ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿ ಜತೆ ಮುನಿಸು: ಟಾಟಾ ಎಂಡಿ ಆತ್ಮಹತ್ಯೆಗೆ ಕಾರಣ

By Srinath
|
Google Oneindia Kannada News

Tata Motors MD Britain Karl Slym Quarreled With Wife Before suicide- Bangkok police
ಬ್ಯಾಂಕಾಕ್‌, ಜ.29: ಗಗನಚುಂಬಿ ಹೋಟೆಲಿನ ಮಹಡಿಯಿಂದ ಕಳೆದ ಭಾನುವಾರ ಹಾರಿಬಿದ್ದು ದಾರುಣ ಸಾವನ್ನಪ್ಪಿದ್ದ ಟಾಟಾ ಮೋಟರ್ಸ್ ಕಂಪನಿಯ ಎಂಡಿ ಕಾರ್ಲ್ ಸ್ಲಿಮ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಇದೀಗ ದೃಢಪಟ್ಟಿದೆ.

ಹೆಂಡತಿಯ (Sally Slym) ಜತೆ ಕೌಟುಂಬಿಕ ಕಲಹದಿಂದ ಜಗಳವಾಡಿಕೊಂಡಿದ್ದ Tata Motors Ltd. (TTMT) ಎಂಡಿ ಕಾರ್ಲ್ ಸ್ಲಿಮ್‌ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಬಲವಾದ ಪುರಾವೆಗಳು ಸಿಕ್ಕಿವೆ ಎಂದು ಬ್ಯಾಂಕಾಕ್‌ ಪೊಲೀಸರು ಹೇಳಿದ್ದಾರೆ. ಅಂದಹಾಗೆ, ಇವರಿಬ್ಬರದೂ 30 ವರ್ಷದಗಳ ದಾಂಪತ್ಯ.

51 ವರ್ಷದ ಕಾರ್ಲ್ ಸ್ಲಿಮ್‌ ಕಂಪನಿಯ ಸಭೆಯಲ್ಲಿ ಪಾಲ್ಗೊಳ್ಳಲು ಪತ್ನಿಯ ಜತೆಗೂಡಿ 2 ದಿನಗಳ ಹಿಂದೆ ಹೋಟೆಲಿನಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ರಾತ್ರಿ ದಂಪತಿ ಉಂಡು ಮಲಗುವ ಮುನ್ನ ಜಗಳವಾಡಿಕೊಂಡಿದ್ದರು. ತದನಂತರ ಪತ್ನಿ ನಿದ್ದೆಗೆ ಜಾರಿದ್ದಾರೆ. ಆದರೆ ಪತಿ ಕಾರ್ಲ್ ಸ್ಲಿಮ್‌ ಬೆಡ್ ರೂಮಿನಿಂದ ಹೊರಬಂದು Shangri-La ಹೋಟೆಲಿನ 22 ಮಹಡಿಯಿಂದ ಹಾರಿ ಬಿಟ್ಟು 4ನೇ ಮಹಡಿಯಲ್ಲಿದ್ದ ಸಜ್ಜಾ ಮೇಲೆ ಬಿದ್ದಿದ್ದಾರೆ. ಬಿದ್ದೇಟಿಗೆ ಅವರ ತಲೆ ಬುರುಡೆ ಚೂರಾಗಿದೆ.

ಭಾನುವಾರ ಬೆಳಗ್ಗೆ ಹೋಟೆಲ್ ಅಧಿಕಾರಿಗಳು ಬಂದು ತಿಳಿಸಿದಾಗಲೇ ಪತ್ನಿ Sally Slym ಅವರಿಗೆ ಪತಿ ಮೃತಪಟ್ಟಿರುವುದು ಗೊತ್ತಾಗಿದ್ದು. ಆದರೆ ನಿದ್ದೆ ಮಾಡುವುದಕ್ಕೂ ಮುನ್ನ ಪತ್ನಿ Sally, ಜಗಳಕ್ಕೆ ಸಂಬಂಧಪಟ್ಟಂತೆ ಥಾಯ್ ಭಾಷೆಯಲ್ಲಿ ಪತಿಗೆ ಪತ್ರ ಬರೆದು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪತ್ರದಲ್ಲಿದ್ದ ಅಂಶಗಳನ್ನು ಆಧರಿಸಿ, ಪತಿ-ಪತ್ನಿ ಮಧ್ಯೆ ಜಗಳ ನಡೆದು, ಕಾರ್ಲ್ ಸ್ಲಿಮ್‌ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಿದ್ದಾರೆ. ಆದರೆ ಇದರಲ್ಲಿ ಕೊಲೆ ಯತ್ನ ನಡೆದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಬ್ರಿಟನ್ ಮೂಲದ, 51 ವರ್ಷದ ಕಾರ್ಲ್ ಸ್ಲಿಮ್‌ ಅವರು 2012ರಲ್ಲಿ ಟಾಟಾ ಮೋಟರ್ಸ್ ಸಾರಥ್ಯ ವಹಿಸಿಕೊಂಡಿದ್ದರು. ಟಾಟಾ ಮೋಟರ್ಸ್ ಅನ್ನು ಸೇರುವ ಮೊದಲು ಕಾರ್ಲ್ ಸ್ಲಿಮ್‌ ಅವರು ಚೀನಾದ SGMW Motors (ಜಿಎಂ ಮೋಟರ್ಸ್ ಅಂಗ ಸಂಸ್ಥೆ) ಉಪಾಧ್ಯಕ್ಷರಾಗಿದ್ದರು. ( ಗಗನಚುಂಬಿ ಹೋಟೆಲಿಂದ ಬಿದ್ದು ಟಾಟಾ ಎಂಡಿ ಆತ್ಮಹತ್ಯೆ? )

English summary
Tata Motors MD Britain Karl Slym Quarreled With Wife Before suicide on Jan 27. Bangkok police say Slym could have taken the extreme step after reading the note by his wife that mentioned domestic problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X