ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಲಿಯಲ್ಲಿ ಪ್ರಬಲ ಭೂಕಂಪ; 6 ಮಂದಿ ಸಾವು

By Srinath
|
Google Oneindia Kannada News

ಚಿಲಿ, ಏ. 2: ದಕ್ಷಿಣ ಅಮೆರಿಕದ ಕರಾವಳಿ ಭಾಗಗಳಲ್ಲಿ ರಿಕ್ಟರ್ ಮಾಪಕದಲ್ಲಿ ಭಾರಿ ಎನ್ನಬಹುದಾದ 8.2 ಪ್ರಮಾಣದ ಭೂಕಂಪ ಸೋಮವಾರ ರಾತ್ರಿ (ಏಪ್ರಿಲ್ 1) ಸಂಭವಿಸಿದ್ದು ಇದರಿಂದ ಸುನಾಮಿ ಎದುರಾಗುವ ಎಚ್ಚರಿಕೆ ನೀಡಲಾಗಿದೆ.

ಚಿಲಿಯ ಉತ್ತರ ಕರಾವಳಿಯಲ್ಲಿ ಈ ಪ್ರಮಾಣದ ಭೂಕಂಪ ಸಂಭವಿಸುತ್ತಿದ್ದಂತೆ ಸ್ಥಳೀಯ ಆಡಳಿತ ಸುನಾಮಿ ಅಪಾಯದ ಗಂಟೆ ಬಾರಿಸಿದ್ದು, ಸ್ಥಳೀಯ ನಿವಾಸಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತಲ್ಲೀನವಾಗಿದೆ. ಪೆರು ಮತ್ತು ಬೊಲಿವಿಯಾದಲ್ಲೂ ಕಟ್ಟಡಗಳು ಧರೆಗುರುಳಿವೆ. ರಸ್ತೆಗಳು ಕುಸಿಯತೊಡಗಿವೆ. ಭೂಕಂಪದಿಂದ 6 ಮಂದಿ ಸಾವನ್ನಪ್ಪಿದ್ದಾರೆ.

South America Chile hit by quake sparks Tsunami warning

ಕಳೆದ 2 ವಾರಗಳಿಂದಲೂ ಈ ಭಾಗಗಳಲ್ಲಿ ಭೂಕಂಪ ಆಗುತ್ತಿರುವುದು ದಾಖಲಾಗುತ್ತಿತ್ತು. ಆದರೆ ಸ್ಥಳೀಯ ಕಾಲಮಾನದ ಪ್ರಕಾರ ನಿನ್ನೆ ರಾತ್ರಿ 8.46 ನಿಮಿಷದಲ್ಲಿ ಇಖಿಕಿ ಎಂಬ ಚಿಲಿ ಪಟ್ಟಣದಲ್ಲಿ ಕೇಂದ್ರಿತವಾದ ಭಾರಿ ಭೂಕಂಪ ಆಗಿದೆ. ಕರಾವಳಿ ಭಾಗದಲ್ಲಿರುವ ಪಟ್ಟಣಗಳ ಮೇಲೆ 2 ಮೀಟರ್ ಎತ್ತರದ (ಆರೇಳು ಅಡಿ) ಸುನಾಮಿ ಅಲೆಗಳು ಬೀಸುತ್ತಿವೆ ಎಂದು ಅಮೆರಿಕದ ಭೂ ಸರ್ವೇಕ್ಷಣಾ ಇಲಾಖೆ ತಿಳಿಸಿದೆ.

ಇದರಿಂದ ಲ್ಯಾಟಿನ್ ಅಮೆರಿಕದ ಫೆಸಿಫಿಕ್ ಕರಾವಳಿಯ ಎಲ್ಲ ಪ್ರದೇಶಗಳಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ. ಚಿಲಿಯಲ್ಲಿ ಭೂಕಂಪ ಸಾಮಾನ್ಯವಾಗಿದೆ. 2010ರಲ್ಲಿ ದಕ್ಷಿಣ ಚಿಲಿಯಲ್ಲಿ ಸಂಭವಿಸಿದ ಭೂಕಂಪದಿಂದ 500 ಮಂದಿ ಸಾವನ್ನಪ್ಪಿ, 2 ಲಕ್ಷಕ್ಕೂ ಅಧಿಕ ಮನೆಗಳು ಧರೆಗುರುಳಿದ್ದವು. 1960ರಲ್ಲಿ ಅತ್ಯಧಿಕ 9.5 ಪ್ರಮಾಣದ ಭೂಕಂಪ ಚಿಲಿಯಲ್ಲಿ ಸಂಭವಿಸಿತ್ತು.

English summary
South America Chile hit by quake sparks Tsunami warning. A powerful magnitude-8.2 earthquake struck off Chile's northern coast on Tuesday night, and officials ordered an evacuation of coastal areas before an expected tsunami. There were no immediate reports of injuries or damage from the tremor, which also shook buildings in parts of nearby Peru and Bolivia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X