಾಗಿದ್ದು, ಸುಲಭವಾಗಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.

English summary
A Teen boy robs German bank with toy gun but caught while fleeing on cycle. A 16-year-old boy held up a bank in Germany with his toy gun before making off with a four-figure sum, but was quickly arrested while trying to flee on a bicycle. The teenager tried to escape to Austria after robbing the bank in the Bavarian town of Bad Fuessing, southern Germany, but was arrested before he could reach the border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X