ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪು ಹಣವಿಟ್ಟಿರುವ ಭಾರತೀಯರ ಪಟ್ಟಿ ಸಿದ್ಧ: ಸ್ವಿಸ್ ಸರ್ಕಾರ

By Mahesh
|
Google Oneindia Kannada News

ಜೂರಿಚ್/ನವದೆಹಲಿ, ಜೂ.22: ಪ್ರಮುಖ ಬೆಳವಣಿಗೆಯೊಂದರಲ್ಲಿ ತನ್ನ ದೇಶದ ಬ್ಯಾಂಕ್ ಗಳಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯರ ವಿವರ ನೀಡಲು ಸ್ವಿಟ್ಜರ್ಲೆಂಡ್ ಸರ್ಕಾರ ಒಪ್ಪಿಗೆ ಸೂಚಿಸಿದೆ. ಭಾರತೀಯ ಖಾತೆದಾರರ ಪಟ್ಟಿ ಸಿದ್ಧವಾಗಿದೆ ಎಂದು ಸ್ವಿಸ್ ಸರ್ಕಾರ ಹೇಳಿದೆ.

ಭಾರತ ಸರ್ಕಾರದ ನಿರಂತರ ಒತ್ತಡದ ನಂತರ ಇದೀಗ ಸ್ವಿಟ್ಜರ್ಲೆಂಡ್ ಸರ್ಕಾರ ತನ್ನ ದೇಶದ ಬ್ಯಾಂಕ್ ಗಳಲ್ಲಿರುವ ಭಾರತೀಯರ ಖಾತೆಗಳ ವಿವರ ನೀಡಲು ಭಾನುವಾರ ಒಪ್ಪಿಗೆ ನೀಡಿದೆ. ಈಗಾಗಲೇ ಕಪ್ಪುಹಣ ಹೊಂದಿರಬಹುದಾದ ಶಂಕಿತ ಭಾರತೀಯ ಖಾತೆದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿರುವ ಸ್ವಿಸ್ ಸರ್ಕಾರ, ಶೀಘ್ರದಲ್ಲಿಯೇ ಪಟ್ಟಿಯನ್ನು ಭಾರತ ಸರ್ಕಾರಕ್ಕೆ ನೀಡುವ ಸಾಧ್ಯತೆ ಇದೆ.[ಬಿಜೆಪಿ 15 ದಿನದಲ್ಲಿ ಕಪ್ಪು ಹಣ ವಾಪಸ್ ತರಲಿ]

ಕಪ್ಪುಹಣದ ವಾಪಸಾತಿಗಾಗಿ ಕಠಿಣ ಕ್ರಮ ಕೈಗೊಂಡಿದ್ದ ಎನ್ಡಿಎ ಸರ್ಕಾರ, ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ರಚನೆ ಮಾಡಿದೆ. ಕಪ್ಪುಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯ ಮೇರೆಗೆ ಕೇಂದ್ರ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು. ವಿಶೇಷ ತನಿಖಾ ತಂಡದ ಸತತ ಪ್ರಯತ್ನದಿಂದಾಗಿ ಸ್ವಿಸ್ ಸರ್ಕಾರ ಕಪ್ಪುಹಣ ಹೊಂದಿರುವ ಭಾರತೀಯರ ವಿವರ ನೀಡಲು ಮುಂದಾಗಿದೆ.

Swiss govt prepares list of Indians with suspected black money

ಸ್ವಿಸ್ ಬ್ಯಾಂಕ್ ಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕಪ್ಪುಹಣ ಇರಿಸಿರುವವರ ಪಟ್ಟಿಯಲ್ಲಿ ಭಾರತ 58ನೇ ಸ್ಥಾನದಲ್ಲಿದ್ದು, ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಹೊಂದಿರುವ ಕಪ್ಪುಹಣದ ಪ್ರಮಾಣ 14 ಸಾವಿರ ಕೋಟಿ ರು,(2.03 ಬಿಲಿಯನ್ ಸ್ವಿಸ್ ಫ್ರಾಂಕ್)ಗಳಿಗೂ ಅಧಿಕ ಎನ್ನಲಾಗಿದೆ.

ಸ್ವಿಸ್ ಬ್ಯಾಂಕ್ ಗಳಲ್ಲಿರುವ ವಿದೇಶೀಯರ ಠೇವಣಿ ಹಣದ ಪೈಕಿ ಭಾರತೀಯರ ಪಾಲು ಕೇವಲ ಶೇ. 0.15ರಷ್ಟು ಮಾತ್ರ. ಬ್ರಿಟನ್ ದೇಶದವರು 19 ಲಕ್ಷ ಕೋಟಿ ರುಪಾಯಿಯಷ್ಟು ಹಣವನ್ನ ವಿವಿಧ ಸ್ವಿಸ್ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟಿದ್ದಾರೆ. ಹಣದ ಪ್ರಮಾಣದ ವಿಚಾರದಲ್ಲಿ ಬ್ರಿಟನ್ ದೇಶವೇ ನಂಬರ್ ಒನ್ ಆಗಿದೆ.

ಸ್ವಿಟ್ಜರ್ಲೆಂಡ್ ನಲ್ಲಿ ಸುಮಾರು 283 ಬ್ಯಾಂಕುಗಳಲ್ಲಿರುವ ವಿದೇಶಿ ಹೂಡಿಕೆ ಮೊತ್ತ 1.6 ಟ್ರಿಲಿಯನ್ ಯುಎಸ್ ಡಾಲರ್ ಮೀರುತ್ತದೆ. 2012ರಲ್ಲಿ ಭಾರತ 70ನೇ ಸ್ಥಾನದಲ್ಲಿತ್ತು 2013ರಲ್ಲಿ ಶೇ 43ರಷ್ಟು ಅಧಿಕ ಹೂಡಿಕೆ ಕಂಡು ಬಂದಿದ್ದು ಈಗ 58ನೇ ಸ್ಥಾನಕ್ಕೇರಿದೆ (ಪಿಟಿಐ)

English summary
In a major boost to India's fight against black money, Switzerland has prepared a list of Indians suspected to have stashed un-taxed wealth in Swiss banks and the details are being shared with Indian government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X